MYSORE CRIME NEWS: ಅವಧಿಗೆ ಮುನ್ನವೇ ಆರೋಪಿ ಸತೀಶ್ ಪೊಲೀಸ್ ಕಸ್ಟಡಿ ಅಂತ್ಯ ; ನಾಳೆ ಜಾಮೀನು ತೀರ್ಪು..

MYSORE CRIME NEWS: Santhosh's police custody ends prematurely; Bail verdict tomorrow.

ಮೈಸೂರು, ಫೆ.೧೪, ೨೦೨೫: ಪ್ರಚೋಧನಕಾರಿ ಪೋಸ್ಟ್‌ ಹಾಕಿದ್ದ ಆರೋಪಿಯ ಪೊಲೀಸ್‌ ಕಸ್ಟಡಿ ಅವಧಿಗೆ ಮುನ್ನವೇ  ಅಂತ್ಯ. ಪೊಲೀಸ್ ಕಸ್ಟಡಿಯಿಂದ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೊಲೀಸರು.

ಉದಯಗಿರಿ ಕಲ್ಲು ತೂರಾಟ ಪ್ರಕರಣಕ್ಕೆ ಮೂಲವಾಗಿದ್ದ ವಿವಾದಿತ ಪೋಸ್ಟ್ ಮಾಡಿದ್ದ ಆರೋಪಿ ಸತೀಶ್ @ ಪಾಂಡುರಂಗ. ಇಂದು ಮಧ್ಯಾಹ್ನವಷ್ಟೆ ಒಂದು ದಿನದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ನೀಡಿದ್ದ ನ್ಯಾಯಾಧೀಶರು. ಇದೀಗ ಅವಧಿಗೆ ಮುನ್ನವೇ ತನಿಖೆ ಮುಗಿಸಿದ ಪೊಲೀಸರು. ಸ್ಥಳ ಮಹಜರ್ ಹಾಗು ಕೃತ್ಯಕ್ಕೆ ಬಳಸಿದ್ದ ಎಂಬ ಆರೋಪಿಸಲಾದ ಮೊಬೈಲ್ ವಶಕ್ಕೆ ಪಡೆದ ಪೊಲೀಸರು. ತನಿಖೆ ಮುಗಿಸಿ ಇಂದು ಸಂಜೆಯ ವೇಳೆಗೆ  ನ್ಯಾಯಾಧೀಶರ ಎದುರು ಹಾಜರು ಪಡಿಸಿದ ಪೊಲೀಸರು.

ಸ್ಥಳದಲ್ಲಿ ಹಾಜರಿದ್ದ ಆರೋಪಿ ಪರ ವಕೀಲ ಅ.ಮ.ಭಾಸ್ಕರ್ ಅವರಿಂದ ವಾದ ಮಂಡನೆ.  ತಕ್ಷಣ ಜಾಮೀನು‌ ನೀಡುವಂತೆ ನ್ಯಾಯಾಧೀಶರ ಬಳಿ ಮನವಿ. ಪರ- ವಿರೋಧ ಚರ್ಚೆ ಆಲಿಸಿದ ನ್ಯಾಯಾಧೀಶರು. ನಾಳೆಗೆ ಜಾಮೀನು ಆದೇಶದ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ. ಎರಡನೆ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಕಿರಿಯಶ್ರೇಣಿ ನ್ಯಾಯಧೀಶರಾದ ಸರೋಜ ಅವರಿಂದ ಆದೇಶ.

key words: MYSORE CRIME NEWS, Santhosh, police custody, ends prematurely,Bail verdict tomorrow.

MYSORE CRIME NEWS: Santhosh’s police custody ends prematurely; Bail verdict tomorrow.