ಮೈಸೂರು,ಮೇ,24,2022(www.justkannada.in): ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರು ನಗರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಅಂತಾ ಶ್ವೇತ ಪತ್ರ ಕೊಡಿ ಅಂತ ಬಿಜೆಪಿ ನಾಯಕರು ಕೇಳಿದ್ದೀರಿ. ಸಿದ್ದರಾಮಯ್ಯ ಸರ್ಕಾರ ಮೈಸೂರು ನಗರಕ್ಕೆ 3800 ಕೋಟಿ ಹಣ ನೀಡಿದ್ದಾರೆ. ಆದರೆ ಮೈಸೂರಿಗೆ ನೀವು ಏನು ಕೊಟ್ಟಿದ್ದೀರಿ..? ಶ್ವೇತ ಪತ್ರ ಬಿಡುಗಡೆ ಮಾಡಿ. ಬಹಿರಂಗ ಚರ್ಚೆಗೆ ಬನ್ನಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸವಾಲು ಹಾಕಿದರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ನಳೀನ್ ಕುಮಾರ್ ಕಟೀಲ್ ಅವರು ಸಿದ್ದರಾಮಯ್ಯ ಮೈಸೂರು ನಗರಕ್ಕೆ ಏನು ಕೊಟ್ಟಿದ್ದಾರೆ ಶ್ವೇತ ಪತ್ರ ಕೊಡಿ ಅಂತ ಕೇಳಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಮೈಸೂರು ನಗರಕ್ಕೆ 3800 ಕೋಟಿ ಹಣ ನೀಡಿದ್ದಾರೆ. ನಾವು ಶ್ವೇತ ಪತ್ರ ಬಿಡುಗಡೆ ಮಾಡುತ್ತೇವೆ ಎಂದು ಹೇಳಿ ಸಿದ್ದರಾಮಯ್ಯ ಸಾಧನೆ ಪಟ್ಟಿ ಬಿಡುಗಡೆ ಮಾಡಿದರು.
ಇದೇ ವೇಳೆ ಬಿಜೆಪಿ ನಾಯಕರಿಗೆ ತರಾಟೆ ತೆಗೆದುಕೊಂಡ ಎಂ.ಲಕ್ಷ್ಮಣ್, ನೀವು ಬಿಜೆಪಿ ಅವರು ಮೈಸೂರಿಗೆ ಏನ್ ಕೊಟ್ಟಿದ್ದಿರಾ ನೀವು ಶ್ವೇತ ಪತ್ರ ಬಿಡುಗಡೆ ಮಾಡಿ. ಇಲ್ಲ ಅಂದರೆ ನಿಮಗೆ ಯಾವುದರಲ್ಲಿ ಹೊಡಿಯಬೇಕು ನೀವೆ ಹೇಳಿ. ಮೈಸೂರಿಗೆ ಅವಮಾನ ಮಾಡಬೇಡಿ. ನಿಮಗೆ ಯೋಗ್ಯತೆ ಇದ್ರೆ ಈತರ ಒಂದು ಶ್ವೇತ ಪತ್ರ ಬಿಡುಗಡೆ ಮಾಡಿ. ನಾನು ಸವಾಲು ಹಾಕುತ್ತೇನೆ. ಕನಿಷ್ಠ 100 ಕೋಟಿ ಅನುಷ್ಠಾನ ಮಾಡಿದರೇ ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.
ಸಾಲಮನ್ನಾ ನಾವು ಮಾಡಿದ್ದೇವೆ ಅಂತ ಪ್ರತಾಪ್ ಸಿಂಹ ಸುಳ್ಳು ಹೇಳ್ತಾ ಇದ್ದಾರೆ. 5 ಪೈಸೆ ಇವರು ಸಾಲಮನ್ನ ಮಾಡಿಲ್ಲ. ಸಿದ್ದರಾಮಯ್ಯ ಸಾಲ ಮನ್ನಾ ಮಾಡುವ ಕೆಲಸ ಮಾಡಿದ್ದು. ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ ಇಡೀ ಮೈಸೂರು ಜಿಲ್ಲೆಗೆ ಒಟ್ಟು 22 ಸಾವಿರ ಕೋಟಿ ಸಿದ್ದರಾಮಯ್ಯ ಕೊಟ್ಟಿದ್ದಾರೆ. ಬೇಕಿದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಂದರು.
ದಕ್ಷಿಣ ಪದವೀಧರ ಮತದಾರ ನೊಂದಣಿಯಲ್ಲಿ ಬೋಗಸ್ ಆಗಿದೆ.
