MYSORE CITY: ಕಾಣೆಯಾಗಿದೆ ಫುಟ್‌ ಪಾತ್‌ ..!

If the story is about the footpaths at prominent places in the city, the residences of the high and powerful in residential areas like Kuvempunagar, Saraswathipuram are encroached upon by footpaths outside their lavish, structured houses.

 

If the story is about the footpaths at prominent places in the city, the residences of the high and powerful in residential areas like Kuvempunagar, Saraswathipuram are encroached upon by footpaths outside their lavish, structured houses.

 

ಮೈಸೂರು, ಜು.09,2024: (www.justkannada.in news) ನಗರದ ಹೆಚ್ಚಿನ ಭಾಗಗಳು – ವ್ಯಾಪಾರ, ಪ್ರವಾಸೋದ್ಯಮ ಮತ್ತು ಪಾರಂಪರಿಕ ಕಟ್ಟಡಗಳಿಗೆ ಸಂಬಂಧಿಸಿದ ಕಾರಣಗಳಿಗಾಗಿ ಜಾಗತಿಕ ನಕ್ಷೆಯಲ್ಲಿ ಗುರುತಿಸಲ್ಪಟ್ಟಿದೆ. ಈ ಕಾರಣಕ್ಕಾಗಿ ಮೈಸೂರು ನಗರಕ್ಕೆ ನಿತ್ಯ ಪ್ರವಾಸಿಗರು ಲಗ್ಗೆ ಇಡುತ್ತಿರುತ್ತಾರೆ. ವಾರಾಂತ್ಯದಲ್ಲಿ ಇದು ದುಪಟ್ಟುಗೊಳ್ಳುತ್ತದೆ.

ಆದರೆ ವಿಪರ್ಯಾಸವೆಂದರೆ ಇಂಥ ಮೈಸೂರು ನಗರದಲ್ಲಿ ಪಾದಚಾರಿ ಮಾರ್ಗಗಳೇ ಇಲ್ಲದಿರುವುದು. ನಿಜವಾಗಿಯೂ ಫುಟ್‌ಪಾತ್‌ಗಳು ಎಂಬುದು ಕನ್ನಡಿಯೊಳಗಿನ ಗಂಟು ಎಂಬಾಂತಾಗಿದೆ. ಕೇವಲ ನೆಪ ಮಾತ್ರಕ್ಕೆ ಇಲ್ಲಿ ಪಾದಚಾರಿ ಮಾರ್ಗವಿದೆ. ಆದರೆ ಬಳಕೆಗೆ ಅಸಾಧ್ಯ.

ಇರುವ ಫುಟ್‌ ಪಾತ್‌ ಕಳಪೆ ಸ್ಥಿತಿಯಲ್ಲಿವೆ, ವ್ಯಾಪಾರಸ್ತರು, ಪ್ರಭಾವಿಗಳಿಂದ ಕಾನೂನಿನ ಭಯವಿಲ್ಲದೆ ಈ ಜಾಗ ಅತಿಕ್ರಮಿಸಲ್ಪಟ್ಟಿದೆ.

ವಾಸ್ತವವಾಗಿ, ಪಾದಚಾರಿಗಳು ಸುರಕ್ಷಿತವಾಗಿ ನಡೆಯಲು ಫುಟ್‌ಪಾತ್‌ಗಳು ನಿರ್ಮಿಸಲಾಗಿದೆ.  ಆದರೆ ಈ ಉದ್ದೇಶದ ಜಾರಿಯ ಕೊರತೆ ಗಮನಾರ್ಹವಾಗಿದೆ. ಕೆಲ ಅಪರೂಪದ ಸಂದರ್ಭಗಳಲ್ಲಿ ಪಾಲಿಕೆ ಅಧಿಕಾರಿಗಳು ರಸ್ತೆಗಿಳಿದು ಫುಟ್‌ ಪಾತ್‌ ಒತ್ತುವರಿದಾರರನ್ನು ತೆರವುಗೊಳಿಸುವ  ಕೆಲಸ ಮಾಡುತ್ತಾರೆ. ಆದರೆ ಕೆಲ ದಿನಗಳ ಬಳಿಕ ಮತ್ತೆ ಯಥಾಸ್ಥಿತಿಗೆ ಅದು ಮರಳುತ್ತದೆ. ಹಾಗಾಗಿ ಅಧಿಕಾರಿಗಳ ಈ ನಡೆ  ಸಾರ್ವಜನಿಕರ ಮೆಚ್ಚುಗೆ ಪಡೆಯಲು ಮಾಡುವ  ನಾಟಕೀಯ ಪ್ರದರ್ಶನ ಎಂಬುದು ಜನತೆಗೆ ಮನದಟ್ಟಾಗಿದೆ.

