ಮೈಸೂರು, ಜು.22, 2021 : (www.justkannada.in news) ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭ್ರಷ್ಟ ರಹಿತ ಮುಖ್ಯಮಂತ್ರಿ ಅಲ್ಲ. ಅವರು ಎರಡು ವರ್ಷದ ಸಾಧನೆ ಏನು ಅಂತ. 26 ರಂದು ಹೇಳುತ್ತಾರೆ. ಅವರ ಸಾಧನೆ ಪಟ್ಟಿಯನ್ನು ನಾವು ಬಿಡುಗಡೆ ಮಾಡುತ್ತೇವೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದ್ದಾರೆ.
ಮೈಸೂರಿನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಹೇಳಿದಿಷ್ಟು..
ಎರಡು ವರ್ಷದಲ್ಲಿ 30 ಸಾವಿರ ಕೋಟಿ ಬಿಜೆಪಿ ಸರ್ಕಾರ ಲೂಟಿ ಮಾಡಿದೆ. ನೇರವಾಗಿ ನಾವು ಆರೋಪ ಮಾಡುತ್ತಿದ್ದೇವೆ. 2.ಲಕ್ಷದ 20 ಸಾವಿರ ಕೋಟಿ ಸಾಲ ಮಾಡಿರುವುದು ಯಡಿಯೂರಪ್ಪ ಸಾಧನೆ.
ರಾಜ್ಯದಲ್ಲಿ 3.27 ಲಕ್ಷ ಜನ ಸತ್ತಿದ್ದಾರೆ. ಇದು ಯಡಿಯೂರಪ್ಪ ಅವರ ಸಾಧನೆ. ನಾವು ಇವರ ಎರಡು ವರ್ಷದ ಸಾಧನೆ ಪಟ್ಟಿ ಬಿಡುಗಡೆ ಮಾಡುತ್ತೇವೆ. 35 ಲಕ್ಷ ಜನರು ಎರಡು ವರ್ಷದಲ್ಲಿ ಕೆಲಸ ಕಳೆದುಕೊಂಡಿದ್ದಾರೆ. 10 ಸಾವಿರ ಕೈಗಾರಿಕೆಗಳು ಮುಚ್ಚಿವೆ. ನಿಮ್ಮ ಸಾಧನೆಯನ್ನ ಪಾಂಪ್ಲೆಟ್ ಮಾಡಿ ಹಂಚುತ್ತೇವೆ. ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಹೇಳಿಕೆ.
ಅಂತರ ಕಾಯ್ದುಕೊಂಡ ಕಾಂಗ್ರೆಸ್ :
ಯಡಿಯೂರಪ್ಪನವರ ಕುರಿತು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಮತ್ತು ಎಂ ಬಿ ಪಾಟೀಲ್ ನೀಡಿರುವ ಹೇಳಿಕೆಗಳು ಅವರ ವೈಯಕ್ತಿಕ ಹೇಳಿಕೆಗಳು. ಅವರ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಂತ ಅವರು ನೀಡಿರುವ ಹೇಳಿಕೆಯನ್ನು ವಿರೋಧಿಸುವುದಿಲ್ಲ.
ಶಾಮನೂರು ಶಿವಶಂಕರಪ್ಪ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು. ಸಮಾಜದ ಅಧ್ಯಕ್ಷರಾಗಿ ಹೇಳಿಕೆ ನೀಡಿದ್ದಾರೆ. ಆದರೆ ಇದನ್ನು ಟೀಕಿಸಿರುವ ಎಚ್ ವಿಶ್ವನಾಥ್ ಯಾವ ಪಕ್ಷದಲ್ಲಿದ್ದಾರೆ? ಬಿಜೆಪಿಯಲ್ಲೇ ಇದ್ದುಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿರುವ ಎಚ್ ವಿಶ್ವನಾಥ್ ನಡೆಯನ್ನು ಪ್ರಶ್ನಿಸಿದ ಎಂ ಲಕ್ಷ್ಮಣ್.
