ಮೈಸೂರು,ಜೂ,19,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ವೈರಸ್ ಆತಂಕ ಹೆಚ್ಚಾಗುತ್ತಿದ್ದು ಈ ನಡುವೆ ಇಂದು ಒಂದೇ ದಿನ ಐದು ಕೊರೋನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗುವ ಸಾಧ್ಯತೆ ಇದೆ.
ಬೆಳಿಗ್ಗೆಯಷ್ಟೆ ಇಟ್ಟಿಗೆಗೂಡಿನ ನಿವಾಸಿ ಅಜ್ಜಿ ಮತ್ತು ಮೊಮ್ಮಗ ಸೇರಿ ಮೈಸೂರಿನಲ್ಲಿ ನಾಲ್ವರಿಗೆ ಕೊರೋನಾ ಸೋಂಕು ಬರುವರ ಸಾಧ್ಯತೆ ಇದೆ ಎಂದು ಮೈಸೂರು ಡಿಸಿ ಅಭಿರಾಂ ಜೀ ಶಂಕರ್ ತಿಳಿಸಿದ್ದರು. ಇದೀಗ ನಾಲ್ಕಲ್ಲ ಐದು ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ.
ಹೌದು, ಕೋಲಾರದಿಂದ ಬಂದಿದ್ದ ವ್ಯಕ್ತಿಯಿಂದ ಸಹೋದರಿಗೆ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿದೆ. ಮೈಸೂರಿನ ಚದುರಂಗ ರಸ್ತೆಯಲ್ಲಿ ಸಹೋದರಿ ಮನೆಗೆ ಕೋಲಾರದಿಂದ ಸೋಂಕಿತ ವ್ಯಕ್ತಿ ಬಂದಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದ ಬಳಿಯೇ ವ್ಯಕ್ತಿಯ ಸಹೋದರಿಯ ಮನೆ ಇದ್ದು, ವ್ಯಕ್ತಿಯ ಸಹೋದರಿ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ.
ಹೀಗಾಗಿ ಸಹೋದರಿಗೆ ಸೋಂಕು ಹರಡಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಆಕೆಯ ನಿವಾಸದ ಸುತ್ತ ಮುತ್ತ ಕಂಟೈನ್ಮೆಂಟ್ ಜೋನ್ ಮಾಡಲಾಗಿದ್ದು, ಸಹೋದರಿ ಕೆಲಸ ಮಾಡುತ್ತಿದ್ದ ಸರಸ್ವತಿಪುರಂನ ಸಿಂಡಿಕೇಟ್ ಬ್ಯಾಂಕ್ ಗೆ ರೋಗ ನಿರೋಧಕ ದ್ರಾವಣ ಸಿಂಪಡಣೆ ಮಾಡಲಾಗಿದೆ. ಸದ್ಯ ಬ್ಯಾಂಕ್ ಕೂಡ ಸೀಲ್ಡೌನ್ ಮಾಡುವ ಸಾಧ್ಯತೆ ಇದೆ.
Key words: Mysore- Corona Positive – Syndicate Bank -employee