ಮೈಸೂರು,ಜೂನ್,4,2021(www.justkannada.in): ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಗಂಭೀರ ಆರೋಪ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರು ಇದೀಗ ಮತ್ತೆ ಆಕ್ರೋಶ ಹೊರ ಹಾಕಿದ್ದಾರೆ.
ಸುತ್ತೂರು ಮಠದಲ್ಲಿ ಮಾತನಾಡಿದ ಶಿಲ್ಪಾನಾಗ್, ಯಾರಿಗೂ ಸಹ ನಾನು ಮಾಡಿದ್ದೇ ಸರಿ ಎಂಬ ಭಾವನೆ ಬೇಡ. ಒಬ್ಬರ ಅಹಂಕಾರದಿಂದ ವ್ಯವಸ್ಥೆ ಹಾಳಾಗುತ್ತಿದೆ. ಹೀಗಾಗಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಎಲ್ಲವೂ ನಾನೇ ಸರಿ ಎಂಬುದು ಸರಿಯಲ್ಲ. ಜಿಲ್ಲಾಡಳಿತದಿಂದ ತುಂಬಾ ಲೋಪದೋಷ ಇತ್ತು. ಪಾಲಿಕೆಯಿಂದ ಸಾಕಷ್ಟು ಕೋವಿಡ್ ಕೆಲಸ ಆಗಿದೆ. ಈ ನಡುವೆ ಜಿಲ್ಲಾಧಿಕಾರಿಗಳು ಹೆಚ್ಚು ಇಂಟ್ರೆಸ್ಟ್ ತೋರಿಸಬಹುದಿತ್ತು. ನಾನು ಎಲ್ಲ ಸಂಸ್ಥೆಗಳ ಜೊತೆ ಮಾತಾಡಿ ಕೋವಿಡ್ ಕಂಟ್ರೋಲ್ ಗೆ ಸಿದ್ದತೆ ಮಾಡಿದ್ದವು. ಈಗೋ ಇಷ್ಟು ದೊಡ್ಡದಾಗಿ ಇರಬಾರದು. ಎಲ್ಲವನ್ನು ಎಲ್ಲರನ್ನ ಸಮಾನಾಗಿ ನೋಡಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನನಗೆ ಈಗೋ ಇರಲಿಲ್ಲ, ಕೆಲಸ ಮಾಡಬೇಕಿದ್ದಿದ್ದು ನನ್ನ ಉದ್ದೇಶ. ಸಿಎಸ್ ಆರ್ ಫಂಡ್ ಬಗ್ಗೆ ಯಾರು ಜವಾಬ್ದಾರಿ ತೆಗೆದುಕೊಂಡಿಲ್ಲ. ಹಾಗಾಗಿ ನಾನೇ ಇದರ ಜವಾಬ್ದಾರಿ ತೆಗೆದುಕೊಂಡೆ. ಎಲ್ಲರೂ ಕರೋನಾ ಕಂಟ್ರೋಲ್ ಗೆ ಕೈ ಜೋಡಿಸಿದ್ದಾರೆ ಎಂದು ಶಿಲ್ಪಾನಾಗ್ ತಿಳಿಸಿದರು.
ಐಎಎಸ್ ರಾಜೀನಾಮೆ ನನ್ನ ದುಡುಕಿನ ನಿರ್ಧಾರ ಅಲ್ಲ. ರಾಜೀನಾಮೆ ನಿರ್ಧಾರ ನೋವಿನಿಂದ ತೆಗೆದುಕೊಂಡಿದ್ದು. ವಾರ್ ರೂಮ್ ನಲ್ಲಿ ಲೋಫದೋಷಗಳಿತ್ತು. ಕೊರೋನಾ ನಿಯಂತ್ರಣದಲ್ಲಿ ಕೆಲಸ ಮಾಡಿದ್ದೇನೆ. ಕೊರೋನಾ ನಿಯಂತ್ರಣಕ್ಕೆ ಶ್ರಮಿನಿಸಿದ್ದೇನೆ. ನಾನು ಯಾವುದೇ ರೀತಿ ತಪ್ಪು ಮಾಡಿದ್ದರೆ ಕ್ಷಮಿಸಿ ಎಂದು ಶಿಲ್ಪಾನಾಗ್ ತಿಳಿಸಿದರು.
Key words: mysore –corporation- Commissioner-Shilpanag – against- DC Rohini Sindhuri