ಮೈಸೂರು,ಮಾರ್ಚ್,29,2025 (www.justkannada.in): ಸ್ವಚ್ಛ ಸರ್ವೇಕ್ಷಣ ಅಭಿಯಾನ ಹಿನ್ನೆಲೆ, ಸಾಂಸ್ಕೃತಿಕ ನಗರಿ ಮೈಸೂರು ಮತ್ತೊಮ್ಮೆ ಸ್ವಚ್ಛ ನಗರಿ ಬಿರುದು ಪಡೆದುಕೊಳ್ಳಲು ಮೈಸೂರಿಗರು ಕೈ ಜೋಡಿಸಿ ಎಂದು ಅಂತಾರಾಷ್ಟ್ರೀಯ ಖೋ ಖೋ ಆಟಗಾರ್ತಿ ಹಾಗೂಸ್ವಚ್ಛ ಸರ್ವೇಕ್ಷಣ ಅಭಿಯಾನದ ರಾಯಭಾರಿ ಬಿ.ಚೈತ್ರ ಮನವಿ ಮಾಡಿದ್ದಾರೆ.
2016ರಲ್ಲಿ ಮೈಸೂರು ಸ್ವಚ್ಛ ನಗರಿ ಬಿರುದು ಪಡೆದುಕೊಂಡಿತ್ತು. ಆದರೆ ಕಳೆದ ವರ್ಷ ಸ್ವಚ್ಛ ನಗರಿಯಲ್ಲಿ ಮೈಸೂರು 27ನೇ ಸ್ಥಾನಕ್ಕೆ ಬಂದಿತ್ತು. ಮೈಸೂರು ಸ್ವಚ್ಛ ನಗರಿಯಾಗಲು ಒಬ್ಬರಿಂದ ಸಾಧ್ಯವಿಲ್ಲ. ಎಲ್ಲರ ಸಹಕಾರದಿಂದ ನಾವು ಮತ್ತೊಮ್ಮೆ ಸ್ವಚ್ಛ ನಗರಿ ಸ್ಥಾನ ಪಡೆಯಬಹುದು. ಇದೀಗ ಮತ್ತೆ ಸ್ವಚ್ಛ ಸರ್ವೇಕ್ಷಣೆ ಪ್ರಾರಂಭವಾಗಿದೆ.
ಸ್ವಚ್ಛತೆ ಕಾಪಾಡುವುದರೊಂದಿಗೆ ಹಸಿ, ಒಣ ವಿಂಗಡಿಸಿ ಕಸದ ವಾಹನದಲ್ಲೇ ಕಸ ಹಾಕಿ. ಮೈಸೂರು ಸ್ವಚ್ಛತೆಗೆ ಉತ್ತಮ ಪ್ರತಿಕ್ರಿಯೆ ನೀಡಿ. ಮತ್ತೊಮ್ಮೆ ಸ್ವಚ್ಚನಗರಿ ಪಟ್ಟಕ್ಕೇರಲು ಮೈಸೂರು ಜನತೆ ಕೈ ಜೋಡಿಸಿ ಎಂದು ಬಿ ಚೈತ್ರ ಮನವಿ ಮಾಡಿದ್ದಾರೆ.
Key words: Mysore, clean city, once again, Kho Kho player, B. Chaitra