ಮೈಸೂರು, ಜೂ.30, 2021 : (www.justkannada.in news) : ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ಸರ್ಕಾರದ ನಾಲ್ವರು ಸಚಿವರೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ, ಆರೋಗ್ಯ ಸಚಿವರು ಲಸಿಕೆ ನೀಡುವ ಬಗ್ಗೆ, ಸೋಂಕಿತರ ಸಾವಿನ ಬಗ್ಗೆ ಬರೀ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಕೇಂದ್ರ ನಾಯಕರು ಇವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಲಸಿಕೆ ನೀಡುವಲ್ಲಿ ಭಾರತ ಅಮೆರಿಕಾವನ್ನೇ ಮೀರಿಸಿದೆ ಎಂಬ ಹಸಿಹಸಿ ಸುಳ್ಳುಗಳನ್ನೇ ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸ ವಕ್ತಾರ ಎಂ.ಲಕ್ಷ್ಮಣ್ ಹೇಳಿದಿಷ್ಟು..
ಕೃಷಿ ಇಲಾಖೆಯಲ್ಲಿ ಬ್ರಹ್ಮಾಂಡದ ಭ್ರಷ್ಟಾಚಾರದಲ್ಲಿ ನಡಿತೀದೆ. ಕೃಷಿ ಸಚಿವ ಬಿಸಿ ಪಾಟೀಲ್ ರ ಬ್ರಷ್ಟಾಚಾರ ಬೆಳಕಿಗೆ ಬರ್ತಿದೆ. ಈ ಹಿಂದೆ ಅಬಕಾರಿ ಸಚಿವ ಹೆಚ್.ನಾಗೇಶ್ ಅಧಿಕಾರಿಯ ವರ್ಗಾವಣೆಗಾಗಿ ಒಂದು ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕಂದಾಯ ಸಚಿವ ಆರ್. ಅಶೋಕ್ ಅವರ ಆಪ್ತ ಕಾರ್ಯದರ್ಶಿ ಗಂಗಾಧರ್ ಅಧಿಕಾರಿಯಿಂದ ಲಂಚ ಕೇಳಿದ್ದ ಪ್ರಕರಣ ಸಹ ನಡೆದಿದೆ. ಆದರೆ ಈ ಬಗ್ಗೆ ಯಾವುದೇ ತನಿಖೆ ಆಗಿಲ್ಲ. ಸಚಿವ ಆರ್. ಅಶೋಕ್ ಅವರು ತಮ್ಮ ಕಾರ್ಯದರ್ಶಿ ವಿರುದ್ದ ಇದ್ದ ಪ್ರಕರಣಕ್ಕೆ ಪೊಲೀಸರ ಮೇಲೆ ಪ್ರಭಾವ ಬೀರಿ ‘ ಬಿ’ ರಿಪೋರ್ಟ್ ಕೊಡಿಸಿದ್ದಾರೆ ಎಂದು ಲಕ್ಷ್ಮಣ್ ಆರೋಪಿಸಿದರು.
ಹಾಲಿ ಅಬಕಾರಿ ಸಚಿವರಾಗಿರುವ ಗೋಪಾಲಯ್ಯ ಕೂಡಾ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಸರ್ಕಾರ ಈ ಎಲ್ಲಾ ವಿಚಾರದಲ್ಲೂ ಮೌನವಹಿಸಿದೆ. ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗಂಭೀರ ಆರೋಪ.
ಕಾಂಗ್ರೆಸ್ ನಿಂದ ಮಾಹಿತಿ ಸಂಗ್ರಹ ಅಭಿಯಾನ.
ರಾಜ್ಯದ ಪ್ರತೀ ಮನೆ ಮನೆಗೆ ಹೋಗಿ ಕೋವಿಡ್ ಸೋಂಕಿತರು ಹಾಗೂ ಸಾವನ್ನಪ್ಪಿದ್ದವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಸಂಕಷ್ಟಕ್ಕೆದಲ್ಲಿರುವವರ ಪರಿಸ್ಥಿತಿ ಅವಲೋಕಿಸಿ ಕಾಂಗ್ರೆಸ್ ನಿಂದ ಸಹಾಯ ಹಸ್ತ . ಮೈಸೂರಿನ ಪ್ರತೀ 65 ವಾರ್ಡ್ ನಲ್ಲೂ ಮಾಹಿತಿ ಸಂಗ್ರಹ ಅಭಿಯಾನ.
