ಎಸ್ಪಿಗೆ ಧಮ್ಕಿ, ಕರ್ತವ್ಯಕ್ಕೆ ಅಡ್ಡಿ ಆರೋಪ: ಜೆಡಿಎಸ್ ವಿರುದ್ದ ದೂರು ನೀಡಲು ಮುಂದಾದ ಕಾಂಗ್ರೆಸ್

ಮೈಸೂರು,ಸೆಪ್ಟಂಬರ್,26,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ದೂರು ದಾಖಲು ಮಾಡುವಂತೆ ಎಸ್ಪಿಗೆ ಧಮ್ಕಿ ಹಾಕಿದ್ದಾರೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿಸಿ ಜೆಡಿಎಸ್ ನಾಯಕರ ವಿರುದ್ಧ ದೂರು ನೀಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.

ಇಂದು ಜೆಡಿಎಸ್ ನಾಯಕರ ವಿರುದ್ದ ದೂರು ನೀಡಲು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ‌‌.ರಾಜೀವ್ ಲೋಕಾಯುಕ್ತ ಕಚೇರಿಗೆ ತೆರಳಿದ್ದರು. ಆದರೆ ಅಧಿಕಾರಿ ಇಂದು ಗೈರಾಗಿದ್ದು ಈ ಹಿನ್ನೆಲೆಯಲ್ಲಿ ಅಲ್ಲಿಂದ ವಾಪಸ್ ಆಗಿದ್ದಾರೆ.

ಈ ಕುರಿತು ಮಾತನಾಡಿರುವ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ನಿನ್ನೆ ಜೆಡಿಎಸ್ ನಾಯಕರು ಲೋಕಾಯುಕ್ತ ಕಚೇರಿಗೆ ಬಂದಿದ್ದರು.  ದೂರು ದಾಖಲು ಮಾಡುವಂತೆ ಎಸ್ಪಿಗೆ ಒತ್ತಡ ಹಾಕಿದ್ದಾರೆ. ಹೈಕೋರ್ಟ್ ಸೂಚನೆಯಂತೆ ದೂರು ದಾಖಲು ಮಾಡೋದು ಅನಿವಾರ್ಯ.  ಹೀಗಿದ್ದರೂ ಎಸ್ಪಿಗೆ ಧಮ್ಕಿ ಹಾಕಿದ್ದಾರೆ, ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ.  ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ದೂರು ನೀಡಲು ಬಂದಿದ್ದೆವು.  ಈಗ ಎಸ್ಪಿ ಕಚೇರಿಯಲ್ಲಿ ಇಲ್ಲದ ಕಾರಣ ನಾಳೆ ಮತ್ತೆ ಬರುತ್ತೇವೆ ಎಂದು ತಿಳಿಸಿದರು.

Key words: mysore, Congress, file, complaint, against, JDS