ಮೈಸೂರು, ಜ.19, 2020 : (www.justkannada.in news ) : ಮೈಸೂರು ವಿವಿಯಲ್ಲಿ ಪ್ರತಿಭಟನೆ ನಡೆಸಿದ್ದ ನಳಿನಿ ಪರ ವಕಾಲತ್ತು ವಹಿಸಲು ನಾಳೆ ಮೈಸೂ ರಿಗೆ ವಕೀಲರ ತಂಡ ಆಗಮಿಸಲಿದೆ.
ಈಗಾಗಲೇ ಮೈಸೂರು ವಿವಿ ಪ್ರತಿಭಟನೆಯಲ್ಲಿ ಭಾಗವಹಿಸಿ ಎಫ್.ಐ.ಆರ್. ದಾಖಲಿಸಿರುವ ವಿದ್ಯಾರ್ಥಿಗಳ ಪರ ವಕಾಲತ್ತು ವಹಿಸದಿರಲು ಮೈಸೂರು ವಕೀಲರ ಸಂಘ ನಿರ್ಧರಿಸಿದೆ. ಈ ನಡುವೆ ವಕೀಲರ ಸಂಘದ ತೀರ್ಮಾನವನ್ನು ಮರು ಪರಿಶೀಲಿಸುವಂತೆ ಮೈಸೂರಿನ ಪ್ರಗತಿಪರ ಸಂಘಟೆಗಳು ಪತ್ರ ಬರೆದು ಒತ್ತಾಯಿಸಿದ್ದವು.
ಈ ಹಿನ್ನೆಲೆಯಲ್ಲಿ ನಾಳೆ ಬೆಂಗಳೂರಿನ ವಕೀಲರ ತಂಡ ಜಗದೀಶ್ ಅವರ ನೇತೃತ್ವದಲ್ಲಿ ನಳಿನಿ ಕೇಸಿಗಾಗಿ ಮೈಸೂರಿಗೆ ಆಗಮಿಸುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಈ ಸಂಬಂಧ ಹಿರಿಯ ನ್ಯಾಯಾವಾದಿ ಸಿ.ಎಸ್.ದ್ವಾರಕಾನಾಥ್ ಫೇಸ್ ಬುಕ್ ಪುಟದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ವಕೀಲರ ತಂಡದ ಜತೆಗೆ ಅನೇಕ ಮಂದಿ ವೃತ್ತಿಧರ್ಮದಲ್ಲಿ ನಂಬಿಕೆಯಿಟ್ಟ ವಕೀಲರು ರಾಜ್ಯದ ಎಲ್ಲೆಡೆಯಿಂದ ಬರಲಿದ್ದಾರೆ. ಮೈಸೂರಿನ ಜನಪರ ವಕೀಲರೊಂದಿಗೆ ನನ್ನ ವಕಾಲತ್ತೂ ಸೇರಿದಂತೆ ನಿಕಟಪೂರ್ವ ಎಸ್.ಪಿ.ಪಿ.ಯಾಗಿದ್ದ ಹಿರಿಯ ವಕೀಲರಾದ ಬಿ.ಟಿ.ವೆಂಕಟೇಶ್, ಖ್ಯಾತ ಹಾಗೂ ಹಿರಿಯ ಕ್ರಿಮಿನಲ್ ಲಾಯರ್ ಗಳಾದ ಶಂಕರಪ್ಪ, ಕಾಶೀನಾಥ್ ಮುಂತಾದವರ ವಕಾಲತ್ತಿನೊಂದಿಗೆ ನಳಿನಿ ಪ್ರಕರಣದಲ್ಲಿ ಸದರಿ ನ್ಯಾಯಾಲಯದಲ್ಲಿ ಹಾಜರಾಗಲಿದ್ದಾರೆ. ದಯವಿಟ್ಟು ನಿಮ್ಮ ನೈತಿಕ ಬೆಂಬಲ ನೀಡಿ ಎಂದು ಸಿ.ಎಸ್.ದ್ವಾರಕಾನಾಥ್ ಮನವಿ ಮಾಡಿದ್ದಾರೆ.
Key words : mysore-court-c.s.dwarakanath-advocate-nalini-mysore-university-police