ಮೈಸೂರು,ಸೆ,29,2019(www.justkannada.in): ಮೈಸೂರು ದಸರಾ ನಾಲ್ಕು ಶತಮಾನ ನಡೆಸಿಕೊಂಡು ಬಂದ ಸಂಸ್ಕೃತಿ ಹಬ್ಬ. ದಸರಾ ಕೆಟ್ಟದನ್ನ ಅಳಿಸಿ, ಹೊಸದನ್ನು ಸೃಷ್ಟಿಸುವುದು. ರಾಜ್ಯದ ಜನತೆ ನೆರೆ ಹಾವಳಿಯಲ್ಲಿ ಸಿಲುಕಿದ್ದಾರೆ. ಹೀಗಾಗಿ ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಒಳಿತನ್ನ ಮಾಡಲಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ದೇವರಲ್ಲಿ ಪ್ರಾರ್ಥಿಸಿದರು.
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ಈ ಹಿಂದೆ ರಾಜರು ಮಹಾರಾಜರು ದಸರಾವನ್ನ ಆಚರಿಸುತ್ತಿದ್ದರು. ಈಗ ಸರ್ಕಾರ ದಸರಾವನ್ನ ಆಚರಿಸುತ್ತಿದೆ. ಇಂತಹ ಪುಣ್ಯ ಕೆಲಸಕ್ಕೆ ಹಿರಿಯ ಸಾಹಿತಿ ಬಂದಿದ್ದಾರೆ. ಭೈರಪ್ಪ ದಸರಾ ಉದ್ಘಾಟಿಸಿದ್ದು ವಿಶೇಷ. ಅವರು ಜ್ಞಾನಪೀಠ ಪ್ರಶಸ್ತಿಗೆ ಅರ್ಹರು ಎಂದು ತಿಳಿಸಿದರು.
ರಾಜ್ಯದಲ್ಲಿ ನೆರೆ ಬರದಿಂದ ಜನರು ನಲುಗಿದ್ದಾರೆ. ಹೀಗಾಗಿ ದೇವರು ಒಳ್ಳೆಯದು ಮಾಡಲಿ ಎಂದು ಪ್ರಾರ್ಥಿಸುತ್ತೇನೆ. ರಾಜ್ಯದ ಜನತೆಯಿಂದ ಸುಮಾರು 300 ಕೋಟಿ ರೂ ಬಂದಿದೆ. ಕನ್ನಡಿಗರು ಎಲ್ಲರೂ ಒಂದೇ ಎಂದು ಬದುಕುತ್ತಿದ್ದಾರೆ. ಅತಿವೃಷ್ಠಿ ಉಂಟಾಗಿರುವ ಜಿಲ್ಲೆಗಳಿಗೆ ಮತ್ತೊಮ್ಮೆ ಪ್ರವಾಸ ಮಾಡುತ್ತೇನೆ. ಪ್ರಸ್ತುತ ನೆರೆ ಭೀತಿ ರಾಜ್ಯದಲ್ಲಿ ಸಾಕಷ್ಟು ನೆರೆ ಸಮಸ್ಯೆ ಇದೆ. ಚಾಮುಂಡೇಶ್ವರಿಯಲ್ಲಿ ರಾಜ್ಯಕ್ಕೆ ಒಳಿತು ಮಾಡಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.
Key words: mysore dasara-2019-cm bs yeddyurappa- Chamundeshwari –pray