ಮೈಸೂರು,ಮೇ,24,2021(www.justkannada.in): ಮಹಾನಗರ ಪಾಲಿಕೆ ನೌಕರರ ಸಾವಿಗೆ ಪಾಲಿಕೆ ಆಯುಕ್ತೆ ಶಿಲ್ಪನಾಗ್ ಅವರು ಮಿಡಿದಿದ್ದಾರೆ.
ಮೃತ ರವಿ ಹಾಗೂ ವಿನೋದ್ ಅವರ ಸಾವಿಗೆ ಕಂಬನಿ ಮಿಡಿದಿರುವ ಆಯುಕ್ತೆ ಶಿಲ್ಪಾನಾಗ್ ಅವರು ಖುದ್ದು ನಿವಾಸಕ್ಕೆ ಭೇಟಿ ನೀಡಿ ಪೋಷಕರಿಗೆ ಸಾಂತ್ವಾನ ಹೇಳಿದ್ದಾರೆ.
ರವಿ ಅವರ ಜ್ಯೋತಿನಗರದ ಪೌರ ಕಾರ್ಮಿಕರ ನಿವಾಸಕ್ಕೆ ಭೇಟಿ ನೀಡಿರುವ ಆಯುಕ್ತೆ ಶಿಲ್ಪಾನಾಗ್ ಹಾಗೂ ಅಧಿಕಾರಿಗಳನ್ನು ಕಂಡ ಸತ್ಯಮ್ಮ ಅವರು ಬಿಕ್ಕಿ ಅಳಲಾರಂಭಿಸಿದ್ದಾರೆ. ತನ್ನ ಮಗನನ್ನ ಕಳೆದುಕೊಂಡ ಕುರಿತು ಗೋಳಾಡಿದ್ದಾರೆ. ಈ ವೇಳೆ ರವಿ ಅವರ ತಾಯಿ ಸತ್ಯಮ್ಮ ಅವರನ್ನ ಬಿಗಿದಪ್ಪಿದ ಶಿಲ್ಪಾನಾಗ್, ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡುವುದರ ಜೊತೆಗೆ ಕಣ್ಣೀರು ಒರೆಸಿದ್ದಾರೆ. ರವಿ ಅವರನ್ನ ಉಳಿಸಿಕೊಳ್ಳುವ ನಮ್ಮ ಯತ್ನ ವಿಫಲವಾಗಿದೆ ಎಂದು ಮರುಗಿದ್ದಾರೆ.
ಮೇ.3 ರಂದು ಮೃತಪಟ್ಟ ರವಿ ಚಾಲಕರಾಗಿದ್ದು, ಅವರ ಸಾವು ಅತೀವ ದುಃಖ ತಂದಿದೆ ಎಂದ ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ರವಿ ತಾಯಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇದೇ ವೇಳೆ ಭಾರತ್ ನಗರದಲ್ಲಿರುವ ಪಾಲಿಕೆಯ ಫಾಗಿಂಗ್ ವಾಹನದ ಚಾಲಕ ವಿನೋದ್ ಮನೆಗೂ ಭೇಟಿ ನೀಡಿ, ಅವರ ತಂದೆ ಗೋಪಾಲ್ ಮತ್ತು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಜೊತೆಗೆ ಎರಡೂ ಕುಟುಂಬದವರಿಗೂ ಪಾಲಿಕೆ ವತಿಯಿಂದ ಪರಿಹಾರದ ಚೆಕ್ ವಿತರಿಸಿದರು.
ENGLISH SUMMARY….
IAS officer pacifies family of the deceased MCC worker
Mysuru, May 24, 2021 (www.justkannada.in): Mysore City Corporation Commissioner visited the residence of MCC staff Ravi and Vinod who lost their lives due to the COVID-19 Pandemic and consoled the family members.
MCC Commissioner Shilpanag visited the residence of Ravi in Jyothinagar along with a few officials and pacified Ravi’s mother Satyamma. She expressed her condolences and asked them to be brave. She also visited the residence of another worker Vinod in Bharath Nagar, who was working as a driver of fogging vehicle who also lost his life due to the pandemic and pacified his father Gopal and other family members. Compensation cheques were given to the family members on the occasion.
Keywords: MCC/ Commissioner/ Shilpanag/ visits workers families/ compensation cheque distributed/ pacified
Key words: mysore city corporation-worker-death- compensation- IAS officer