ಪ್ರಶ್ನಾತೀತ ನಾಯಕರಲ್ಲ:
ಯಡಿಯೂರಪ್ಪ ಏನು ಪ್ರಶ್ನಾತೀತ ನಾಯಕರಲ್ಲ. ರಾಜ್ಯದ ಸಾಲವನ್ನು ಹೆಚ್ಚಿಸಿದ್ದು, ವ್ಯಾಪಕ ಭ್ರಷ್ಟಾಚಾರ ನಡೆಸಿದ್ದೇ ಯಡಿಯೂರಪ್ಪ ಸಾಧನೆಯಾಗಿದೆ. ಕೊರೊನಾ ನಂತರದ ವಿಚಾರದಲ್ಲಿ ಪರಿಸ್ಥಿತಿ ನಿಭಾಯಿಸುವಲ್ಲಿ ಯಡಿಯೂರಪ್ಪ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಉದ್ಯೋಗಗಳು ನಷ್ಟವಾಗಿವೆ. ಕಾರ್ಖಾನೆಗಳು ಬಂದ್ ಆಗಿವೆ. ಪರಿಣಾಮ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಯಡಿಯೂರಪ್ಪ ಸರ್ಕಾರದ ಸಾಧನೆ ತೀರಾ ಕಳಪೆಯಾಗಿದೆ.ಅವರ ಸರ್ಕಾರದ ಸಾಧನೆಗೆ ಅವರೇ 100 ಕ್ಕೆ 100 ಅಂಕ ಕೊಟ್ಟು ಕೊಳ್ಳಬೇಕು ಎಂದು ವ್ಯಂಗ್ಯವಾಗಿ ಹೇಳಿದ ಎಂ ಲಕ್ಷ್ಮಣ್.
ವೀರಶೈವ ಲಿಂಗಾಯತರು ಇದುವರೆಗೂ ಬಿಜೆಪಿ ಯನ್ನು ಬೆಂಬಲಿಸಿ ತಪ್ಪು ಮಾಡಿದ್ದಾರೆ.ಕಾಂಗ್ರೆಸ್ ಪಕ್ಷ ಜಾತ್ಯಾತೀತ ಪಕ್ಷವಾಗಿದೆ.ವೀರಶೈವ ಲಿಂಗಾಯತರು ಇನ್ನು ಮುಂದಾದರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಮೈಸೂರಿನಲ್ಲಿ ಹೇಳಿಕೆ.
ENGLISH SUMMARY…
‘Looting Rs.30 thousand cr. in two years is the only achievement of BJP: KPCC Spokesperson M. Lakshmana
Mysuru, July 22, 2021 (www.Justkannada.in): “Chief Minister B.S. Yediyurappa is not a CM without any history of corruption. He will reveal his two years achievement on July 26. We will release his list of achievements,” said KPCC spokesperson M. Lakshamana.
Addressing a press meet in Mysuru today he alleged that the BJP government had looted Rs.30 thousand crores in the last two years. “We are making a direct allegation. A whopping Rs.2 lakh 20 thousand crore loan is the achievement of Yediyurappa,” he said.
Further, he stated that BSY’s achievement also includes the death of 3.27 lakh people who lost their lives due to Coronavirus. “We will release his list of achievements in the last two years. About 35 lakh people have lost their jobs in the last two years, 10,000 industries have shut down. We will make a pamphlet of all these details and distributed,” he informed.
He also said that Yediyurappa is not an undisputed leader and stated that he had utterly failed in managing the pandemic situation. He also said that the Veerashaivas-Lingayats have done a mistake by supporting BJP all these years. “Congress is the real secular party. The Veerashaiva-Lingayats should support Congress at least from now onwards,” he added.
Keywords: KPCC Spokesperson/ M. Lakshmana/ Chief Minister B.S. Yediyurappa/ two years achievements/ not an undisputed leader/ looted Rs.30,000 cr
key words : mysore-congress-m.lakshman-bjp-cm-yadiyurappa