ರಾಜೀನಾಮೆ ಬಳಿಕ ‘ ರಜೆ ಪತ್ರ ‘ , ಶಿಲ್ಪನಾಗ್ ಸ್ಪಷ್ಟನೆ.

 

ಮೈಸೂರು, ಜೂ.05, 2021 : (www.justkannada.in news ) : ರಾಜ್ಯದ ಮುಖ್ಯ ಕಾರ್ಯದರ್ಶಿ ಅವರಿಗೆ ನನ್ನ ರಾಜೀನಾಮೆ ಪ್ರತಿಯನ್ನು ಖುದ್ದು ನೀಡಿರುವೆ ಎಂದು ಶಿಲ್ಪನಾಗ್ ಸ್ಪಷ್ಟಪಡಿಸಿದ್ದಾರೆ.

ದೂರವಾಣಿ ಮೂಲಕ ಜಸ್ಟ್ ಕನ್ನಡ ಜತೆ ಶನಿವಾರ ಮಾತನಾಡಿದ ಶಿಲ್ಪನಾಗ್ ಅವರು ಹೇಳಿದಿಷ್ಟು…

jk

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ನನ್ನ ರಾಜೀನಾಮೆ ನಿರ್ಧಾರ ಪ್ರಕಟಿಸಿದೆ. ಅದರಂತೆ ಶುಕ್ರವಾರ ಮೈಸೂರಿಗೆ ಆಗಮಿಸಿದ್ದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರಿಗೆ ನನ್ನ ರಾಜೀನಾಮೆ ಪತ್ರದ ಹಾರ್ಡ್ ಕಾಪಿಯನ್ನು ತಲುಪಿಸಿದೆ. ಜತೆಗೆ ಇ-ಮೇಲ್ ಮೂಲಕವೂ ರಾಜೀನಾಮೆಯನ್ನು ಮೇಲಾಧಿಕಾರಿಗಳಿಗೆ ನೀಡಿರುವೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ರಜೆ ಪತ್ರದ ಬಗ್ಗೆ ಪ್ರಸ್ತಾಪಿಸಿದ ಶಿಲ್ಪನಾಗ್ , ಶುಕ್ರವಾರ ಮುಖ್ಯಕಾರ್ಯದರ್ಶಿ ಮೈಸೂರಿಗೆ ಆಗಮಿಸಿದ್ದಾಗ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡಿದೆ. ಆಗ, ರಾಜೀನಾಮೆ ಮರು ಪರಿಶೀಲಿಸುವಂತೆ ಹೇಳಿದರು. ಆದರೆ ನಾನು ನನ್ನ ನಿರ್ದಾರಕ್ಕೆ ಬದ್ಧವಾಗಿರುವ ವಿಷಯವನ್ನು ತಿಳಿಸಿದೆ ಎಂದರು.

mysore-Vaccination -Testing Center- Increase- Awareness -clothing bags-Mysore city corporation Commissioner -Shilpanag
ಕೃಪೆ-internet

ರಾಜೀನಾಮೆ ಅಂಗೀಕಾರವಾಗಲು ಸಮಯವಿಡಿಯುತ್ತದೆ . ಕಾರಣ ಅದಕ್ಕೆ ಅದರದ್ದೇ ಆದ ನಿಯಮಗಳಿವೆ. ಆದ್ದರಿಂದ ರಾಜೀನಾಮೆ ಪತ್ರ ಅಂಗೀಕಾರವಾಗುವ ತನಕ ಹುದ್ದೆಯಲ್ಲಿ ಮುಂದುವರೆಯುತ್ತೇನೆ. ನನ್ನಿಂದ ಕೋವಿಡ್ ನಿರ್ವಹಣೆ ಹಾಗೂ ಪಾಲಿಕೆ ಆಡಳಿತಾತ್ಮಕ ಕಾರ್ಯಗಳಿಗೆ ತೊಂದರೆ ಆಗಬಾರದು ಎಂಬ ಸಲುವಾಗಿ ಈ ನಿರ್ಧಾರ ಎಂದು ಸ್ಪಷ್ಟಪಡಿಸಿದರು.

ಈ ಕಾರಣಕ್ಕೆ ಜೂ. 5 ರಂದು ಒಂದು ದಿನದ ಸಾಂದರ್ಭಿಕ ರಜೆ ಮಂಜೂರು ಮಾಡಲು ಕೋರಿ, ಜತೆಗೆ ಜೂ.6 ರ ಸಾರ್ವತ್ರಿಕ ರಜೆ ಉಪಯೋಗಿಸಿಕೊಂಡು ಕೇಂದ್ರ ಸ್ಥಾನ ಬಿಡಲು ಅನುಮತಿ ನೀಡುವಂತೆ ಕೋರಿ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿರುವೆ ಎಂದು ಶಿಲ್ಪನಾಗ್ ಅವರು ‘ ಜಸ್ಟ್ ಕನ್ನಡ ‘ ಸ್ಪಷ್ಟಪಡಿಸಿದರು.

 

key words : mysore-corporation-commissioner-shilpa.nag-clarification-mysore