ಮೈಸೂರಿನಲ್ಲಿ ಕೊರೊನಾ ವಾರಿಯರ್ಸ್ ಗಿಲ್ಲ ರಕ್ಷಣೆ: ಸೇವೆ ಖಾಯಂ ಮತ್ತು ಜೀವ ವಿಮೆ ನೀಡುವಂತೆ ಆಗ್ರಹ…..

ಮೈಸೂರು,ಜು,6,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣ ತಡೆಗಟ್ಟಲು ಶ್ರಮಿಸುತ್ತಿರುವ ಕೊರೋನಾ ವಾರಿಯರ್ಸ್ ಗೆ ರಕ್ಷಣೆ ಇಲ್ಲದಂತಾಗಿದೆ.

ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ 150 ಸ್ಪಾಪ್ ನರ್ಸ್ ಗಳು ಕೋವಿಡ್ ಕೆಲಸ ನಿರ್ವಹಿಸುತ್ತಿದ್ದು, ತಮಗೆ ರಕ್ಷಣೆ ಇಲ್ಲದರ ಬಗ್ಗೆ ಶಿಷ್ಯವೇತನ ಸ್ಟಾಪ್ ನರ್ಸ್ ಅಳಲು ತೋಡಿಕೊಂಡಿದ್ದಾರೆ.  ತಮಗೆ ಯಾವುದೇ ಜೀವ ವಿಮೆ ಇಲ್ಲ ಮತ್ತು ಉದ್ಯೋಗ ಭದ್ರತೆ ಇಲ್ಲ. ಹೀಗಾಗಿ ಕೋವಿಡ್ ಸಂದರ್ಭಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಷ್ಯವೇತನ ಸ್ಟಾಪ್ ನರ್ಸ್ ಗಳಿಗೆ ಜೀವ ವಿಮೆ ನೀಡುವಂತೆ ಆಗ್ರಹಿಸಿದ್ದಾರೆ.

ಕೊರೊನಾ ಶಂಕಿತ ವಾರ್ಡ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಕ್ವಾರಂಟೈನ್ ಇಲ್ಲ. ಕ್ವಾರಂಟೈನ್ ಗೂ ಅವಕಾಶ ನೀಡಿದೆ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹಾಕಲಾಗುತ್ತಿದೆ. ಜತೆಗೆ ಆಡಳಿತ ಮಂಡಳಿ ಕೇವಲ 10 ಸಾವಿರ ವೇತನ ನೀಡಿ ಹೆಚ್ಚುವರಿ ಕೆಲಸ ಮಾಡಿಸುತ್ತಿದೆ ಎಂದು ಆರೋಪಿಸಿದ್ದಾರೆ.mysore-corona-warriors-protection-permanent-life-insurance

ಹೀಗಾಗಿ ಕೂಡಲೇ ಶಿಷ್ಯವೇತನ ಸ್ಪಾಪ್ ನರ್ಸ್ ಗಳನ್ನು ಖಾಯಂಗೊಳಿಸಬೇಕು. ಖಾಯಂ ನರ್ಸ್ ಗಳಿಗಿರುವ ಸೌಲಭ್ಯಗಳನ್ನುನೀಡಬೇಕು. ಕೋವಿಡ್ ಸಂದರ್ಭಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಷ್ಯವೇತನ ಸ್ಟಾಪ್ ನರ್ಸ್ ಗಳಿಗೆ ಜೀವ ವಿಮೆ ನೀಡುವಂತೆ  ಒತ್ತಾಯಿಸಿದ್ದಾರೆ.

Key words: mysore-Corona Warriors –protection- Permanent – Life Insurance.