ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಬೆದರಿಕೆ ಹಾಕಿದ್ದ ಅಪರಾಧಿಗೆ ಕಠಿಣ ಶಿಕ್ಷೆ, ದಂಡ ವಿಧಿಸಿ ಮೈಸೂರು ಕೋರ್ಟ್.

ಮೈಸೂರು,ಮಾರ್ಚ್,7,2022(www.justkannada.in): ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಬೆದರಿಕೆ ಹಾಕಿದ್ದ ಅಪರಾಧಿಗೆ 10 ವರ್ಷಗಳ ಕಾಲ ಜೈಲುವಾಸ ಮತ್ತು 10 ಸಾವಿರ ರೂ. ದಂಡ ವಿಧಿಸಿ ಮೈಸೂರಿನ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.

ಮೈಸೂರು ಜಿಲ್ಲೆ ಕೆಆರ್ ನಗರ ತಾಲ್ಲೂಕು ಸಾತಿಗ್ರಾಮ ಗ್ರಾಮದ ನಿವಾಸಿ ರವಿಕುಮಾರ್ (30)   ಜೈಲುಶಿಕ್ಷೆಗೆ ಗುರಿಯಾದ ಅಪರಾಧಿ.  2018 ರ ಜುಲೈ ನಲ್ಲಿ ಕೆ. ಆರ್. ನಗರ ಠಾಣಾ ವ್ಯಾಪ್ತಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿ ಆಕೆಗೆ ಕೊಲೆ ಬೆದರಿಕೆ ಹಾಕಿದ್ದ, ಆರೋಪಿ ರವಿಕುಮಾರ್ ಸಂತ್ರಸ್ಥ ಮಹಿಳೆಯೊಂದಿಗೆ ಸಲುಗೆ ಬೆಳಸಿಕೊಂಡು ಆಕೆಯನ್ನು ಪುಸಲಾಯಿಸಿ ಪ್ರೀತಿಸುವಂತೆ ಮಾಡಿ ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ನಂತರ ಕೊಲೆ ಬೆದರಿಕೆ ಹಾಕಿದ್ದನು.

ನಂತರ ಈ ಬಗ್ಗೆ ಸ೦ತ್ರಸ್ಥ ಮಹಿಳೆ ಕೆ. ಆರ್. ನಗರ ಠಾಣೆಗೆ ದೂರು ದಾಖಲಿಸಿದ್ದು ತದನಂತರ ಸದರಿ ಠಾಣಾ ಪೊಲೀಸರು ತನಿಖೆ ನಡೆಸಿ ಆರೋಪಿಯ ವಿರುದ್ಧ ಆಗಿನ ಆರಕ್ಷಕ ನಿರೀಕ್ಷಕರಾಗಿದ್ದ ರಘು ರವರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಈ ಬಗ್ಗೆ ಆರೋಪಿಯ ವಿರುದ್ಧ ಮೈಸೂರಿನ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಯಶವಂತಕುಮಾರ್ ಅವರು ಆರೋಪಿಯು ಅತ್ಯಾಚಾರ ಮಾಡಿ ಕೊಲೆ ಬೆದರಿಕೆ ಹಾಕಿದ್ದ ಬಗ್ಗೆ ಆತನ ವಿರುದ್ಧ ಸಾಕ್ಷಾಧಾರಗಳು ರುಜುವಾತಾಗಿದ್ದರಿಂದ ಅಪರಾಧಿಯೆಂದು ತೀರ್ಮಾನಿಸಿ ಅತ್ಯಾಚಾರ ಮಾಡಿದ ಅಪರಾಧಕ್ಕೆ 10 (ಹತ್ತು) ವರ್ಷಗಳ ಕಠಿಣ ಸೆರೆಮನೆ ವಾಸದ ಶಿಕ್ಷೆ ಮತ್ತು 10,000/- ರೂಪಾಯಿಗಳ ದಂಡ ವಿಧಿಸಿದೆ ಮತ್ತು ಕೊಲೆ ಬೆದರಿಕೆ ಹಾಕಿದ್ದ ಅಪರಾಧಕ್ಕಾಗಿ 1 (ಒಂದು) ವರ್ಷದ ಸೆರೆಮನೆವಾಸ ಮತ್ತು 5000/- ರೂಪಾಯಿಗಳ ದಂಡ ವಿಧಿಸಿ ಸಂತ್ರಸ್ಥೆಗೆ 1,00,000 (ಒಂದು ಲಕ್ಷ) ರೂಪಾಯಿಗಳನ್ನು ಪರಿಹಾರವನ್ನು ನೀಡುವಂತೆ ಶಿಕ್ಷೆ ವಿಧಿಸಿ ತೀರ್ಪು  ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾಗಿ ಕೆ ನಾಗರಾಜ ಅವರು ವಾದ ಮಂಡಿಸಿದ್ದರು.

Key words: Mysore court -sentenced – accused-rape

ENGLISH SUMMARY…

Rapist sentenced to 10 years jail by Mysuru Court
Mysuru, March 7, 2022 (www.justkannada.in): The 7th Additional District and Sessions Court of Mysuru has sentenced a person who was convicted of raping and threatening a woman with ten years jail term and Rs. 10,000 fine.
Ravikumar (3), a resident of Saatigrama, in K.R. Nagar Taluk, of Mysuru District, is the convict. He had raped a woman in K.R. Nagar Taluk limits in July 2018 and had threatened to kill her. He had developed intimacy with her and raped her on the pretext of loving and marrying her. Later he refused to marry her and threatened to kill her.
The victim had registered a case against him at the K.R. Nagara police station. After investigation, Police Inspector Raghu had submitted a charge sheet in the court against the criminal.
The 7th additional District and Sessions Court Judge Yashwanth Kumar, today gave the judgment, sentencing the convict after the crime was proved. The sentence includes ten years of rigorous imprisonment, along with a fine of Rs. 10,000, and one-year additional imprisonment for threatening to kill the victim along with Rs.5,000. The judgment also read that a sum of Rs. 1 lakh should be paid to the victim as compensation. K. Nagaraj argued on behalf of the government
Keywords: Rapist/ K.R. Nagar/ convicted/ 10 years imprisonment