ಮೈಸೂರು,ಜು,9,2020(www.justkannada.in): ಮೈಸೂರಿನಲ್ಲಿ ಕೊರೋನಾ ಸೋಂಕಿತರು ದಿನೇ ದಿನೇ ಹೆಚ್ಚಾಗುತ್ತಿದ್ದು ಕೋವಿಡ್ -19 ಆಸ್ಪತ್ರೆ ಭರ್ತಿಯತ್ತ ಸಾಗುತ್ತಿದೆ, ಹೌದು, ಇಂದು ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಕೊರೋನಾ ಪ್ರಕರಣ ದಾಖಲಾಗುವ ಸಾಧ್ಯತೆ ಇದ್ದು ಈ ಹಿನ್ನೆಲೆ ಮೇಟಗಳ್ಳಿಯಲ್ಲಿರುವ ನೂತನ ಜಿಲ್ಲಾಸ್ಪತ್ರೆಯಲ್ಲಿನ ಬೆಡ್ ಬಹುತೇಕ ಭರ್ತಿಯಾಗಲಿದೆ.
ಮೇಟಗಳ್ಳಿಯಲ್ಲಿರುವ ನೂತನ ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ 249 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು 40ಕ್ಕಿಂತ ಹೆಚ್ಚು ಕೇಸ್ ಗಳು ಬಂದರೇ ಕೋವಿಡ್ 19 ಆಸ್ಪತ್ರೆ ಬಹುತೇಕ ಭರ್ತಿಯಾಗಲಿದೆ. ನೂತನ ಜಿಲ್ಲಾಸ್ಪತ್ರೆ ಕೇವಲ 250 ಹಾಸಿಗೆ ಸಾಮರ್ಥ್ಯವನ್ನಷ್ಟೇ ಹೊಂದಿದ್ದು ಈ ಆಸ್ಪತ್ರೆಯ ಬೆಡ್ ಭರ್ತಿಯಾಗುವ ಹಿನ್ನೆಲೆ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಮಾಡಿದೆ.
ಇಎಸ್ಐ ಆಸ್ಪತ್ರೆ ಭರ್ತಿಯಾದ ಬಳಿಕ ಸೋಂಕಿತರನ್ನ ನೂತನ ಕೆಎಸ್ಒಯು ಕಟ್ಟಡದಲ್ಲಿ ದಾಖಲು ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ದಡದಹಳ್ಳಿಯಲ್ಲಿರುವ ಕೆಎಸ್ಒಯು ಬಿಲ್ಡಿಂಗ್ ನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಜ್ಜುಗೊಳಿಸಲಾಗುತ್ತಿದ್ದು ಸಿದ್ದತಾ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದೆ. ಕೊಠಡಿಗಳಿಗೆ ಬೆಡ್ ಜೋಡಿಸುವ ಕಾರ್ಯ ಜೋರಾಗಿದೆ.
ನಾಲ್ಕು ಅಂತಸ್ತಿನವುಳ್ಳ ಕೆಎಸ್ಒಯು ಕಟ್ಟಡದಲ್ಲಿ 500ಕ್ಕೂ ಹೆಚ್ಚು ಬೆಡ್ ವ್ಯವಸ್ಥೆ ಮಾಡಲಾಗಿದ್ದು ಸೋಂಕಿತರಿಗೆ ಅನುಕೂಲವಾದಂತಹ ಶೌಚಾಲಯ, ಗಾಳಿ ನೀರಿನ ವ್ಯವಸ್ಥೆಗಳನ್ನೊಳಗೊಂಡಿದ್ದು, ಕಟ್ಟಡದಲ್ಲಿ ಅಂತಿಮ ಹಂತದ ಸಿದ್ಧತೆ ಭರದಿಂದ ಸಾಗುತ್ತಿದೆ.
Key words: mysore- covid-19-hospital-bed- fill