ಮೈಸೂರು,ಮಾ,21,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೊದಲ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದೆ. ಈ ಕುರಿತು ಮಾತನಾಡಿರುವ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ಕೊರೋನಾ ಸೋಂಕಿತ ವ್ಯಕ್ತಿ ಸಂಪರ್ಕದಲ್ಲಿದ್ದವರು ತಪಾಸಣೆ ಮಾಡಿಸಿಕೊಳ್ಳಿ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ಮನವಿ ಮಾಡಿದ್ದಾರೆ.
ಮೈಸೂರಿನಲ್ಲಿ ವ್ಯಕ್ತಿಯೊಬ್ಬರಿಗೆ ಕರೋನಾ ವೈರಸ್ ಪತ್ತೆಯಾದ ಹಿನ್ನೆಲೆ ಈ ಕುರಿತು ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್, ದುಬೈಗೆ ತೆರಳಿದ್ದ 35 ವರ್ಷದ ಸೋಂಕಿತ ವ್ಯಕ್ತಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ವ್ಯಕ್ತಿ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿ ನೇರವಾಗಿ ಕೆ.ಆರ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವ್ಯಕ್ತಿಯನ್ನ ತಪಾಸಣೆಗೊಳಪಡಿಸಿ ರಕ್ತದ ಮಾದರಿ ಪರೀಕ್ಷೆಗೆ ಲ್ಯಾಬ್ ಗೆ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿದ್ದು ವ್ಯಕ್ತಿಗೆ ಪಾಸಿಟಿವ್ ಇರುವುದು ಪತ್ತೆಯಾಗಿದೆ ಎಂದು ತಿಳಿಸಿದರು.
ಹಾಗೆಯೇ ಸೋಂಕಿತ ವ್ಯಕ್ತಿಯನ್ನ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೊರೋನಾ ಸೋಂಕು ಸಂಬಂಧ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು ಆದರೂ ಜನ ಇದನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇನ್ಮುಂದೆ ಜನತೆ ಹೊರಗಡೆ ಓಡಾಡುವುದು. ಹೆಚ್ಚು ಜನ ಸೇರುವುದನ್ನ ಕಡಿಮೆ ಮಾಡಬೇಕು. ಜನ ಈಗಲಾದ್ರೂ ಸೀರಿಯಸ್ ಆಗಬೇಕು. ಎಲ್ಲೆಂದರಲ್ಲಿ ಜನ ಗುಂಪು ಗುಂಪಾಗಿ ಸೇರುತ್ತಿದ್ದಾರೆ. ಜನರಿಗೆ ನಮ್ಮೂರಿಗೆ ಕರೋನ ಬರಲ್ಲ ಎಂಬ ಭಾವನೆ. ಆದರೆ ಇದರಿಂದ ಜನ ಹೊರ ಬರಬೇಕು. ನಾಳೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವಂತೆ ಜನತಾ ಕರ್ಫ್ಯೂಗೆ ಜನ ಬೆಂಬಲ ಕೊಡುತ್ತಾರೆ. ನಂತರದ ದಿನಗಳಿಂದ ಜನರಿಗೆ ಮತ್ತಷ್ಟು ಕ್ರಮ ಮಾಡಬೇಕಾಗುತ್ತೆ. ಎಂದು ಜಿಲ್ಲಾಧಿಕಾರಿ ಅಭಿರಾಂ ಜೀ ಶಂಕರ್ ಹೇಳಿದರು.