ದಕ್ಷಿಣ ಪದವೀಧರ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ದಕ್ಷಿಣ ಪದವೀಧರ ಮತದಾರ ನೊಂದಣಿಯಲ್ಲಿ ಬೋಗಸ್ ಆಗಿದೆ ಎಂದು ಗಂಭೀರ ಆರೋಪ ಮಾಡಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ್ , ಒಟ್ಟು ಇದುವರೆವಿಗೆ 1.33 ಲಕ್ಷ ಮತದಾರ ಪೈಕಿ 40 ಸಾವಿರ ಮತದಾರ ಪೂರ್ಣ ವಿಳಾಸ ಇಲ್ಲ. ಪೂರ್ಣ ವಿಳಾಸ ಇಲ್ಲದೆ ಹೇಗೆ ನೋಂದಣಿ ಮಾಡಿಕೊಂಡಿರಿ. ಈ ಕುರಿತು ಚುನಾವಣಾ ಅಧಿಕಾರಿಗೆ ದೂರು ನೀಡಲಾಗಿದೆ. ಮತದಾರ ಪಟ್ಟಿಯಲ್ಲಿ ಜನರಲ್ ಅಡ್ರೆಸ್ ಇದೆ. ಡಿಗ್ರಿ ಇಲ್ಲದೆ ನೋಂದಣಿ ಮಾಡಿಸಿದ್ದಾರೆ. ಬೋಗಾಸ್ ಎನ್ ರೋಲ್ ಮಾಡಿಸುವಲ್ಲಿ ಬಿಜೆಪಿ ನಂ 1. ಜೆಡಿಎಸ್ ನಂ 2 . ಇದು ಶೀಘ್ರವಾಗಿ ವೆರಿಫೈ ಮಾಡಬೇಕು. ಚುನಾವಣೆ ಮುಂದೂಡಿದರೂ ಪರವಾಗಿಲ್ಲ. ಬೊಗಸ್ ಓಟ್ ಗೆ ಅವಕಾಶ ನೀಡಬಾರದು. ಕೋಡ್ ಆಪ್ ಕಂಡೆಕ್ಟ್ ವೈಲೇಷನ್ ಬಿಜೆಪಿಯವರು ಮಾಡಿದ್ದಾರೆ.
ಅಶ್ವತ್ಥ ನಾರಾಯಣ್ ಮಂಡ್ಯದಲ್ಕಿ ಅಧಿಕಾರಿಗಳೊಟ್ಟಿಗೆ ಸಭೆ ಮಾಡಿದ್ದಾರೆ. ಚುನಾವಣೆ ನೀತಿಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಡಾ ಅಶ್ವತ್ಥ ನಾರಾಯಣ್ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವಂತೆ ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಅವರ ಮೇಲೆ ಕ್ರಮ ಆಗದಿದ್ದರೆ ಹೈಕೋರ್ಟ್ ಹೋಗುತ್ತೇವೆ. ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಶಿಕ್ಷಕರ ಸಭೆ ಮಾಡಿ ಬಿಜೆಪಿಗೆ ಮತ ನೀಡುವಂತೆ ತಾಕೀತು ಮಾಡಿದ್ದಾರೆ. ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ಅಂತ ವರ್ತನೆ ಮಾಡಬಾರದು. ನಿಷ್ಪಕ್ಷಪಾತವಾಗಿ ಚುನಾವಣಾ ಆಯೋಗ ಕೆಲಸ ಮಾಡಬೇಕು. ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ಆಗಿದೆ ಎಂದು ಆರೋಪಿಸಿದರು.
