ಮೈಸೂರು, ಜು.22, 2021 : (www.justkannada.in news) ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಹೋಗಿರುವವರಿಗೆ ಮುಂದಿನ ದಿನಗಳಲ್ಲಿ ಅವರಿಗೆ ಯಾವುದೇ ಸ್ಥಾನಮಾನ ಸಿಗದು. ಈ 17 ಜನರು ಸಚಿವ ಸ್ಥಾನ ಕಳೆದುಕೊಂಡು ಬೇತಾಳದಂತೆ ಆಗಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವ್ಯಂಗ್ಯವಾಡಿದರು.
ಮೈಸೂರಿನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಹೇಳಿದಿಷ್ಟು..
ಖುದ್ದು, ಬಿಜೆಪಿ ಎಂಎಲ್ಸಿ ಎಚ್. ವಿಶ್ವನಾಥ್ ಅವರೂ ಕೂಡ ‘ ಬಾಂಬೆ ಟೀಮ್ ‘ ನವರಿಗೆ ಮುಂದಿನ ದಿನಗಳಲ್ಲಿ ಯಾವುದೇ ಪ್ರಮುಖ ಸ್ಥಾನ ನೀಡದಂತೆ ಸೂಚಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಲಕ್ಷ್ಮಣ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಳೀನ್ ಕುಮಾರ್ ಕಟೀಲು ಆಡಿಯೋ ವಿಚಾರ.
ಬಿಜೆಪಿ ರಾಜ್ಯಾಧ್ಯಕ್ಷರ ಆಡಿಯೋ ವೈರಲ್ ಘಟನೆಗೆ ಸಂಬಂಧಿಸಿದಂತೆ, ಈ ಎಲ್ಲದಕ್ಕೂ ಕಾಂಗ್ರೆಸ್ ಕಾರಣ ಎಂಬ ಸಚಿವ ಆರ್.ಅಶೋಕ್ ಹೇಳಿಕೆಗೆ ತಿರುಗೇಟು. ನಿಮ್ಮ ಮನೆಯಲ್ಲಿ ನಡೆಯುವ ವಿಚಾರಕ್ಕೆ ನಾವು ಹೇಗೆ ಹೊಣೆ ? ಕೆಪಿಸಿಸಿ ವಕ್ತಾರ ಎಂ ಲಕ್ಣ್ಮಣ ಪ್ರಶ್ನೆ.
ಮಿಸ್ಟರ್ ಅಶೋಕ್ ನಿಮಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ತಂದು ಹಾಕುವ ಕೆಲಸ ಮಾಡುತ್ತಿದ್ದಿರಾ. ನಿಮ್ಮ ಬಿಜೆಪಿಯಲ್ಲಿನ ಪ್ರತಿಯೊಂದು ಅನಾಹುತಕ್ಕೂ ಕಾಂಗ್ರೆಸ್ ಕಾರಣವೇ? ಹೇಳಿ ಮಿಸ್ಟರ್ ಅಶೋಕ್.
ನಾಳೆಯಿಂದ ಬಿಜೆಪಿಯವರ ದುರಾಡಳಿತವನ್ನ ಜನರಿಗೆ ತಿಳಿಸುತ್ತೇವೆ. ರಾಜ್ಯದ ಮೂಲೆಮೂಲೆಯ ಜನರಿಗೆ ಅವರ ದುರಾಡಳಿತವನ್ನ ತಿಳಸುತ್ತೇವೆ. ಮದ್ದು ಹಾಕುವವರು ನಿಮ್ಮ ಮನೆಯಲ್ಲೇ ಇದ್ದಾರೆ. ಅವರ ಬಗ್ಗೆ ನೀವು ಮಾತನಾಡಿ ಅದು ಬಿಟ್ಟು ಕಾಂಗ್ರೆಸ್ ಬಗ್ಗೆ ಮಾತನಾಡಬೇಡಿ ಕೆಪಿಸಿಸಿ ವಕ್ತಾರ ಎಂ ಲಕ್ಣ್ಮಣ ಹೇಳಿಕೆ.
ಲಂಕೇಶ್ ಹೇಳಿಕೆಗೆ ಖಂಡನೆ:
ಮೈಸೂರು ಪೊಲೀಸರ ಬಗ್ಗೆ ಇಂದ್ರಜಿತ್ ಲಂಕೇಶ್ ನೀಡಿರುವ ಹೇಳಿಕೆಗೆ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಖಂಡನೆ. ಮೈಸೂರಿನ ಪೊಲೀಸ್ ಠಾಣೆಗಳು ಸೆಂಟ್ಲ್ ಮೆಂಟ್ ಕೇಂದ್ರಗಳಾಗಿವೆ ಎಂದು ಇಂದ್ರಜಿತ್ ಲಂಕೇಶ್ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದುದು. ಮೈಸೂರು ಪೊಲೀಸರು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಮೈಸೂರಿನ ಪೊಲೀಸರ ನೈತಿಕ ಸ್ಥೈರ್ಯ, ಆತ್ಮಸ್ಥೈರ್ಯ ಕುಂದಿಸುವ ಕೆಲಸವನ್ನು ಯಾರು ಮಾಡಬಾರದು. ಇಂದ್ರಜಿತ್ ಲಂಕೇಶ್ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಬೇಕು. ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಮೈಸೂರಿನಲ್ಲಿ ಹೇಳಿಕೆ.
key words : mysore-congress-bjp-lankesh-police