ಪತ್ತೆಯಾದ ಮಾಲುಗಳನ್ನ ವಾರಸುದಾರರಿಗೆ ಹಿಂದಿರುಗಿಸಿದ ಮೈಸೂರು ನಗರ ಪೊಲೀಸರು…

ಮೈಸೂರು,ಜು,2,2019(www.justkannada.in): ಮೈಸೂರು ನಗರ ಪೊಲೀಸ್ ಇಲಾಖೆವತಿಯಿಂದ  ಪತ್ತೆಯಾದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು.

ಪತ್ತೆಯಾದ ಮಾಲುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮವನ್ನ ಮೈಸೂರಿನ ನಗರ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ, ಡಿಸಿಪಿ ಮುತ್ತುರಾಜ್, ಸಿಎಆರ್ ಡಿಸಿಪಿ ಚೆನ್ನಯ್ಯ ಭಾಗಿಯಾಗಿದ್ದರು. ಪತ್ತೆಹಚ್ಚಲಾಗಿದ್ದ  ಕಳವಾದ ಮಾಲುಗಳನ್ನು ವಾರುಸುದಾರರಿಗೆ ಹಿಂದುರಿಗಿಸಲಾಯಿತು.

ಇದೇ ವೇಳೆ ಅಪರಾಧ ಪ್ರಕರಣಗಳ ಕುರಿತು ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ  ಅವರು, 2018 ಮತ್ತು 19ನೇ ಸಾಲಿನಲ್ಲಿ ಒಟ್ಟು 909 ಪ್ರಕರಣಗಳು ದಾಖಲಾಗಿವೆಈ ಪೈಕಿ 511 ವಿವಿಧ ಸ್ವತ್ತು ಕಳುವು ಪ್ರಕರಣಗಳನ್ನ ಪತ್ತೆ ಮಾಡಲಾಗಿದೆ. ಈ ಅವಧಿಯಲ್ಲಿ 415 ಆರೋಪಿಗಳ ಬಂಧಿಸಲಾಗಿದೆ . ಕಳುವಾದ ಒಟ್ಟು ಮೌಲ್ಯ 10,47,80,672 ರೂಪಾಯಿ. 5,96,67,763 ರೂಪಾಯಿ ಮೌಲ್ಯದ ಮಾಲುಗಳನ್ನ ವಶ ಪಡೆಯಲಾಗಿದೆ ಎಂದು ತಿಳಿಸಿದರು.

Key words: Mysore- city –police- returned – Stolen- items