ಮೈಸೂರು, ಅ.21, 2020 : (www.justkannada.in news) : ‘ ಆರಂಭದಿಂದ ಅಕ್ಟೋಬರ್ 20ರ ವರೆಗೆ ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ 1 ಲಕ್ಷ ಮಾದರಿಗಳ ಕೋವಿಡ್ ಪರೀಕ್ಷೆ ನಡೆಸಲಾಗಿದೆ ಎಂದು ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕ ಹಾಗೂ ಡೀನ್ ಡಾ. ಸಿ.ಪಿ. ನಂಜರಾಜ ಅವರು ತಿಳಿಸಿದ್ದಾರೆ.
ಎಂಎಂಸಿಆರ್‌ಸಿಯ ಮೈಕ್ರೋಬಯಾಲಜಿ ಲ್ಯಾಬ್‌ನಲ್ಲಿ ಅಕ್ಟೋಬರ್ 20 ರವರೆಗೆ ಮೈಸೂರು ಜಿಲ್ಲೆಯ 89,589 ಸ್ಯಾಂಪಲ್‌ಗಳನ್ನು ಪರೀಕ್ಷೆ ಮಾಡಲಾಗಿದ್ದು, ಹೊರಜಿಲ್ಲೆಯಿಂದ ಬಂದ 11,024 ಸ್ಯಾಂಪಲ್‌ಗಳನ್ನು ಕೂಡಾ ಪರೀಕ್ಷೆ ಮಾಡಲಾಗಿದೆ. ಒಟ್ಟು 1,00,613 ಸ್ಯಾಂಪಲ್‌ಗಳನ್ನು ಪರೀಕ್ಷೆ ಮಾಡಲಾಗಿದೆ ಎಂದು ಮೈಕ್ರೋ ಬಯಾಲಜಿ ನೋಡೆಲ್ ಅಧಿಕಾರಿ ಡಾ.ಬಿ.ಅಮೃತಾ ಕುಮಾರಿ ಅವರು ತಿಳಿಸಿದ್ದಾರೆ.
ಎಂ.ಎಂ.ಸಿ.ಆರ್.ಐ.ನಲ್ಲಿ ಪರೀಕ್ಷೆ ನಡೆಸಲಾದ ಮಾದರಿಗಳಲ್ಲಿ ಮೈಸೂರು ಜಿಲ್ಲೆಯ 8926 ಹಾಗೂ ಇತರ ಜಿಲ್ಲೆಯ 369 ಒಟ್ಟು 9295 ಪಾಸಿಟೀವ್ ಪ್ರಕರಣಗಳು ಈ ಲ್ಯಾಬ್‌ನಿಂದ ಬಂದಿದೆ. ಪ್ರಾರಂಭದಲ್ಲಿ ಮಂಡ್ಯ, ಚಾಮರಾಜನಗರ, ಮಡಿಕೇರಿ ಮುಂತಾದ ಜಿಲ್ಲೆಗಳಿಂದ ಬಂದಿರುವ ಸ್ಯಾಂಪಲ್‌ಗಳನ್ನು ಸಹ ಪರೀಕ್ಷೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಈ ವರೆಗೆ 2,54,587 ಮಾದರಿಗಳನ್ನು ಮೈಸೂರು ಜಿಲ್ಲೆಯಲ್ಲಿ ಪರೀಕ್ಷಿಸಲಾಗಿದ್ದು, ಇದರಲ್ಲಿ 1,00,613 ಪರೀಕ್ಷೆಯನ್ನು ಎಂ.ಎಂ.ಸಿ.ಆರ್.ಐ. ನಲ್ಲಿ ಮಾಡಲಾಗಿದೆ. ಮಾದರಿಗಳನ್ನು ಬೆಂಗಳೂರಿನಲ್ಲಿ ಹಾಗೂ ಖಾಸಗಿ ಲ್ಯಾಬ್‌ಗಳಲ್ಲಿ ಮಾಡಲಾಗಿದೆ.
ooooo
key words : Mysore-covid-test-medical-college-one-lakh