ಮೈಸೂರು, ಅ.20, 2019 : (www.justkannada.in news ) : ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಅವರಿಗೆ ಮತ ನೀಡಿದರೆ, ಅದು ನನಗೆ ಓಟ್ ಹಾಕಿದಂತೆ. ಕನಿಷ್ಠ 20 ಸಾವಿರ ಮತಗಳಿಂದ ಮಂಜುನಾಥ್ ಅವರನ್ನ ಗೆಲ್ಲಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.
ಮೈಸೂರಿನ ವಿಜಯನಗರದ ವಾಲ್ಮೀಕಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಹುಣಸೂರು ಕುರುಬ ಸಮಾಜದ ಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡಿದರು.
ಮಂಜಣ್ಣನ್ನ ಕನಿಷ್ಠ 2O ಸಾವಿರ ಲೀಡ್ ನಲ್ಲಿ ಗೆಲ್ಲಿಸಿ. ನಿಮ್ಮೆಲ್ಲರ ಜೊತೆ ನಾನು ಇರ್ತೇನೆ, ನೀವು ನನ್ನ ಜೊತೆ ಇರಿ.
ಮಂಜುನಾಥ್ ಬಗ್ಗೆ ನನ್ನ ಬಗ್ಗೆ ಏನೇನೋ ಸುಳ್ಳು ಆರೋಪ ಮಾಡಬಹುದು. ಆದರೆ ಅದನ್ನ ಕೇಳ್ಬೇಡಿ, ನೀವು ಕೊಡೊ ಒಂದೊಂದು ವೋಟ್ ಕೂಡ ಸಿದ್ದರಾಮಯ್ಯನಿಗೆ… ಸಿದ್ದರಾಮಯ್ಯನಿಗೆ ಎಂದು ವೋಟ್ ಕೊಡಿ.
ಒಂದು ವರ್ಷ ಐದು ತಿಂಗಳಲ್ಲೇ ಹುಣಸೂರಿನಲ್ಲಿ ಮತ್ತೇ ಉಪ ಚುನಾವಣೆ ಬಂದಿದೆ. ನಾವ್ಯಾರು ಕೂಡ ಚುನಾವಣೆ ಬರುತ್ತೆ ಎಂದು ನಿರೀಕ್ಷೆ ಮಾಡಿರ್ಲಿಲ್ಲ. ಈ ಚುನಾವಣೆ ಬರಲು ಕಾರಣ ಕಾಂಗ್ರೆಸ್ ನಲ್ಲಿ ಗೆದ್ದಿದ್ದ l4, ಜೆಡಿಎಸ್ 3 ಜನ ಶಾಸಕರು, ನಿಮ್ಮ ಕ್ಷೇತ್ರದಿಂದ ಗೆದ್ದಿದ್ದ ಶಾಸಕರು ತಾವು ಗೆದ್ದಿದ್ದ ಪಕ್ಷಕ್ಕೆ ರಾಜೀನಾಮೆ ನೀಡಿ ದ್ರೋಹ ಎಸಗಿದ್ದರು. ನಾನು ಸ್ಪೀಕರ್ ಅವರಿಗೆ ಪತ್ರ ಬರೆದಿದ್ದೆ,
ಬಿಜೆಪಿಯ ಆಪರೇಷನ್ ಕಮಲಕ್ಕೆ ಒಳಗಾಗಿದ್ದರೆಂದು ಪತ್ರ ಬರೆದಿದ್ದೆ. ಬಿಜೆಪಿ ಯ ರಾಜ್ಯಸಭಾ ಸದಸ್ಯನ ಫ್ಲೈಟ್ ನಲ್ಲಿ ಮುಂಬೈ ಹೋದ್ರು. ಬಿಜೆಪಿಯವ್ರು ಇದಕ್ಕೆಲ್ಲ ಕಾರಣ. ಶಾಸಕರ ಅನರ್ಹ ಗೊಳಿಸಬೇಕೆಂದು ಪತ್ರದಲ್ಲಿ ಬರೆದಿದ್ದೆ.
ಪಕ್ಷಾಂತರ ಮಾಡಿದ್ದಾರೆ ಅವರನ್ನ ಅನರ್ಹ ಮಾಡಲು ಸ್ಪೀಕರ್ ಗೆ ಮನವಿ ಮಾಡಿದ್ದೆ . ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ರಲ್ಲ ನಿಮಗೆ ಹೇಳಿ ರಾಜೀನಾಮೆ ನೀಡಿದ್ರಾ. ಓಟ್ ಹಾಕಿದವರ ಮಾತನ್ನು ಕೇಳಲಿಲ್ಲ, ಪಕ್ಷದವರ ಮಾತನ್ನು ಕೇಳಲಿಲ್ಲ. ಇಂತವರೆಲ್ಲ ರಾಜಕೀಯಕ್ಕೆ ಯೋಗ್ಯರ..? ವಿಶ್ವನಾಥ್ ಗೆ ಸುಳ್ಳು ಹೇಳೋದು ಬಿಟ್ರೆ ಮತ್ತೇನು ಬರಲ್ಲ ಎಂದು ಹರಿಹಾಯ್ದ ಸಿದ್ದರಾಮಯ್ಯ.
