ಮೈಸೂರು,ಅ,1,2019(www.justkannada.in): ಮೈಸೂರು ದಸರಾಗೆ ಬಂದಿದ್ದು ತುಂಬಾನೇ ಖುಷಿಯಾಗಿದೆ. ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ್ದೇನೆ. ಸ್ವಚ್ಛನಗರಿಗೆ ಆಗಮಿಸಿದ್ದು ತುಂಬಾ ಸಂತಸವನ್ನುಂಟು ಮಾಡಿದೆ ಎಂದು ಚಿನ್ನದ ಹುಡುಗಿ ಪಿ.ವಿ ಸಿಂಧು ಹರ್ಷ ವ್ಯಕ್ತಪಡಿಸಿದರು.
ನಾಡಹಬ್ಬ ದಸರಾದ ಯುವದಸರಾ ಹಾಗೂ ಕ್ರೀಡಾಕೂಟವನ್ನ ಬ್ಯಾಡ್ಮಿಂಟನ್ ಆಟಗಾರ್ತಿ ಪಿ. ವಿ ಸಿಂಧು ಅವರು ಉದ್ಘಾಟನೆ ಮಾಡಲಿದ್ದಾರೆ. ಈ ಮಧ್ಯೆ ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಿ.ವಿ ಸಿಂಧು, ಮೊದಲು ಕನ್ನಡದಲ್ಲೇ ನಮಸ್ಕರಿಸಿದರು. ಬಳಿಕ ಮಾತು ಆರಂಭಿಸಿದ ಅವರು, ದಸರಾಗೆ ಬಂದಿದ್ದು ತುಂಬಾನೇ ಖುಷಿಯಾಗಿದೆ. ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ್ದೇನೆ. ಮೈಸೂರು ಕ್ಲೀನ್ ಸಿಟಿ ಎಂದು ಕೇಳಿದ್ದೇನೆ, ಈಗ ಈ ನಗರಕ್ಕೆ ಬಂದಿರೋದು ಖುಷಿಯಾಗಿದೆ. ಸ್ವಚ್ಛ ಭಾರತ್ ಬಗ್ಗೆ ಮೋದಿ ಈಗಾಗಲೇ ಹೇಳಿದ್ದಾರೆ. ಚಾಮುಂಡೇಶ್ವರಿ ತಾಯಿ ಆಶೀರ್ವಾದ ಎಲ್ಲರ ಮೇಲೂ ಇದೆ ಎಂದರು.
ದುರ್ಗಾಮಾತೆ ನೆಲೆಸಿರೋ ಸ್ಥಳವಿದು. ದಸರಾ ಹಬ್ಬಕ್ಕೆ ನನ್ನನ್ನ ಗುರ್ತಿಸಿರೋದು ಸಹ ಸಂತಸವಾಗಿದೆ. ಒಲಂಪಿಕ್ಸ್ ನನ್ನ ಮುಂದಿನ ಗುರಿ ಇದೆ. ಹೀಗಾಗಿ ಸದ್ಯಕ್ಕೆ ಮದುವೆ ಬಗ್ಗೆ ನನಗೆ ಚಿಂತೆ ಇಲ್ಲ ಎಂದು ಪಿ.ವಿ ಸಿಂಧು ಹೇಳಿದರು.
ಗ್ರಾಮೀಣ ಪ್ರತಿಭೆಗಳಿಗೆ ಕೆಲ ಸಲಹೆಗಳನ್ನ ನೀಡಿದ ಪಿ.ವಿ ಸಿಂಧು ಅವರು, ಖೇಲೋ ಇಂಡಿಯಾದ ಮೂಲಕ ಗ್ರಾಮೀಣ ಪ್ರತಿಭೆಗಳಿವೆ. ಅಂತವರಿಗೆ ತಳಮಟ್ಟದಲ್ಲಿ ಉತ್ತಮವಾದ ತರಬೇತಿ ನೀಡಬೇಕಿದೆ, ಹಾಗಾಗಿಯೇ ಖೇಲೋ ಇಂಡಿಯಾ ಕಾನ್ಸೆಪ್ಟ್ ಬಂದಿದೆ. ಶಾಲಾ ಮಟ್ಟದಲ್ಲೇ ಪ್ರತಿಭೆ ಕಂಡು ಹಿಡಿದು ಉತ್ತಮ ತರಬೇತಿ ಕೊಡಬೇಕು. ಇದಕ್ಕೆ ಪೋಷಕರು ಸಹ ಪ್ರೋತ್ಸಾಹ ಕೊಡಬೇಕು. ಅವರೇ ಮಕ್ಕಳಿಗೆ ಹೆಚ್ಚಾಗಿ ಹುರಿದುಂಬಿಸಬೇಕು. ಆಗ ಮಾತ್ರ ಗ್ರಾಮೀಣ ಪ್ರತಿಭೆಗಳು ಯಶಸ್ಸುಗಳಿಸಲು ಸಾಧ್ಯ ಎಂದು ತಿಳಿಸಿದರು.
Key words: Mysore dasara-2019-happy –come- Clean city- PV Sindhu