ಮೈಸೂರಿನ ಆಸ್ಪತ್ರೆಗಳಲ್ಲಿ ಬೆಡ್‌ಗಳು ಖಾಲಿ ಖಾಲಿ, ವಾರ್‌ ರೂಂ‌ಗೆ ಕರೆ ಮಾಡುವವರ ಸಂಖ್ಯೆಯೂ ಮೂರಂಕಿಯಿಂದ ಎರಡಂಕಿಗೆ ಇಳಿಕೆ : ಆರ್. ರಘು ಕೌಟಿಲ್ಯ

 

ಮೈಸೂರು, ಜೂ.19, 2021 : (www.justkannada.in news ) : ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಕಡಿಮೆ ಆಗುತ್ತಿದ್ದು , ಹಾಸಿಗೆಗೆ ಇದ್ದ ಬೇಡಿಕೆ ಕಡಿಮೆಯಾಗಿದ್ದು, ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಉಳಿದಿದೆ ಎಂದು ವಾರ್ ರೂಂ ಮೇಲುಸ್ತುವಾರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್. ರಘು ಕೌಟಿಲ್ಯ ಹೇಳಿಕೆ ನೀಡಿದ್ದಾರೆ.

ಇಂದು ಮೈಸೂರಿನ ಕೊರೊನಾ ವಾರ್ ರೂಂ ಗೆ ಭೇಟಿ ನೀಡಿದ್ದ ರಘು ಕೌಟಿಲ್ಯ ಬಳಿಕ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದು ಅದು ಹೀಗಿದೆ…

jk

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಕೊರೊನಾ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಕರ್ನಾಟಕ ಮನ್ನೆಡೆದಿದ್ದು ಪರಿಣಾಮ ಸೋಂಕಿತರ ಸಂಖ್ಯೆ ಕ್ರಮೇಣ ಇಳಿಮುಖವಾಗುತ್ತಿದೆ. ಅದೇ ರೀತಿ ಮೈಸೂರಿನಲ್ಲೂ ದಿನೇ ದಿನೇ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಉಸ್ತುವಾರಿ ಸಚಿವ ಸೋಮಶೇಖರ ಅವರ ಮಾರ್ಗದರ್ಶನದಲ್ಲಿ ಸೋಂಕು ತಡೆಗಟ್ಟುವಲ್ಲಿ ಯಶಸ್ಸಿನ ಹಾದಿಯಲ್ಲಿ ಜಿಲ್ಲಾಡಳಿತ ಹೆಜ್ಜೆಯನ್ನಿಡುತ್ತಿದೆ.

ಮೈಸೂರಿನ ಆಸ್ಪತ್ರೆಗಳಲ್ಲಿ ಬೆಡ್‌ಗಳು ಖಾಲಿ ಖಾಲಿ ಉಳಿಯುತ್ತಿರುವುದು ಸಂತಸದ ಸಂಗತಿ. ಜತೆಗೆ ವಾರ್‌ ರೂಂ‌ಗೆ ಕರೆ ಮಾಡುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ನಿತ್ಯವೂ ಸರಾಸರಿ 500ಕ್ಕೂ ಹೆಚ್ಚು ಕರೆ ಸ್ವೀಕರಿಸುತ್ತಿದ್ದ ವಾರ್ ರೂಂ ಸಿಬ್ಬಂದಿ. ವಾರದಿಂದ ಈಚೆಗೆ ರಿಸೀವ್ ಮಾಡುತ್ತಿರೋದು ಕೇಬಲ್ 80ರಿಂದ 100 ಕರೆ ಮಾತ್ರ ಎಂದು ರಘು ಹೇಳಿದ್ದಾರೆ.

ಬೆಡ್, ಆಕ್ಸಿಜನ್, ವೆಂಟಿಲೇಟರ್ ಬೇಡಿಕೆ ಕಡಿಮೆಯಾಗಿದ್ದು ಬಹುತೇಕ ಕೇಳುವವರೇ ಇಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ಸಾರ್ವಜನಿರಲ್ಲೂ ಆತಂಕ ದೂರವಾಗಿದೆ. ಇದುವರೆಗೆ ವಾರ್ ರೂಂ‌ನಿಂದ ಖಾಸಗಿ ಆಸ್ಪತ್ರೆಗಳಲ್ಲಿನ 3977 ಸೇರಿದಂತೆ ಒಟ್ಟು 17,191 ಸೋಂಕಿತರಿಗೆ ಆಸ್ಪತ್ರೆಗಳ ದಾಖಲಾತಿಗೆ ವ್ಯವಸ್ಥೆ ಕಲ್ಪಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ರಘು ತಿಳಿಸಿದ್ದಾರೆ. ಸದ್ಯ, ಬೆಡ್ ಗಳಿಗೆ ಬೇಡಿಕೆ ಕಡಿಮೆಯಾಗಿರುವ ಕಾರಣ ಒತ್ತಡದ ನಡುವೆ ಕೆಲಸ ನಿರ್ವಹಿಸಿದ ಆರೋಗ್ಯ ಇಲಾಖೆ, ಎನ್‌ಸಿಸಿ, ಸ್ವಯಂ ಸೇವಕರು ನಿರಾಳರಾಗಿದ್ದಾರೆ.
ವಾರ್ ರೂಂ ಮೇಲುಸ್ತುವಾರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಆರ್.ಕೌಟಿಲ್ಯ ಹೇಳಿಕೆ.

 

key words : mysore-covid-war-room-raghu-koutilya-bed-block-no-demand