ನಾನೇನಾದ್ರು ಅನ್ಯಾಯ ಮಾಡಿದ್ರೆ ಅದು ಮಾಜಿ ಶಾಸಕ ದಿ. ಮಂಚನಹಳ್ಳಿ ಮಹಾದೇವನಿಗೆ ಹೊರತು ವಿಶ್ವನಾಥ್ ಗೆ ಅಲ್ಲಾ. 2OO8 ರಲ್ಲಿ ಚುನಾವಣೆಯಲ್ಲಿ ಮಂಚನಹಳ್ಳಿ ಮಹದೇವ್ ಗೆ ಟಿಕೆಟ್ ನೀಡಬೇಕಿತ್ತು, ಆಗ ವಿಶ್ವನಾಥ್ ನನಗೆ ಕೊಡ್ಸಿ ಸೀನಿಯರ್ ಇದೀನಿ ಅಂದ. ಅವಾಗಲೂ ಟಿಕೆಟ್ ಕೊಡಿಸಿದೆ, ಸೋತ, ನಂತರ ಲೋಕಸಭೆ ಚುನಾವಣೆಯಲ್ಲಿ ಮಹದೇವ್ ಟಿಕೆಟ್ ನೀಡಬೇಕಿತ್ತು ಆಗಲು ತಪ್ಪಿಸಿದ ವಿಶ್ವನಾಥ್. ನಿಜಕ್ಕೂ ಮಂಚನಹಳ್ಳಿ ಮಹದೇವ್ ಗೆ ಟಿಕೆಟ್ ತಪ್ಪಿಸಿ ಅವನಿಗೆ ಅನ್ಯಾಯ ಮಾಡಿದೆ ಎಂದು ಹಳೆಯ ಗೆಳೆಯನನ್ನು ಸಿದ್ದರಾಮಯ್ಯ ನೆನಪಿಸಿಕೊಂಡರು.
ನನ್ನನ್ನ ಭ್ರಷ್ಟ ಎಂದು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದ ವಿಶ್ವನಾಥ್. ನಾನು ಸಿಎಂ ಆಗಿದ್ದೆ, ಸಿದ್ದರಾಮಯ್ಯ ಒಬ್ಬ ಭ್ರಷ್ಟ ಮುಖ್ಯಮಂತ್ರಿ ಎಂದು ಪತ್ರ ಬರೆದಿದ್ದ, ಹೇ ವಿಶ್ವನಾಥ್ ನಾನು ಭ್ರಷ್ಟನ.? ಯಾರತ್ರನಾದ್ರೂ ದುಡ್ಡ್ ಇಸ್ಕೊಂಡಿದೀನ ತೋರ್ಸು. ನಾನೇ ಸಿದ್ದರಾಮಯ್ಯನ ಮುಖ್ಯಮಂತ್ರಿ ಮಾಡಿದೆ.. ಮಾಡಿದೆ ಅಂತ ಹೇಳ್ತಾನೆ. ಅವ್ನು ನನ್ನ ಸಿಎಂ ಮಾಡೋಕೆ ಎಂ. ಎಲ್. ಎ ಆಗಿದ್ನ..?
ನಾನು ಕಾಂಗ್ರೆಸ್ ಸೇರಲು ಯಾರು ಕಾರಣವಲ್ಲ, ಅಹಮದ್ ಪಟೇಲ್, ಆಗ ಸೋನಿಯಾ ಗಾಂಧಿ ನಮ್ಮನ್ನ ಕರೆದು ಪಕ್ಷಕ್ಕೆ ಸೇರಿಸಿಕೊಂಡರು. ವಿಶ್ವನಾಥ್ ಅಲ್ಲಾ ಪಕ್ಷಕ್ಕೆ ಸೇರಿಸಿಕೊಂಡಿದ್ದು ಸಿದ್ದರಾಮಯ್ಯ ಆಕ್ರೋಶ.
ನನ್ನ ಜೊತೆ ಕಲ್ಲು ಬಂಡೆಯಂತಿರೋ ಮಂಜುನಾಥ್ ಗೆಲ್ಲಿಸಿ. ಹೇಳಿ ಬಿಜೆಪಿ ಅವ್ರು ಬೇಕಾ ನಾನ್ ಬೇಕಾ..?? ನಾನು ಮುಖ್ಯಮಂತ್ರಿ ಆಗಿ ಯಾರಿಗದ್ರು ಅನ್ಯಾಯ ಮಾಡಿದ್ದಿನಾ..??
ಸಿದ್ದು ನಂಬಿಕಸ್ತ ನಾನು :
10ವರ್ಷಗಳ ಕಾಲ ಅತ್ಯುನ್ನತ ಸ್ಥಾನ ನನಗೆ ಕೊಟ್ಟಿದ್ರಿ. ಸಮಾಜ ನನ್ನ ಬೆನ್ನೆಲುಬಾಗಿ ನಿಂತಿದೆ. ನಿಮ್ಮ ಅಣತಿಯಂತೆ ನಾನು ಕೆಲಸ ಮಾಡಿದ್ದೀನಿ. ಅಧಿಕಾರ ಇರಲಿ ಇಲ್ಲದಿರಲಿ ನಾನು ನಿಮ್ಮ ಸೇವೆಗೆ ಸಿದ್ದ. ಕಿತ್ತೂರು ರಾಣಿ ಚೆನ್ನಮ್ಮನಿಗೆ ಸಂಗೋಳ್ಳಿ ರಾಯಣ್ಣ ನಂಬಿಕಸ್ತನಂತೆ. ನಾನು ಸಿದ್ದರಾಮಯ್ಯ ಅವ್ರಿಗೆ ನಂಬಿಕಸ್ಥನಾಗಿ ಇರ್ತಿನಿ. ಮೈಸೂರಿನಲ್ಲಿ ನಡೆಯುತ್ತಿರುವ ಹುಣಸೂರು ಮುಖಂಡರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ಹೇಳಿಕೆ.
key words : mysore-congress-hunsur-manjunath-election