13 ರಂದು ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಇದೆ. 2016 ರಲ್ಲಿ ನಡೆದಾಗ ಒಟ್ಟರೆ 1.20 ಲಕ್ಷ ಇತ್ತು. ಈಗ 13 ಸಾವಿರ ಹೆಚ್ಚಾಗಿದೆ. 4 ಜಿಲ್ಲೆಗಳಲ್ಲಿ 29 ವಿಧಾಸಭಾ ಕ್ಷೇತ್ರ ಬರುತ್ತವೆ. ಒಟ್ಟಾರೆ ಶೇ 42 ರಷ್ಟು ಮತದಾನ ಆಗಿತ್ತು. ಅತೀ ಹೆಚ್ಚು ಮತದಾರು ಮೈಸೂರು ಜಿಲ್ಲೆಯಯಲ್ಲಿ ಹೆಚ್ಚು ಮತದಾರ ನೋಂದಣಿ ಆಗಿದೆ. ಈ ಬಾರಿ ಕಾಂಗ್ರೆಸ್ ಪಕ್ಷ 8 ತಿಂಗಳ ಮುಂಚೆ ಅಭ್ಯರ್ಥಿ ಘೋಷಣೆ ಮಾಡಿದ್ದೇವೆ. ನಮ್ಮಲ್ಲಿ ಯಾವುದೇ ಭಿನಾಭಿಪ್ರಾಯ ಇಲ್ಲ. ಎಲ್ಲರ ಒಮ್ಮತದೊಂದಿಗೆ ಮಧು ಮಾದೇಗೌಡರನ್ನ ಅಭ್ಯರ್ಥಿ ಮಾಡಿದ್ದೇವೆ. ನಾವು ಈ ಬಾರಿ ಶೇ 100 ಗೆಲುವು ಸಾಧಿಸಲಿದ್ದೇವೆ. ಬಿಜೆಪಿಯಲ್ಲಿ 10 ಆಕಾಂಕ್ಷಿ ಇದ್ದರು. ಆಕಾಂಕ್ಷಿ ಬಹಳ ಉತ್ಸಾಹದಿಂದ ನೋಂದಣಿ ಮಾಡಿದ್ದರು. ಟಿಕೆಟ್ ಕೈತಪ್ಪಿದ್ದರಿಂದ ಸ್ವತಂತ್ರವಾಗಿ ವಿನಯ್ ಸ್ಪರ್ಧೆ ಮಾಡುತ್ತಿದ್ದಾರೆ. ಹಾಗೆ ಈಗ ಜೆಡಿಎಸ್ ನಲ್ಲಿ ಕಿಲಾರ ಜಯರಾಮ್ ಟಿಕೆಟ್ ಕೈತಪ್ಪಿದೆ ಅಂತ ಮರಿತಿಬ್ಬೆಗೌಡ ಕೂಡ ನೇರವಾಗಿ ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ ಗೆ ಸಪೋರ್ಟ್ ಮಾಡಲು ಮುಂದಾಗಿದ್ದಾರೆ.
ಮತದಾರರು ಜೆಡಿಎಸ್ ಹಾಗು ಬಿಜೆಪಿ ಆಶ್ವಾಸನೆ ನಂಬಬಾರದು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶೆ 30 ರಷ್ಟು ವೇತನ ಹೆಚ್ಚಳ ಮಾಡಿದೆ. ಸುಮಾರು ,6.5 ಲಕ್ಷ ಜನರಿಗೆ ಅನುಕೂಲ ಆಗಿದೆ. ಕೆಲಸ ಮಾಡಿ ನಾವು ಮತದಾರರಲ್ಲಿ ಕೂಲಿ ಕೇಳ್ತಾ ಇದ್ದೇವೆ. ಕುಮಾರ್ ನಾಯಕ ವರದಿ ಪ್ರಕಾರ ಎರಡು ಇನ್ಕ್ರಿಮೆಂಟ್ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ಇದನ್ನ ನೆನಪಿಸಲು ಇಚ್ಚೆ ಪಡುತ್ತೇವೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮುಂದಿನ ದಿನಗಳಲ್ಲಿ ನಿಮ್ಮ ಬೇಡಿಕೆ ಈಡೇರಿಸುತ್ತೇವೆ. ಮತದಾರರು ಪರಿಷತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿಕೊಡಿ. ಪೆನ್ಷನ್ ಇದ್ದಾಗ ಉದ್ಯೋಗಿಗಳು ನೆಮ್ಮದಿ ಆಗಿದ್ರು ಎನ್ ಪಿಎಸ್ ವ್ಯವಸ್ಥೆ ಬಂದ ಮೇಲೆ ಅವರ ಸ್ಥಿತಿ ಅತಂತ್ರವಾಗಿದೆ. ದೇಶದಲ್ಲಿ ಮೊದಲ ಬಾರಿಗೆ ರಾಜಸ್ಥಾನದಲ್ಲಿ ಎನ್ ಪಿಎಸ್ ವ್ಯವಸ್ಥೆಯನ್ನು ರಾಜಸ್ಥಾನದಲ್ಲಿ ಕಾಂಗ್ರೆಸ್ ತೆಗೆದುಹಾಕಿದೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ತಿಳಿಸಿದರು.
Key words: mysore-congress-spoksperson- M Laxman-challenges-BJP leaders