ಮೈಸೂರು, ಜ.19, 2022 : (www.justkannada.in news ) ನಗರದ ಮಾತೃಮಂಡಳಿ ವೃತ್ತದ ನಾಮಕರಣ ವಿವಾದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಅಂಥದ್ದೆ ವಿವಾದಕ್ಕೆ ದಟ್ಟಗಳ್ಳಿ ರಿಂಗ್ ರಸ್ತೆಯ ವೃತ್ತ ಎಡೆಮಾಡಿಕೊಟ್ಟಿದೆ.
ಇಲ್ಲಿನ ದಟ್ಟಗಳ್ಳಿಯ ರಿಂಗ್ ರಸ್ತೆಯ ವೃತ್ತಕ್ಕೆ ಪಾಲಿಕೆ ಅನುಮತಿ ಪಡೆಯದೇ ಕೆಲವರು ರಾತ್ರೋರಾತ್ರಿ ದಿಢೀರನೆ ಆದಿಚುಂಚನಗಿರಿ ಹಿರಿಯ ಶ್ರೀಗಳ ಹೆಸರುಳ್ಳ ಫಲಕ ಅಳವಡಿಸಿರುವುದು ಈಗ ವಿವಾದಕ್ಕೆ ಎಡೆಮಾಡಿದೆ.
ರಾಮಕೃಷ್ಣನಗರದ ಆಂದೋಲನ ವೃತ್ತದಿಂದ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ಜಂಕ್ಷನ್‌ನಲ್ಲಿ ಸುಗಮ ಸಂಚಾರಕ್ಕೆ ನಿರ್ಮಿಸಲಾಗಿದ್ದ ವೃತ್ತಕ್ಕೆ ಇದೀಗ ಕೆಲವರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ವೃತ್ತ ಎಂದು ಸ್ವಯಂ ನಾಮಕರಣ ಮಾಡಿ ಶ್ರೀಗಳ ಫೋಟೊ ಇರುವ ಫಲಕ ಜೋಡಿಸಿದ್ದಾರೆ.
ಸ್ವಾಮೀಜಿ ಅವರ 77ನೇ ಜನ್ಮದಿನದ ಸ್ಮರಣೆ ಪ್ರಯುಕ್ತ ಶ್ರೀಗಳ ಅಭಿಮಾನಿಗಳು ಮತ್ತು ಭಕ್ತರು ಪಾಲಿಕೆಯ ಅನುಮತಿ ಪಡೆಯದೇ ಈ ಕೆಲಸ ಮಾಡಿದ್ದಾರೆ. ನಿಯಮಾವಳಿಗಳ ಪ್ರಕಾರ ನಗರದ ಯಾವುದೇ ರಸ್ತೆ, ವೃತ್ತಗಳಿಗೆ ಹೊಸ ಹೆಸರನ್ನು ನಾಮಕರಣ ಮಾಡಿ, ಫಲಕ ಅಳವಡಿಸಬೇಕೆಂದರೆ ನಗರ ಪಾಲಿಕೆಯ ಅನುಮತಿ ಬೇಕು. ಪಾಲಿಕೆ ಸಮ್ಮತಿ ಇಲ್ಲದೇ ಇಂಥ ಕೆಲಸ ಮಾಡಿದರೆ, ಅದಕ್ಕೆ ಮಾನ್ಯತೆ ಇರುವುದಿಲ್ಲ.
ಹಿಂದಿನ ವಿವಾದ :
ಕೆಲ ದಿನಗಳ ಹಿಂದೆ ನಟ ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ಮೈಸೂರಿನ ಆರ್.ಟಿ.ನಗರದ ರಿಂಗ್ ರಸ್ತೆ ಹಾಗೂ ಲಿಂಗಾಂಬುದ್ದಿ ಪಾಳ್ಯ ಜಂಕ್ಷನ್ ನಲ್ಲಿ ಪುನೀತ್ ಪುತ್ಥಳಿ ಅಳವಡಿಕೆಗೆ ಕೆಲ ಯುವಕರು ಮುಂದಾಗಿದ್ದರು. ಆಗ ಪಾಲಿಕೆ ಅನುಮತಿ ಪಡೆಯದೇ ಪುತ್ಥಳಿ ಅಳವಡಿಸುವಂತಿಲ್ಲ ಎಂದು ಪೊಲೀಸರು ಫಲಕ ಅಳವಡಿಸಲು ಅಡ್ಡಿಪಡಿಸಿದ್ದರು. ಇದನ್ನು ವಿರೋಧಿಸಿ ಅಪ್ಪು ಅಭಿಮಾನಿಗಳು ಕುವೆಂಪುನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಸಹ ನಡೆಸಿದ್ದರು. ಆಗ ಪೊಲೀಸರು ಪ್ರತಿಭಟನಕಾರರಿಗೆ ನಗರ ಪಾಲಿಕೆಯ ನೀತಿ, ನಿಯಮಗಳ ಬಗ್ಗೆ ಅರಿವು ಮೂಡಿಸಿದ್ದರು.
