ಮೈಸೂರು,ಜು,18,2020(www.justkannada.in): ಮೈಸೂರಿನಲ್ಲಿ ಕೃಷಿ ಇಲಾಖೆ ಸಹಾಯಕ ಇಂಜಿನಿಯರ್ ಕುಟುಂಬದಲ್ಲಿ ಮಹಾಮಾರಿ ಕೊರೋನಾ ಅಟ್ಟಹಾಸ ಮೆರೆದಿದ್ದು, ಸಹಾಯಕ ಇಂಜಿನಿಯರ್ ಮತ್ತು ಅವರ ಮಗ ಕೊರೋನಾಗೆ ಬಲಿಯಾಗಿದ್ದಾರೆ.
ನಾಲ್ಕು ದಿನಗಳ ಅಂತರದಲ್ಲಿ ತಂದೆ ಸಹಾಯಕ ಇಂಜಿನಿಯರ್ ಮತ್ತು ಮಗ ಇಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಜು.15ರಂದು 14 ವರ್ಷದ ಪುತ್ರ ಮೃತಪಟ್ಟರೇ ನಿನ್ನೆ ರಾತ್ರಿ 47 ಸಹಾಯಕ ಇಂಜಿನಿಯರ್ ಕೊರೋನಾಗೆ ಬಲಿಯಾಗಿದ್ದಾರೆ. ಇಡೀ ಸಹಾಯಕ ಇಂಜಿನಿಯರ್ ಅವರ ಸಂಸಾರಕ್ಕೇ ಕೊರೋನಾ ಮಹಾಮಾರಿ ತಗುಲಿತ್ತು. ಕಳೆದ ಶುಕ್ರವಾರ ಕೊರೊನಾ ಪಾಸಿಟಿವ್ ಧೃಢವಾಗಿ ಸಹಾಯಕ ಇಂಜಿನಿಯರ್ ಹಾಗೂ ಅವರ ಪತ್ನಿ, ಮೂವರು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದರು.
ಈ ನಡುವೆ ಸಹಾಯಕ ಇಂಜಿನಿಯರ್ ಅವರ ಪರಿಸ್ಥಿತಿ ಗಂಭೀರವಾದ ಹಿನ್ನಲೆ ಅವರನ್ನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಅವರ ಮೂವರು ಮಕ್ಕಳು ಹಾಗೂ ಪತ್ನಿಗೆ ಕೋವಿಡ್ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತಿತ್ತು. ಈ ನಡುವೆ ಮೂರು ದಿನಗಳ ಹಿಂದೆ 14 ವರ್ಷದ ಪುತ್ರ ಸಾವನ್ನಪ್ಪಿದ್ದು, ಇದೀಗ ಮಗನನ್ನೇ ಹಿಂಬಾಲಿಸಿ ತಂದೆಯೂ ಸಹ ಕೊರೋನಾಗೆ ಬಲಿಯಾಗಿದ್ದಾರೆ.
ಇನ್ನು 14 ವರ್ಷದ ಪುತ್ರನ ಅಂತಿಮ ದರ್ಶನ ಪಡೆಯಲಾಗದೆ ಒದ್ದಾಡುತ್ತಿದ್ದ ತಂದೆ ತಾಯಿ ಹಾಗೂ ಅಕ್ಕಂದಿರು ಇದೀಗ ಅಂತ್ಯಕ್ರಿಯೆಯಲ್ಲೂ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ.
Key words: mysore- corona- Department – Agriculture- Assistant Engineer-death