ಮೈಸೂರು,ಡಿ,18,2019(www.justkannada.in): ಮೈಸೂರನ್ನು ಸೈಬರ್ ಸೆಕ್ಯುರಿಟಿ ಹಬ್ ಮಾಡಲು ಉತ್ತಮ ಅವಕಾಶಗಳಿವೆ ಎಂದು ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಡೈರೆಕ್ಟರ್ ಜನರಲ್ ಒಂಕಾರ್ ರೈ ತಿಳಿಸಿದರು.
ಸಿಐಐ ವತಿಯಿಂದ ಒಂದು ದಿನದ ಸೈಬರ್ ಸೆಕ್ಯುರಿಟಿ ಮತ್ತು ಐಒಟಿ ಕುರಿತ ಸಮಾಲೋಚನಾ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮೈಸೂರನ್ನು ಸೈಬರ್ ಸೆಕ್ಯುರಿಟಿ ಹಬ್ ಮಾಡುವ ಕುರಿತು ತಜ್ಞರಿಂದ ಸಮಾಲೋಚನೆ ನಡೆಸಲಾಯಿತು. ಬೇರುಂಡ ಪ್ರತಿಷ್ಠಾನದ ಮುಖ್ಯಸ್ಥರಾದ ಯದುವೀರ್ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಡೈರೆಕ್ಟರ್ ಜನರಲ್ ಒಂಕಾರ್ ರೈ ಅವರು ಸೈಬರ್ ಸೆಕ್ಯುರಿಟಿ ಮತ್ತು ಐಓಪಿ ಕುರಿತಾಗಿ ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಬೆಂಗಳೂರಿನ ನಂತರ ಮೈಸೂರು ವೇಗವಾಗಿ ಬೆಳೆಯುತ್ತಿದ್ದು ಸಾಫ್ಟ್‌ವೇರ್ ಉದ್ಯಮದಲ್ಲಿ ಮೈಲಿಗಲ್ಲು ಸಾಧಿಸಿದೆ. ಮೈಸೂರು 4200ಕೋಟಿಯಷ್ಟು ಸಾಫ್ಟ್‌ವೇರ್ ರಫ್ತಿನಲ್ಲಿ ಮುಂಚೂಣಿಯಲ್ಲಿದೆ. ಮೈಸೂರನ್ನು ಸೈಬರ್ ಸೆಕ್ಯುರಿಟಿ ಹಬ್ ಮಾಡಲು ಉತ್ತಮ ಅವಕಾಶಗಳಿದ್ದು ಸರ್ಕಾರಿ ಸಾಫ್ಟ್‌ವೇರ್ ಏಜೆನ್ಸಿ ನೆರವಾಗಲಿದೆ. ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಲಿದೆ ಎಂದು ತಿಳಿಸಿದರು.
ಇದೇ ವೇಳೆ ಯದುವೀರ್ ಸೈಬರ್ ಸೆಕ್ಯುರಿಟಿ ಮತ್ತು ಐಒಟಿ ಡೆಸ್ಟಿನೇಷನ್ ಮೈಸೂರು ಕುರಿತ ಶ್ವೇತಪತ್ರ ಬಿಡುಗಡೆ ಮಾಡಿದರು.
Key words: Mysore – cyber security hub-CII- Yadavir- program.