ಇದಾದ ಕೆಲ ದಿನಗಳ ಬಳಿಕ ಕುವೆಂಪು ಜಯಂತಿ ದಿನದಂದು ಮಾತೃಮಂಡಳಿ ವೃತ್ತದಲ್ಲಿ ಕೆಲ ಸ್ಥಳೀಯರು ಕುವೆಂಪು ಅವರ ಭಾವಚಿತ್ರವಿರಿಸಿ ಕಾರ್ಯಕ್ರಮ ನಡೆಸಿದರು. ಈ ವೇಳೆ ಮತ್ತೊಂದು ಗುಂಪು, ಅಲ್ಲಿ ಮೊದಲಿಂದಲೂ ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರ ಭಾವಚಿತ್ರವೇ ಇರುವುದು. ಆದ್ದರಿಂದ ವೃತ್ತಕ್ಕೆ ಅಂಬೇಡ್ಕರ್ ಹೆಸರು ನಾಮಕರಣ ಮಾಡಲು ಆಗ್ರಹಿಸಿತು.
ಎರಡು ಗುಂಪುಗಳು ಕುವೆಂಪು-ಅಂಬೇಡ್ಕರ್ ಪರ ದನಿ ಎತ್ತಿದ್ದ ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಕಡೆಗೆ ನಗರ ಪಾಲಿಕೆ ಅಧಿಕಾರಿಗಳು, ಪೊಲೀಸರ ಬಿಗಿ ಭದ್ರತೆಯಲ್ಲಿ ವೃತ್ತವನ್ನೇ ತೆರವುಗೊಳಿಸಿದರು.
ಇದೀಗ, ದಟ್ಟಗಳ್ಳಿ ರಿಂಗ್ ರಸ್ತೆಯಲ್ಲೂ ಕೆಲವರ ಕಾರಣದಿಂದ ಅಂಥದ್ದೆ ಘಟನೆ ಪುನರಾವರ್ತನೆಯಾಗುವ ಅಪಾಯ ಎದುರಾಗಿದೆ. ಅನುಮತಿ ಪಡೆಯದೇ ಹೀಗೆ ವೃತ್ತಕ್ಕೆ ದಾರ್ಶನಿಕರ ಹೆಸರನ್ನು ನಾಮಕರಣ ಮಾಡಿ ಫಲಕ ಅಳವಡಿಸುವ ಪರಿಪಾಟಲು ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಡುತ್ತದೆ. ಇಂಥ ಕೃತ್ಯಗಳು ಮುಂದುವರೆದಲ್ಲಿ ಅದು ಸಮಾಜದ ಸ್ವಾಸ್ಥ ಹಾಳುಮಾಡು ಅಪಾಯವಿರುತ್ತದೆ ಎಂಬುದು ಮೈಸೂರಿನ ಪ್ರಜ್ಙಾವಂತ ನಾಗರಿಕರ ಅಳಲು.
key words : Mysore-corporation-naming-controversy-dattagalli-ring-road
ENGLISH SUMMARY…
After Puneeth, Ambedkar, Kuvempu, it’s now Chunchanagiri Swamiji’s ‘Controversial Circle’
Mysuru, January 19, 2022 (www.justkannada.in): Even as the controversy over the renaming of the Matrumandali Circle in Mysuru City is still in the memory of the people, yet another similar controversy has arisen. This time it is the Dattagalli Ring Road Circle, which has created a controversy.
Naming of the Dattagalli Ring road circle in the name of the Adichunchanagiri Seer overnight, without getting the approval of the authority concerned, by some unknown persons has led to the controversy. A circle is formed at the junction that joins the ring road from the Andolana Circle in Ramakrishnanagara. It is alleged that some unknown persons kept a picture of the Sri Balagangadharanatha Swamiji of the Adichuchanagiri Math, with his name after the circle overnight.
Several people have alleged that a few fans and devotees of the Seer are behind this act. They have attempted to name this circle after the Adichunchanagiri Math seer on the occasion of his 77th Birth Anniversary, without getting permission from the authority concerned. Prior permission should be taken from the MCC to name the circle. In case if the rules are not followed the naming will become invalid.
Keywords: Dattagalli Ring road/ circle/ naming/ Adichuchcanagiri Math/ Sri Balagangadharanatha Swamiji/ controversy