ನಗರದ ಪ್ರಮುಖ ಸ್ಥಳಗಳಲ್ಲಿನ ಪಾದಚಾರಿ ಮಾರ್ಗಗಳದ್ದು ಈ ಕಥೆಯಾದರೆ, ಕುವೆಂಪುನಗರ, ಸರಸ್ವತಿಪುರಂ ನಂಥ ಜನ ವಸತಿ ಪ್ರದೇಶಗಳಲ್ಲಿ ಉನ್ನತ ಮತ್ತು ಶಕ್ತಿಶಾಲಿಗಳ ನಿವಾಸಗಳು ಅವರ ಅದ್ದೂರಿ , ರಚನಾತ್ಮಕ ಮನೆಗಳ ಹೊರಗೆ ಫುಟ್‌ಪಾತ್‌ಗಳು ಅತಿಕ್ರಮಿಸಿರುತ್ತವೆ.

ಬಹುತೇಕ ಫುಟ್‌ಪಾತ್‌ಗಳು ಅತಿಕ್ರಮಣ ಅಥವಾ ಅಸಮವಾಗಿವೆ. “ಫುಟ್‌ಪಾತ್” ಎಂಬ ವ್ಯಾಖ್ಯಾನಕ್ಕೆ ಹತ್ತಿರ ಬರುವ ಯಾವುದೇ ಲಕ್ಷಣಗಳಿಲ್ಲ. ಪರಿಣಾಮ, ಮಕ್ಕಳು, ಹಿರಿಯರು ಹಾಗೂ ವಿಶೇಷಚೇತನರು ರಸ್ತೆಗಿಳಿದರೆ ಅತಿವೇಗದ ವಾಹನಗಳ ಭೀತಿಯಲ್ಲೇ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಹಿರಿಯ ನಾಗರಿಕರ ಬಗ್ಗೆ ಯೋಚಿಸಿದರೆ ಅವರಿಗೆ ಬೇರೆ ಯಾರೂ ತೊಂದರೆ ಕೊಡುವ ಅಗತ್ಯವಿಲ್ಲ. ಫುಟ್ ಪಾತ್ ಗಳೇ ಅವರ ಪಾಲಿಗೆ ದೊಡ್ಡ ವಿಲನ್.‌  ಸಮತಟ್ಟಿಲ್ಲದೆ ಪಾದಚಾರಿ ಮಾರ್ಗಗಳಿಂದ ಅವರು ಸುಲಭವಾಗಿ ಮೂಳೆ ಮುರಿದುಕೊಳ್ಳುವ ಅಪಾಯ ಎದುರಿಸುತ್ತಿದ್ದಾರೆ.

ಚೈನ್ ಸ್ನ್ಯಾಚರ್‌ಗಳಿಗೂ ಫುಟ್‌ಪಾತ್‌ಗಳ ಕೊರತೆ ಉತ್ತಮ ವಾತಾವರಣ ನಿರ್ಮಿಸಿದೆ.  ಫುಟ್‌ಪಾತ್‌ಗಳಿಲ್ಲದ ರಸ್ತೆಗಳಲ್ಲಿ ನಡೆದುಕೊಂಡು ಹೋಗುವಾಗ ಅಥವಾ ಕಳಪೆ ಫುಟ್‌ಪಾತ್‌ಗಳಿಂದಾಗಿ ಪಾದಾಚಾರಿಗಳು ರಸ್ತೆಗಿಳಿದಾಗ ಹೆಚ್ಚಿನ ಚೈನ್-ಸ್ನ್ಯಾಚಿಂಗ್ ಪ್ರಕರಣಗಳು ಸಂಭವಿಸಿವೆ.

ದೈಹಿಕವಾಗಿ ಅಶಕ್ತರ ಬಗ್ಗೆ ಯೋಚಿಸಿದರೆ ಸಂಕಟವಾಗುತ್ತದೆ.   ಮೈಸೂರಿನ ಯಾವುದೇ ಫುಟ್‌ಪಾತ್‌ , ಎಲ್ಲೇ ಇದ್ದರೂ ಸರಿ ಅವು ಯಾವುವು ಗಾಲಿಕುರ್ಚಿ ಸ್ನೇಹಿಯಲ್ಲ, ನಗರದ ಪಾದಚಾರಿ ಮಾರ್ಗ ಹೇಗಿದೆ ಎಂದರೆ ಯಾರೊಬ್ಬರು ಕನಿಷ್ಠ ೫೦೦ ಮೀಟರ್‌ ದೂರವನ್ನು ಫುಟ್‌ ಪಾತ್‌ ನಲ್ಲಿ ಸರಾಗವಾಗಿ ನಡೆಯಲಾಗದು. ಅಡೆತಡೆಯ ಕಾರಣ ಅವರು ಮುಂದೆ ಹೋಗಲು ರೋಡಿಗಿಳಿಯುವುದು ಅನಿವಾರ್ಯ ಎಂಬಂತಾಗಿದೆ.

key words: Mysore city, Missing footpath

SUMMARY: 

Most parts of City, for reasons related to trade, tourism and heritage buildings – are marked on the global map. For this reason, tourists flock to Mysuru city every day. It doubles over the weekend.

But the irony is that there are no footpaths in such a city of Mysore. In fact, footpaths are like a knot in a mirror. There is a footpath here just as an excuse. But impossible to use.

If the story is about the footpaths at prominent places in the city, the residences of the high and powerful in residential areas like Kuvempunagar, Saraswathipuram are encroached upon by footpaths outside their lavish, structured houses.