ಮೈಸೂರು,ಮಾ,2,2020(www.justkannada.in): ಅಡುಗೆ ಮಾಡುವಾಗ ದಿಢೀರ್ ಇದ್ದಕ್ಕಿದಂತೆ ಸಿಲಿಂಡರ್ ಖಾಲಿಯಾದರೆ ಅದನ್ನ ಬದಲುಸುವ ವೇಳೆ ಎಲ್ಲರೂ ಎಚ್ಚರದಿಂದಿರಬೇಕು. ಇಲ್ಲದಿದ್ದರೇ ಅಪಾಯ ಕಟ್ಟಿಟ್ಟ ಬುತ್ತಿ. ಅಂತೆಯೇ ಸಿಲಿಂಡರ್ ಬದಲಿಸುವ ವೇಳೆ ಸಿಲಿಂಡರ್ ಹೊತ್ತಿ ಉರಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಕ್ಯಾತನಾರನಹಳ್ಳಿ ಗಾಯತ್ರಿಪುರಂ 2ನೇ ಹಂತದ 7ನೇ ಕ್ರಾಸ್ ಮನೆಯಲ್ಲಿ ಈ ಘಟನೆ ನಡೆದಿದೆ. ಪಾಲಿಕೆಯ ವಾರ್ಡ್ ನಂಬರ್ 30 ವ್ಯಾಪ್ತಿಗೆ ಬರುವ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಮನೆಯಲ್ಲಿ ಅಡುಗೆ ಮಾಡಲು ಮುಂದಾದ ವೇಳೆ ಸಿಲಿಂಡರ್ ಖಾಲಿಯಾಗಿದ್ದು ಇದನ್ನ ಗಮನಸಿದ ಮನೆಯವರು ಹೊಸ ಸಿಲಿಂಡರ್ ಬದಲಾವಣೆ ಮಾಡಲು ಮುಂದಾಗಿದ್ದಾರೆ.
ಈ ವೇಳೆ ಸಿಲಿಂಡರ್ ಹೊತ್ತಿ ಉರಿದಿದ್ದು, ಬೆಂಕಿಯ ತೀವ್ರತೆಗೆ ಮನೆಯಲ್ಲಿದ್ದ ದಾಖಲಾತಿ ಸೇರಿದಂತೆ ಹಣ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕದ ದಳದ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸಿದ್ದು, ಸದ್ಯ ಸ್ಟೋಟದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
Key words: mysore- cylinder- Change-cooking-blast