ಮೈಸೂರು,ಅ,9,2019(www.justkannada.in): ವಿಶ್ವವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ನಡೆದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ ಚಾಮರಾಜನಗರ ಜಿಲ್ಲೆಯ “ಸಂವೃದ್ಧಿ ಸಂಪತ್ತಿನ ನಡುವೆ ಹುಲಿಯ ಸಂತೃಪ್ತ ತಾಣ” ವಿಷಯ ಆಧಾರಿತ ಸ್ತಬ್ಧ ಚಿತ್ರಕ್ಕೆ ಪ್ರಥಮ ಬಹುಮಾನ ಪಡೆದಿದೆ.
ಉತ್ತರ ಕನ್ನಡ ಜಿಲ್ಲೆಯ “ಕದಂಬ/ಬನವಾಸಿ ” ವಿಷಯ ಆಧಾರಿತ ಸ್ತಬ್ಧ ಚಿತ್ರಕ್ಕೆ ದ್ವೀತಿಯ ಬಹುಮಾನ ಹಾಗೂ ತುಮಕೂರು ಜಿಲ್ಲೆಯ “ನಡೆದಾಡುವ ದೇವರು” ವಿಷಯ ಆಧಾರಿತ ಸ್ತಬ್ಧಚಿತ್ರಕ್ಕೆ ತೃತೀಯ ಬಹುಮಾನ ಲಭಿಸಿದೆ.
ಇನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ “ಸರ್ಕಾರದ ಸೌಲಭ್ಯಗಳ ಮಾಹಿತಿ” ವಿಷಯ ಆಧಾರಿತ ಸ್ತಬ್ಧಚಿತ್ರವು ಶಿವಮೊಗ್ಗ ಜಿಲ್ಲೆಯ “ಫಿಟ್ ಇಂಡಿಯಾ” ಹಾಗೂ ಚಿಕ್ಕಮಗಳೂರು ಜಿಲ್ಲೆಯ “ಶಿಶಿಲ ಬೆಟ್ಟ” ವಿಷಯ ಆಧಾರಿತ ಸ್ತಬ್ಧಚಿತ್ರಗಳೊಂದಿಗೆ ಸಮಧಾನಕರ ಬಹುಮಾನವನ್ನು ಹಂಚಿಕೊಂಡಿದೆ. ನಿನ್ನೆ ನಡೆದ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಯಲ್ಲಿ 30 ಜಿಲ್ಲೆಗಳು ಸೇರಿದಂತೆ 38 ಸ್ತಬ್ಧ ಚಿತ್ರಗಳು ಭಾಗಿಯಾಗಿದ್ದವು.
Key words: Mysore Dasara-2019- First prize -Chamarajanagar district- tablo