ಬೆಂಗಳೂರು, ಮೇ, 29.2021 : (www.justkannada.in news) : ದೇಶದ್ರೋಹ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗೆ ನ್ಯಾಯಾಲಯದಿಂದ ಶಿಕ್ಷೆ ಪ್ರಕಟ.
ಕಳೆದ 15 ವರ್ಷಗಳ ಹಿಂದೆ ಮೈಸೂರಿನಲ್ಲಿ ನಡೆದಿದ್ದ ಶಂಕಿತ ಉಗ್ರರ ಬಂಧನಕ್ಕೆ ಸಂಬಂಧಿಸಿದಂತೆ ಸುಧೀರ್ಘ ವಿಚಾರಣೆ ನಡೆದು ಇದೀಗ, ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ವಿಶೇಷ ಅಂದ್ರೆ, ಅಂದು ಪ್ರಕರಣ ನಡೆದಾಗ ಮೈಸೂರು ನಗರ ಪೊಲೀಸ್ ಆಯುಕ್ತರಾಗಿದ್ದ ಹಾಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿರುವ ಪ್ರವೀಣ್ ಸೂದ್, ಖುದ್ದು ನ್ಯಾಯಾಲಯಕ್ಕೆ ತೆರಳಿ ಜ.27 ರಂದು ಸಾಕ್ಷ್ಯ ನುಡಿದಿದ್ದರು.
ಘಟನೆ ವಿವರ :
ಮೈಸೂರು ನಗರದಲ್ಲಿ ಪಾಕಿಸ್ತಾನಿ ಮೂಲದ ಶಂಕಿತ ಉಗ್ರಗಾಮಿಗಳು ದುಷ್ಕೃತ್ಯ ಎಸಗಲು ಸಂಚು ನಡೆಸುತ್ತಿರುವ ಬಗ್ಗೆ ಗುಪ್ತಚಾರ ವಿಭಾಗದಿಂದ ಖಚಿತ ಮಾಹಿತಿ ದೊರೆತಿದ್ದು, ಈ ಬಗ್ಗೆ ನಗರ ಪೊಲೀಸರ ವಿಶೇಷ ತಂಡ ತೀವ್ರ ನಿಗಾ ವಹಿಸಿ, ದಿನಾಂಕ: 26/10/2006 ರಂದು ರಾತ್ರಿ ಮೈಸೂರು ನಗರ ವಿಜಯನಗರ ಹೊರ ವರ್ತುಲ ರಸ್ತೆಯ ಹೈ-ಟೆನ್ನನ್ ವೈರ್ ರಸ್ತೆಯಲ್ಲಿ ಇಬ್ಬರು ಶಂಕಿತ ವ್ಯಕ್ತಿಗಳು ಸಂಶಯಾಸ್ಪದವಾಗಿ ಹಿರೋ ಮುಕ್ ದ್ವಿ ಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಆರೋಪಿಗಳಾದ ಫಹಾದ್ @ ನಡುತಣಿ @ ಮಹಮ್ಮದ್ ಕೋಯ ಜನ್ ಅಬ್ದುಲ್ ಹೈ @ ಅಬ್ದುಲ್ ಕೋಯಾ, 24 ವರ್ಷ (2006ನೇ ಸಾಅಗೆ), ನಂ: ಕೆ314, ಎಫ್ ಬ್ಲಾಕ್, ನಾರ್ಥ್ ನಾಜಮಾ ಬಾದ್, ಕರಾಚಿ, ಪಾಕಿಸ್ಥಾನ, ಹಾಲ ವಾಸ: ಮನೆ ನಂ: 186, 4ನೇ ಕ್ರಾಸ್, 2ನೇ ಹಂತ, ರಾಜೀವ ನಗರ, ಮೈಸೂರು ಹಾಗೂ
ಮೊಹಮ್ಮದ್ ಅಲಿ ಹುಸೇನ್ @ ಜಾಹಂಗೀರ್, @ ಖಾಸಿಂ @ ಅಫ್ಘಾನ್ @ ಆಸೀಫ್ ಖಾನ್ @ ಜಹಾರಿ ಚಿನ್ ಅಬ್ದುಲ್ ಹಜೀಜ್, 24 ವರ್ಷ (2006ನೇ ಸಾಅಗೆ), ಟ್ಯಾಂಕ್ ಮೊಹಲ್ಲಾ, ಅಫ್ತಾಬ್ ಮಂತರ, ಹಜಾರಾ ಡಿವಿಜನ್, ಪಾಕಿಸ್ತಾನ, ಹಾಲಿ ವಾಸ: ಮನೆ ನಂ: 186, 4ನೇ ಕ್ರಾಸ್, 2ನೇ ಹಂತ, ರಾಜೀವ ನಗರ, ಮೈಸೂರು.
ಇವರನ್ನು ನಗರ ಪೊಲೀಸರ ತಂಡ ತಡೆದು ಶೋಧನೆ ಮಾಡಲು ಮುಂದಾದಾಗ, ಶಂಕಿತರು ತಮ್ಮ ಬಳಿ ಇದ್ದ ಎ.ಕೆ. 47 ಬಂದೂಕಿನಿಂದ ಪೊಲೀಸರ ಕಡೆಗೆ ಫೈರ್ ಮಾಡಿ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆಗ ಪೊಲೀಸರು ಸಹ ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದರು.
