ಮೈಸೂರು, ಫೆ.09, 2022 : (www.justkannada.in news) ಸುಮಾರು ಒಂದು ಲಕ್ಷ ಶಾಲುಗಳು ಇದೇ ಫೆ 6. ರಂದು ಬೆಂಗಳೂರಿನ ಪೀಣ್ಯ ಇಂಡಸ್ಟ್ರಿಯಲ್ ಪ್ರದೇಶದಿಂದ ರವಾನೆಯಾಗಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದರು.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ವಕ್ತಾರ ಎಂ.ಲಕ್ಷ್ಮಣ್ ಹೇಳಿದಿಷ್ಟು…
ಬೆಂಗಳೂರು ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಿಂದ ಒಂದು ಲಕ್ಷ ಕೇಸರಿ ಶಾಲು, ಪೇಟ ರವಾನೆ ಆಗಿದೆ. ಇದನ್ನು ಆರ್ಡರ್ ಮಾಡಿದ್ದು ಯಾರು..? ಮೂರು ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ. ದೇಶದ ನಂಬರ್ ಒನ್ ರಾಜ್ಯವನ್ನ ಬಿಜೆಪಿ ಹಾಳು ಮಾಡಿದ್ದೀರಿ.
ಮೂರು ಜನ ಕಲ್ಲು ಹೊಡಿತಾರೆ ಅಂತಾ ರಜೆ ಕೊಡ್ತೀರಾ.ನಾಳೆ ಮತ್ತೊಬ್ಬ ಕಲ್ಲು ಹೊಡೆಯುತ್ತಾನೆ ಮತ್ತೆ ರಜೆ ಕೊಡ್ತೀರಾ. ಯಾರು ಕಲ್ಲು ಹೊಡೆದ್ರು ಅವರನ್ನು ಹೊದ್ದು ಒಳಗೆ ಹಾಕೋದು ಬಿಟ್ಟು ರಜೆ ಕೊಡ್ತೀರಾ. ಎಲ್ಲಿದ್ದೀರಾ ಪೊಲೀಸ್ ನಿರ್ದೇಶಕ ಪ್ರವೀಣ್ ಸೂದ್.
ಕೇಸರಿ ಶಾಲು ಹಾಕಿದ್ದಾರೆ ಅಂತಾ ನೀವು ಹೋಗಿಲ್ವ.
ಮುಸ್ಲಿಂ ಪ್ರತಿಭಟನೆ ಆದ್ರೆ ಮುಂದೆ ಬರ್ತಿರಾ. ಮಂಡ್ಯದಲ್ಲಿ ನಿನ್ನೆ ಅಷ್ಟೋದು ಗಲಾಟೆ ಆಗಿದೆ. ಕನಿಷ್ಠ ಎಸ್ಪಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಹಿಜಾಬ್ ಇದೊಂದು ಬಿಜೆಪಿ ಪ್ರಾಯೋಜಿತ ಕಾರ್ಯಕ್ರಮ. ಕಾಂಗ್ರೆಸ್ ಗೂ ಇಜಾಬ್ ಗೂ ಏನು ಸಂಬಂಧ. ಹಿಜಾಬ್ ನಿಂದ ಕಾಂಗ್ರೆಸ್ ನಾಶ ಆಗುತ್ತೆ ಅನ್ನೋ ಈಶ್ವರ ಹೇಳಿಕೆಗೆ ತಿರುಗೇಟು.
ಇದು ನಮ್ಮ ತಾತನದ್ದೇ ದೇಶ, ತನ್ವೀರ್ ಸೇಠ ತಾತಾ ಕೂಡ ಹಿಂದು ಆಗಿದ್ರಿ ಎಂಬ ಪ್ರತಾಪ್ ಸಿಂಹ ಹೇಳಿಕೆ ವಿಚಾರ. ಪ್ರತಾಪ್ ಸಿಂಹ ಕಿಡಿ ಹತ್ತಿಸುವುದನ್ನೇ ಕಲಿತಿದ್ದಾರೆ. ನೆನ್ನೆ ಮಂಡ್ಯದಲ್ಲಿ ಹೆಣ್ಣು ಮಗುವೊಂದನ್ನು ನೂರಾರು ಜನ ಅಟ್ಯಾಕ್ ಮಾಡುವುದು ಎಷ್ಟರ ಮಟ್ಟಿಗೆ ಸರಿ.? ನಿನ್ನೆಯ ಘಟನೆ ಬಗ್ಗೆಪ್ರತಾಪ್ ಸಿಂಹ ಟ್ವಿಟ್ ಮಾಡಿ ಡಿಲೀಟ್ ಮಾಡುತ್ತಾರೆ. ಯಾಕೆ ಡಿಲೀಟ್ ಮಾಡುತ್ತಾರೆ.?
ಶಾಸಕ ತನ್ವಿರ್ ಸೇಠ್ ಬಗ್ಗೆ ಮಾತನಾಡುತ್ತಾರೆ.”ನಿಮ್ಮ ತಾತ ಮುಸ್ಲಿಂ ಆಗಿದ್ದು ಬಳಿಕ ಹಿಂದೂ ವಾಗಿ ಕನ್ವರ್ಟ್ ಆಗಿದ್ದಾರೆ ಎಂದು ನಾವುನು ಹೇಳಬಹುದು..?” ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ಪ್ರಶ್ನೆ.
ಹಿಜಾಬ್ ವಿವಾದದ ಪ್ರಯೋಜಕತ್ವವನ್ನು ಬಿಜೆಪಿ ವಹಿಸಿದೆ. ವಿವಾದಗಳಿಂದ ಲಾಭ ಪಡೆಯಲು ಬಿಜೆಪಿ ಮುಂದಾಗುತ್ತಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಈ ಘಟನೆ ಪ್ರಭಾವ ಬೀರಬಹುದು ಎಂದು ಕಿಡಿ ಹತ್ತಿಸುತ್ತಿರಬಹುದು. ಇದರಿಂದ ಬಿಜೆಪಿಗೆ ಏನು ಪ್ರಯೋಜನ ಆಗುವುದಿಲ್ಲ. ಐದು ರಾಜ್ಯಗಳ ಪೈಕಿ ಒಂದು ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ.
key words : mysore-congress-saffron-shall-supply