ಮೈಸೂರು,ಡಿ,17,2019(www.justkannada.in): ಸಾರ್ವಜನಿಕವಾಗಿ ತ್ಯಾಜ್ಯ ಬಿಸಾಡಿದ ಮೈಸೂರಿನ ಬಿಗ್ ಬಜಾರ್ ಗೆ ಬಾರಿ ಮೈಸೂರು ಮಹಾನಗರ ಪಾಲಿಕೆ ದಂಡ ವಿಧಿಸಿದೆ.
ಬಿಗ್ ಬಜಾರ್ ಮುಂಭಾಗ ಅಶುಚಿತ್ವ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆರೋಗ್ಯ ಅಧಿಕಾರಿ ಡಾ.ನಾಗರಾಜ್ 7 ಸಾವಿರ ರೂ. ದಂಡವಿಧಿಸಿದ್ದಾರೆ. ಜೆಎಲ್ಬಿ ರಸ್ತೆಯಲ್ಲಿರುವ ಬಿಗ್ ಬಜಾರ್ ಸೂಪರ್ ಮಾರ್ಕೆಟ್ನ ಫುಟ್ಪಾತ್ನಲ್ಲಿ ಮರದ ಸುತ್ತಲೂ ಕಸ ಹರಡಿಕೊಂಡಿತ್ತು.
ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಲು 5,000 ರೂ ಮತ್ತು ತ್ಯಾಜ್ಯವನ್ನು ಬೇರ್ಪಡಿಸದಿದ್ದಕ್ಕಾಗಿ ಮೈಸೂರು ಮಹಾನಗರ ಪಾಲಿಕೆ ಬಿಗ್ ಬಜಾರ್ ಗೆ 2,000 ರೂ., ಒಟ್ಟು 7,000 ರೂ ದಂಡ ವಿಧಿಸಿದೆ. ಇನ್ಮುಂದೆ ಸೂಕ್ತ ರೀತಿಯಲ್ಲಿ ಕಸ ನಿರ್ವಹಣೆ ಮಾಡುವಂತೆ ಸೂಚನೆ ನೀಡಿದೆ. ಪರಿಶೀಲನೆಯಲ್ಲಿ ಪಾಲಿಕೆ ಎಂಜಿನಿಯರ್ ಪೂರ್ಣಿಮಾ ಮತ್ತು ಆರೋಗ್ಯ ನಿರೀಕ್ಷಕ ಹರೀಶ್ ಟಿ ಡಿ ಭಾಗಿಯಾಗಿದ್ದರು.
Key words: Mysore corporation-fined-Big Bazaar -waste