ಈ ವೇಳೆ ಆರೋಪಿಗಳು ಪಾಕಿಸ್ತಾನದ ಮೂಲದವರೆಂದು ತಿಳಿದು ಬಂದಿದ್ದು, ಅಕ್ರಮವಾಗಿ ಆರೋಪಿಗಳು ಹೊಂದಿದ್ದ. ಎ.ಕೆ. 47 ಬಂದೂಕು ಹಾಗೂ ಜೀವಂತ ಗುಂಡುಗಳು, ಸ್ಯಾಟಲೈಟ್ ಫೋನ್, ಹಿರೋ ಪುಕ್ ದ್ವಿ ಚಕ್ರ ವಾಹನ ಹಾಗೂ ಇತರೇ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಇವರುಗಳ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 165/2006 ಕಲಂ: 307, 332, 427, 464, 468, 471, 114, 121, 121 (a) (b), 149 IPC , sections 25(d) 25(1) (b) 25(1) (c), 27 (f) 28 of Indian Arms Act, sections 14 of Foreigners Act, Sec 12 Pass Port Act-1967, Sec 5 (a) (b) Explosive Substances Act-1908, Sec 10, 11, 16,17,18, 20, 23 of Unlawful Activities (prevention) Act-1967 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ 2006ನೇ ಸಾಲಿನಲ್ಲಿ ಮೈಸೂರು ನಗರದ ಪೊಲೀಸ್ ಆಯುಕ್ತರವರಾಗಿದ್ದ ಹಾಗೂ ಹಾಲಿ ಕರ್ನಾಟಕ ರಾಜ್ಯದ ಡಿ.ಜಿ. ಮತ್ತು ಐ.ಜಿ.ಪಿ. ಪ್ರವೀಣ್ ಸೂದ್ ರವರು ಈ ಕೇಸಿನ ನೇರ ಉಸ್ತುವಾರಿಯನ್ನು ವಹಿಸಿಕೊಂಡು, ತನಿಖೆಗೆ ಒತ್ತು ನೀಡಿ ಪ್ರತ್ಯೇಕವಾಗಿ ತಂಡಗಳ ರಚನೆ ಮಾಡಿ ಅವಶ್ಯಕ ದಾಖಲಾತಿಗಳು ಮತ್ತು ಸಾಕ್ಷ್ಯಧಾರಗಳನ್ನು ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಈ ಪ್ರಕರಣದ ವಿಚಾರಣೆಯು ಬೆಂಗಳೂರಿನ ಪ್ರದಾನ ಸಿಟಿ ಸಿವಿಲ್ ಮತ್ತು ಸೆಷನ್ ನ್ಯಾಯಾಲಯದಲ್ಲಿ ನಡೆದಿದ್ದು, ಪೊಲೀಸ್ ಆಯುಕ್ತರವರು ತನಿಖಾ ಕಾಲದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಡಿ.ಜಿ. ಮತ್ತು ಐ.ಜಿ.ಪಿ.ಪ್ರವೀಣ್ ಸೂದ್ , 27/01/2021 ರಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿ ಸಾಕ್ಷ್ಯ ನುಡಿದಿದ್ದರು. ಆಮೂಲಕ ವೃತ್ತಿಪರತೆಯನ್ನು ಪ್ರದರ್ಶಿಸಿದ್ದರು.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರದಾನ ಸಿಟಿ ಸಿವಿಲ್ ಮತ್ತು ಸೆಷನ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, 22/04/2021 ರಂದು ಘನ ನ್ಯಾಯಾಲಯವು 1ನೇ ಆರೋಪಿಗೆ 121 (ಎ) ಐ.ಪಿ.ಸಿ.ಗೆ 10 ವರ್ಷ ಸಜೆ, 10,000/-ರೂ ದಂಡ ಸೇರಿದಂತೆ ಪ್ರತಿ ಕಲಂಗಳಿಗೆ ಪ್ರತ್ಯೇಕವಾಗಿ ಶಿಕ್ಷೆ ಮತ್ತು ದಂಡವನ್ನು ವಿಧಿಸಿದರು.
ಈ ಪ್ರಕರಣದಲ್ಲಿ ಉಳಿದ ಆರೋಪಿಗಳಾದ ಎ2 ಆರೋಪಿ ಜಮ್ಮು ಕಾಶ್ಮೀರದ ಪ್ರಕರಣಗಳಲ್ಲಿ ಜಮ್ಮು ಕಾಶ್ಮೀರ ನ್ಯಾಯಾಲಯದ ವಿಚಾರಣೆ ಬಂಧಿಯಾಗಿರುತ್ತಾನೆ. ಎ3 ಆರೋಪಿ ಮರಣ ಹೊಂದಿದ್ದು, ಎ4 ರಿಂದ ಎ8 ಆರೋಪಿಗಳಿಗೆ ಈ ಹಿಂದೆ 03 ವರ್ಷಗಳ ಕಾಲ ಸಜೆ ನೀಡಿ ಬಿಡುಗಡೆ ಹೊಂದಿರುತ್ತಾರೆ. ಎ9 ರಿಂದ ಎ20 ರವರೆಗಿನ ಆರೋಪಿಗಳು ಜಮ್ಮು ಕಾಶ್ಮೀರ ಮತ್ತು ವಿದೇಶಿಯರಾಗಿದ್ದು, ಇವರ ವಿರುದ್ಧ ತಲೆ ಮರೆಸಿಕೊಂಡಿರುವ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಲಾಗಿದೆ.
key words : mysore-court-pakisthan-fahad-ali.husain-terrorist-bangalore-praveen.sood