ರಾಜ್ಯದಲ್ಲಿ ಕಳೆದ ವರ್ಷದಿಂದ 3ಲಕ್ಷದ 27ಸಾವಿರದ 965 ಜನ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಆದರೆ ರಾಜ್ಯ ಸರ್ಕಾರ ಕೇವಲ 30ಸಾವಿರ ಜನ ಮಾತ್ರ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ನೀಡಿದೆ. ಸಾವಿನ ವಿಚಾರದಲ್ಲಿ ಸರ್ಕಾರ ಸುಳ್ಳು ಮಾಹಿತಿ ನೀಡ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರೇ ಪ್ರತೀ ಮನೆ ಮನೆಗೆ ಹೋಗಿ ಎಲ್ಲಾ ಮಾಹಿತಿ ಸಂಗ್ರಹಿಸುತ್ತೇವೆ. ಈ ಎಲ್ಲಾ ಮಾಹಿತಿ ಸಂಗ್ರಹಿಸಿ, ಇದರ ಆಧಾರದ ಮೇಲೆ ರಾಜ್ಯ ಸರ್ಕಾರದ ವಿರುದ್ಧ ಕೋರ್ಟ್ ನಲ್ಲಿ ದಾವೆ ಹೂಡಲಾಗುತ್ತದೆ. ಈ ಬಗ್ಗೆ ಎಐಸಿಸಿ ಹಾಗೂ ಕೆಪಿಸಿಸಿಯಿಂದ ನಿರ್ದೇಶನ ಬಂದಿದೆ. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಹೇಳಿಕೆ.
ಲಸಿಕೆ ಕುರಿತು ಸುಳ್ಳು ಹೇಳಿಕೆ :
ಲಸಿಕೆ ನೀಡುವಲ್ಲಿ ಭಾರತ ಅಮೆರಿಕಾವನ್ನೇ ಮೀರಿಸಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರ. ಅಮೆರಿಕಾ 32.33 ಕೋಟಿ ಮೊದಲ ಡೋಸ್ ಲಸಿಕೆ ನೀಡಿದೆ. ಅಂದರೆ ಶೇ.97ರಷ್ಟು ದೇಶದ ಜನರಿಗೆ ಲಸಿಕೆ ನೀಡಿದೆ. ಆದರೆ ಭಾರತದಲ್ಲಿ 32.26ಕೋಟಿ ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ದೇಶದಲ್ಲಿ ಲಸಿಕೆಗೆ ಹಾಹಾಕಾರ ಶುರುವಾಗಿದೆ. ಆದ್ರೆ ಬಿಜೆಪಯವರು ಸುಳ್ಳು ಹೇಳ್ಕೊಂಡು ತಿರುಗ್ತಿದ್ದಾರೆ.
ಇಲ್ಲಿಯವರೆಗೆ ನೀವೆಷ್ಟು ಪರ್ಸೆಂಟ್ ವ್ಯಾಕ್ಸಿನ್ ಕೊಟ್ಟಿದ್ದೀರಿ ಹೇಳಿ..?
ಆರೋಗ್ಯ ಸಚಿವ ಸುಧಾಕರ್ ಪ್ರತಿದಿನ 5ಲಕ್ಷ ಡೋಸ್ ಸ್ಟಾಕ್ ಇದೆ ಅಂತಾರೆ. ಆದರೆ ಜಿಲ್ಲೆಯ ಆರೋಗ್ಯಾಧಿಕಾರಿಗಳು ಲಸಿಕೆ ಸ್ಟಾಕ್ ಇಲ್ಲ. ಜನರು ಲಸಿಕಾ ಕೇಂದ್ರದ ಬಳಿ ಬರಬೇಡಿ ಎಂದು ಬೋರ್ಡ್ ಹಾಕ್ತಿದ್ದಾರೆ. ಇದೇನಾ ನಿಮ್ಮ ಲಸಿಕಾ ಅಭಿಯಾನದ ಸಾಧನೆ..? ಬಿಜೆಪಿ ವಿರುದ್ಧ ಎಂ.ಲಕ್ಷ್ಮಣ್ ವಾಗ್ದಾಳಿ.
key words : mysore-congress-bjp-m.lakashman-vaccine-false-statement
———