ಮೈಸೂರು,ಏಪ್ರಿಲ್,2,2024 (www.justkannada.in): ಕೇಂದ್ರ ಸರ್ಕಾರ ರಾಜ್ಯಕ್ಕೆ 1.8 ಲಕ್ಷ ಕೋಟಿ ತೆರಿಗೆ ವಂಚನೆ ಮಾಡಿದೆ. ಜೊತೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರಿಗೆ ಸಂಕಷ್ಟ ನೀಡುತ್ತಿದೆ ಎಂದು ಟೀಕಿಸಿದ್ದ ಸಿಎಂ ಸಿದ್ದರಾಮಯ್ಯಗೆ ಮೈಸೂರು ಬಿಜೆಪಿ ಜಿಲ್ಲಾ ವಕ್ತಾರ ಮೋಹನ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ ಮೋಹನ್, 14 ಬಾರಿ ಹಣಕಾಸು ಸಚಿವರಾಗಿರುವ ಸಿದ್ದರಾಮಯ್ಯನವರಿಗೆ ಬೆಲೆ ಏರಿಕೆ ಬಗ್ಗೆ ಮಾಹಿತಿ ಸಂಪೂರ್ಣವಾಗಿ ಇರಬೇಕು. ಪೆಟ್ರೋಲ್ ಬೆಲೆ ಬಗ್ಗೆ ಮಾತನಾಡಿದ್ದಾರೆ. ಎರಡು ಮೂರು ರೂಪಾಯಿ ಕಡಿಮೆ ಮಾಡಿದ್ದಾರೆ ಅಷ್ಟೇ ಆದರೆ 2014ರಲ್ಲಿ ಎಷ್ಟಿತ್ತು ಎಂದು ಹೇಳಿದ್ದಾರೆ. ಪೆಟ್ರೋಲ್ ಒಂದು ಲೀಟರ್ ಗೆ 100 ರೂ. ಇದ್ದರೆ ಅದರಲ್ಲಿ 40 ರೂಪಾಯಿ ರಾಜ್ಯ ಸರ್ಕಾರಕ್ಕೆ ಹೋಗುತ್ತದೆ. ಬೇಕಾದರೆ ಬಿಲ್ ತೆಗೆದು ನೋಡಲಿ. ಸಿದ್ದರಾಮಯ್ಯ ಜನರ ದಿಕ್ಕು ತಪ್ಪಿಸುವಂತ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಇತ್ತೀಚಿಗೆ ಛಾಪಾ ಕಾಗದಗಳ ಮೇಲೂ ಬೆಲೆ ಹೆಚ್ಚಳ ಮಾಡಿದ್ದಾರೆ. ಇವರ ಗ್ಯಾರಂಟಿಗಳಿಗೆ ಹಣ ಸರಿದೂಗಿಸಲು ಅಗತ್ಯ ವಸ್ತುಗಳ ಮೇಲೆ ಬೆಲೆ ಏರಿಕೆ ಮಾಡಿರುವುದು ರಾಜ್ಯ ಸರ್ಕಾರ. ಸಿದ್ದರಾಮಯ್ಯ ಅಲ್ಲ ಇವರು ಸುಲಿಗೆರಾಮಯ್ಯ ಎಂದು ಮೋಹನ್ ನಿಡಿಕಾರಿದರು.
ಸ್ಟ್ಯಾಂಪ್ ಪೇಪರ್ ಬೆಲೆ ಮೇಲೆ 500% ಬೆಲೆ ಏರಿಕೆ ಮಾಡಿದ್ದಾರೆ. ರಾಜ್ಯ ಸರ್ಕಾರ ಇದರ ಬಗ್ಗೆ ಮಾತನಾಡದೆ ಸುಮ್ಮನೆ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಎಸ್ ಆರ್ ವ್ಯಾಲ್ಯೂ ಏರಿಕೆಯಿಂದ ಮನೆಯ ಕಂದಾಯ ಇದೀಗ ದುಪ್ಪಟ್ಟಾಗಿದೆ. ಖಾಲಿ ಜಾಗದ ಮೇಲೆ ತೆರಿಗೆ ಪಡೆಯುತ್ತಿರುವ ಮೈಸೂರು ಮಹಾನಗರ ಪಾಲಿಕೆ ಯಾವುದಾದರು ಒಂದು ಜಾಗವನ್ನು ಸ್ವಚ್ಚ ಮಾಡಿದ್ದೀರಾ.? ತೆರಿಗೆ ಮೇಲೆ 30% ಹೆಚ್ಚಳ ಮಾಡಿದ್ದಾರೆ. ಸಿಎಂ ಈ ಕೂಡಲೇ ಮೈಸೂರು ಮಹಾನಗರಪಾಲಿಕೆಗೆ ಸೂಚಿಸಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ಮೋಹನ್ ಆಗ್ರಹಿಸಿದರು.
Key words: mysore, CM Siddaramaiah, BJP, Mohan