ಡಿಸಿ ಅಭೀರಾಂ ಜೀ ಶಂಕರ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಿಷ್ಟು…
ದುಬೈನಿಂದ ನಿನ್ನೆ ಬೆಳಿಗ್ಗೆ ಬೆಂಗಳೂರಿಗೆ ಬಂದು ಬೆಂಗಳೂರಿನಿಂದ ಟ್ಯಾಕ್ಸಿಯ ಮೂಲಕ ಮೈಸೂರಿಗೆ ಬಂದಿದ್ದ ವ್ಯಕ್ತಿ. ಮೈಸೂರಿಗೆ ಬಂದ ತಕ್ಷಣ ಸ್ವತಃ ತಾನಾಗಿಯೇ ಆಸ್ಪತ್ರೆಗೆ ಬಂದಿದ್ದ 35 ವರ್ಷದ ರೋಗಿ. ಇನ್ನೂ ಕೂಡ ಆತನ ರೂಟ್ ಮ್ಯಾಪ್ ಸಿಕ್ಕಿಲ್ಲ. ರಾತ್ರಿ 11.30 ದುಬೈನಲ್ಲಿ ಫ್ಲೈಟ್ ಇತ್ತು. ಬೆಂಗಳೂರಿನಿಂದ ಮೈಸೂರಿಗೆ ಟ್ಯಾಕ್ಸಿಯಲ್ಲಿ ಬಂದಿದ್ದಾರೆ. ಮಂಡ್ಯದ ಸ್ಥಳವೊಂದರಲ್ಲಿ ಟೀ ಕುಡಿದಿದ್ದಾರೆ. ಅವರು ನೇರವಾಗಿ ಮನೆಗೆ ಹೊಗಿಲ್ಲ. ಹುಷಾರಿಲ್ಲ ಅಂತ ಕೆ.ಆರ್. ಆಸ್ಪತ್ರೆಗೆ ಸೇರಿದ್ದಾರೆ. ವ್ಯಕ್ತಿಯ ಸ್ವ್ಯಾಪ್ ಸ್ಯಾಂಪಲ್, ಸ್ಕ್ರೀನಿಂಗ್ ಮಾಡಿ ಖಚಿತ ಆದ ಮೇಲೆ ಸೋಂಕು ದೃಢ ಆಗಿದೆ. ಸದ್ಯ ಕೆಆರ್.ಆಸ್ಪತ್ರೆಯಲ್ಲಿ ಐಸೋಲೇಟ್ ಮಾಡಲಾಗುತ್ತಿದೆ. ಕೆ.ಆರ್.ಆಸ್ಪತ್ರೆಯಲ್ಲಿ ಅವರನ್ನು ಚೆಕ್ ಮಾಡಿದ ವೈದ್ಯರುಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದರು.
ಅವರು ಏರ್ ಇಂಡಿಯಾ ಫ್ಲೈಟ್ ನಲ್ಲಿ ಬಂದಿದ್ದಾರೆ. ಫೈಟ್ ನಲ್ಲಿದ್ದ ಪ್ಯಾಸೆಂಜರ್ ಬಗ್ಗೆ ಕೂಡ ತನಿಕೆ ನಡೆಯುತ್ತಿದೆ. ಏರ್ ಇಂಡಿಯಾ ಅಧಿಕಾರಿಗಳಿಗೆ ಮಾಹಿತಿ ಕೊಡುತ್ತಿದ್ದೇವೆ. ಅವರು ಒಬ್ಬರೇ ಬಂದಿದ್ದಾರೆ. ಬೆಂಗಳೂರು ಮೂಲದ ಟ್ಯಾಕ್ಸಿಯಲ್ಲಿ ಮೈಸೂರಿಗೆ ಆಗಮನ. ಇವರು ಏರ್‌ಪೋರ್ಟ್ ನಲ್ಲಿ ಚೆಕ್ ಆಗಿದೆ ಅಂತ ಹೇಳುತ್ತಿದ್ದಾರೆ. ಆದರೆ ನಾವು ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದೇವೆ. ಒಟ್ಟು ಮೈಸೂರಿನಲ್ಲಿ ನಿಗದಲ್ಲಿದ್ದ ವ್ಯಕ್ತಿಗಳು 240. ಮನೆಯಲ್ಲಿ ನಿಗದಲ್ಲಿರುವ ವ್ಯಕ್ತಿಗಳು 170. ಇಬ್ಬರನ್ನು ಆಸ್ಪತ್ರೆಯಲ್ಲಿ ನಿಗಾದಲ್ಲಿರಿಸಲಾಗಿದೆ. 14 ದಿನ ನಿಗಾ ಮುಗಿಸಿದವರು 69 ಜನ. 31 ಜನರ ಸ್ಯಾಂಪಲ್‌ನಲ್ಲಿ 1 ಪಾಸಿಟಿವ್ ಬಂದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಡಿ.ಸಿ ಅಭಿರಾಮ್ ಜಿ ಶಂಕರ್ ಹೇಳಿದರು.
Key words: mysore- corona virus-mysore dc- abiram ji shankar