ಮೈಸೂರು,ಆ,28,2020(www.justkannada.in): ದೇಶದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು ಈ ಹಿನ್ನೆಲೆ ಹಬ್ಬಹರಿದಿನಗಳ ಸಂಭ್ರಮಾಚರಣೆಗೆ ಬ್ರೇಕ್ ಬಿದ್ದಿದೆ. ಹೀಗಾಗಿ ಕರೋನಾ ಕರಿನೆರಳು ಮೈಸೂರಿನ ಪ್ರಸಿದ್ದ ಕರಗ ಮಹೋತ್ಸವದ ಮೇಲೂ ತಟ್ಟಿದೆ.
ಮೈಸೂರಿನ ಪ್ರಸಿದ್ಧ 97ನೇ ಕರಗ ಉತ್ಸವಕ್ಕೆ ಕೊರಾನಾ ಮಹಾಮಾರಿ ತಡೆಯೊಡ್ಡಿದೆ. ಇಂದು ಕರಗ ಮಹೋತ್ಸವ ಅದ್ದೂರಿಯಾಗಿ ನಡೆಯಬೇಕಿತ್ತು. ರಾತ್ರಿ ಇಡೀ ಉತ್ಸವ ಮೆರವಣಿಗೆ ಮಾಡಲಾಗುತ್ತಿತ್ತು. ಆದರೆ ಮೈಸೂರಿನಲ್ಲಿ ಕೊರೋನಾ ಹೆಚ್ಚಾಗಿದ್ದು ಈ ಹಿನ್ನೆಲೆ ಇಟ್ಟಿಗೆಗೂಡು ಕರಗ ಒಂದು ದಿನಕ್ಕೆ ಸಿಮೀತವಾಗಿದೆ.
ಸರಳ, ಸಾಂಪ್ರದಾಯಿಕವಾಗಿ ಕರಗ ಉತ್ಸವ ಆಚರಣೆ ಮಾಡಲು ತೀರ್ಮಾನಿಸಲಾಗಿದೆ. ಇದರಿಂದಾಗಿ ರಾತ್ರಿ ಇಡೀ ನೆಡೆಯುತ್ತಿದ್ದ ಮೆರವಣಿಗೆ ಹಾಗೂ ಐದು ದಿನಗಳ ಪೂಜಾ ಉತ್ಸವವಕ್ಕೆ ಬ್ರೇಕ್ ಬಿದ್ದಿದೆ. ದೇವಾಲಯದಲ್ಲಿ ಸಾಂಪ್ರದಾಯಕ ಪೂಜಾಕೈಂಕರ್ಯಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು ಮನೆ ಮನೆ ಉತ್ಸವ ಕಾರ್ಯಕ್ರಮಕ್ಕೂ ತಡೆ ನೀಡಲಾಗಿದೆ.
Key words: mysore- corona – karaga utsav-simple