ಮೈಸೂರು,ಜು,31,2020(www.justkannada.in): ಸಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು ಜಿಲ್ಲೆಯಲ್ಲಿ ಇಂದು ಸಹ ಕೊರೋನಾ ಸೋಂಕಿತರ ಸಂಖ್ಯೆ ತ್ರಿಶತಕ ದಾಟುವ ಸಾಧ್ಯತೆ ಇದೆ.
ಮೈಸೂರಿನಲ್ಲಿ ದಿನೇ ದಿನೇ ಕೊರೋನಾ ಪಾಸಿಟಿವ್ ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು ಇಂದು ಸಹ 330ಕ್ಕೂ ಹೆಚ್ಚು ಪಾಸಿಟಿವ್ ಪತ್ತೆಯಾಗುವ ಸಾಧ್ಯತೆ ಇದೆ. ಈ ನಡುವೆ ಮೈಸೂರಿನಲ್ಲಿ ಮನೆ ಕೆಲಸದವರಿಂದ ಒಂದೇ ಕುಟುಂಬದ ಮೂವರಿಗೆ ಸೋಂಕು ತಗುಲಿದೆ.
ವಾಯಸೇನೆಯ ಸಿಬ್ಬಂದಿಗೆ ಗುವಾಹಟಿಯಿಂದ ಬಂದಿದ್ದ ಯೋಧನಿಗೆ, ಖಾಸಗಿ ಆಸ್ಪತ್ರೆಯ ಮೂವರು ವೈದ್ಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹಾಗೆಯೇ ಐಜಿಪಿ ಕಚೇರಿಯ ಮಹಿಳಾ ಸಿಬ್ಬಂದಿ, ಮೆಡಿಕಲ್ ರೆಪ್ ಹಾಗೂ ಮಾನಸಿಕ ಅಸ್ವಸ್ಥನಿಗೂ ಮಹಾಮಾರಿ ಕೊರೋನಾ ವಕ್ಕರಿಸಿದೆ.
ಸಾಯಿ ಗಾರ್ಮೆಂಟ್ಸ್, ಜೆ.ಕೆ ಟೈರ್ ಸಿಬ್ಬಂದಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಮುಂದುವರೆದಿದ್ದು, ಹುಣಸೂರು, ಕೆ.ಆರ್.ನಗರ ಟಿ.ನರಸೀಪುರ, ನಂಜನಗೂಡು ತಾಲೂಕುಗಳಲ್ಲಿ ಕೊರೋನಾಸೋಂಕು ಹೆಚ್ಚಾಗಿದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲೂ ಜನರಿಗೆ ಕೊರೊನಾ ಆತಂಕ ಮನೆ ಮಾಡಿದೆ.
Key words: mysore- Corona – doctors -Air Force – Mysore-positive -case