ಮೈಸೂರು, ಜೂ.02, 2020 : ( www.justkannada.in news ) ಪ್ರಧಾನಿ ನರೇಂದ್ರ ಮೋದಿ ಅವರು ಮಾತೆತ್ತಿದರೆ ಆರ್ಟಿಕಲ್ 370, ಪಿಒಕೆ ಬಗ್ಗೆ ಮಾತಾನಾಡುತ್ತಾರೆ. ಆದರೆ ಜನರ ಆರ್ಥಿಕ ಸಂಕಷ್ಟಗಳ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಿಷಾಧ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂ.ಲಕ್ಷ್ಮಣ್, ಇಡೀ ದೇಶದ ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಆಡಳಿತದ ವಿರುದ್ಧ ಕಿಡಿಕಾರಿದರು. ಜತೆಗೆ ಬಿಜೆಪಿಯ 6 ಪ್ರಮಾದಗಳ ಬಗ್ಗೆ ವಿವರಣೆ ಸಹ ನೀಡಿದರು.
ವಿಕಾಸ್ ವರ್ಸಸ್ ವಾಸ್ತವದ ಟೊಳ್ಳು ಭರವೆಸೆಯ ಮೋದಿ ಅರ್ಥ ಶಾಸ್ತ್ರ ಇದು. ವಾರ್ಷಿಕ ಎರಡು ಕೋಟಿ ಉದ್ಯೊಗ ಸೃಷ್ಟಿ ಮಾಡ್ತೇವೆ ಎಂದು ಹೇಳಿದ್ದರು. ಆದರೆ ಶೇ 28 ರಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯಮಿಗಳ 6.66 ಕೋಟಿ ರೂಪಾಯಿಯ ಸಾಲ ಮನ್ನಾ ಮಾಡಿದ್ದಾರೆ.
ಡಾಲರ್ ಗೆ ಸಮನಾಗಿ ರೂಪಾಯಿ ಮೌಲ್ಯ ಹೆಚ್ಚಿಸುತ್ತೇವೆ ಎಂದು ಬೋಗಳೆ ಬಿಟ್ಟಿದ್ದ ಬಿಜೆಪಿಯವರು, ಈಗ ಹಣದ ಮೌಲ್ಯವನ್ನು ಮತ್ತಷ್ಟು ಕುಸಿಯುವಂತೆ ಮಾಡಿದ್ದಾರೆ.
ಸಬ್ ಕಾ ಸಾತ್ ಸಬ್ ಕ ವಿಕಾಸ್ ಅನ್ನುವುದು, ಮಿತ್ರೋಂಕ ಸಾತ್, ಬಿಜೆಪಿ ವಿಕಾಸ್ ಎಂಬಂತಾಗಿದೆ. ಕೇವಲ ಬಿಜೆಪಿಯ ಸಖ್ಯದಲ್ಲಿರುವ ಉದ್ಯಮಿಗಳಿಗೆ ಮಾತ್ರ ಸರಕಾರದಿಂದ ಆರ್ಥಿಕ ಪ್ರಯೋಜನವಾಗುತ್ತಿದೆ. ಅ ಮೂಲಕ ಬಿಜೆಪಿ ಮಿತ್ರರು ಮಾತ್ರ ವಿಕಾಸವಾಗಿದ್ದಾರೆ. ಪ್ರಧಾನ ಸೇವಕ್ ಬದಲಿಗೆ ಪ್ರಧಾನಿ ಮೋದಿ, ನರಂಕುಶಾಧಿಕಾರಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ರೈತರ ಆದಾಯ ದ್ವಿಗುಣ ಮಾಡ್ತೇವೆ ಅಂದ್ರು. ಆದರೆ ಈಗ ನೋಡಿದರೆ ಕೃಷಿ ಆರ್ಥಿಕತೆಯನ್ನೆ ಸಂಪೂರ್ಣ ನಾಶಪಡಿಸಿದ್ದಾರೆ. ಅಚ್ವೆದಿನ್ ಅಂತ ಹೇಳುತ್ತಾರೆ. ಆದರೆ ಎಲ್ಲಿದೆ ಈ ಅಚ್ಚೆದಿನ್..? ಎಂದು ಜನ ಹುಡುಕುವಂತಾಗಿದೆ. ಯುವಕರು ಕೆಲಸ ಕಳೆದುಕೊಳ್ಳೊದೇನಾ ಬಿಜೆಪಿ ಪಾಲಿನ ಅಚ್ಚೆದಿನ್ ಎಂದು ಲಕ್ಷ್ಮಣ್ ಪ್ರಶ್ನಿಸಿದರು.
ಬಿಜೆಪಿ ಸಂಪೂರ್ಣವಾಗಿ ಭಾರತವನ್ನ ದುರ್ಭಲ ಗೊಳಿಸಿದೆ. ರಾಜ್ಯ ಸರ್ಕಾರ ಬರಿ ಸುಳ್ಳು ಭರವಸೆ ನೀಡಿದೆ. ಪ್ಯಾಕೇಜ್ ಘೋಷಣೆ ಬರಿ ಸುಳ್ಳು ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಅರ್.ಮೂರ್ತಿ, ಮಂಜುಳಾ ಮಾನಸ ಹಾಜರಿದ್ದರು.
key words : mysore-congress-m.lakshman-bjp-modi