ಮೈಸೂರು, ಸೆ.30, 2019 : (www.justkannada.in news) : ವಿಶ್ವವಿಖ್ಯಾತ ದಸರ ಮಹೋತ್ಸವ ಆರಂಭಗೊಳ್ಳುತ್ತಿದ್ದಂತೆ ವಿವಾದಗಳು ಸಹ ಕಾಡುತ್ತಿರುವುದು ವಿಪರ್ಯಾಸ. ಮಾಜಿ ಮೇಯರ್ ಪುರುಷೋತ್ತಮ ಪತ್ರಿಕಾಗೋಷ್ಠಿ ನಡೆಸಿ, ಮಹಿಷ ದಸರ ಬೇಡವಾದಲ್ಲಿ, ನಮಗೆ ಚಾಮುಂಡಿ ದಸರೆಯೂ ಬೇಡ ಎಂದು ಹೇಳಿಕೆ ನೀಡುವ ಮೂಲಕ ವಿವಾದ ಕಿಡಿ ಹೊತ್ತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ ಅವರು ಹೇಳಿದಿಷ್ಟು….
ಮೈಸೂರು ಪೊಲೀಸರನ್ನ ಷಂಡ ಎಂದ ಅವಾಚ್ಯ ಶಬ್ಧದಿಂದ ನಿಂಧಿಸಿದ ಸಂಸದ ಪ್ರತಾಪ್ ಸಿಂಹ, ಅದೇ 7OO ಷಂಡರನ್ನೇ ಇಟ್ಕೊಂಡು ನೆನ್ನೆ ದಸರಾ ಉದ್ಘಾಟನೆ ಮಾಡಿದ್ರು. ಒಬ್ಬ ಸಂಸದನಾಗಿ ಪೊಲೀಸರ ಮೇಲೆ ದರ್ಪ, ಅವಾಚ್ಯ ಶಬ್ದ ಉದ್ದಟತನದ್ದು.
ನೆನ್ನೆ ದಸರಾ ಉದ್ಘಾಟನೆ ನೋಡಲಿಕ್ಕೆ ಹೋದವರನ್ನ ಬಂಧಿಸಿದರು.ಈ ಮೂಲಕ ದಸರಾ ಆಚರಣೆಗೆ ಅವಮಾನ ಮಾಡಿದಂತೆ.
ಈ ಬಾರಿ ಜಂಬುಸವಾರಿ ನಿಲ್ಲಿಸಿ, ನಿಮಗೆ ಮಹಿಷಾಸುರ ದಸರಾ ಬೇಡವಾದಲ್ಲಿ ನಮಗೂ ಚಾಮುಂಡಿ ದಸರಾ ಬೇಡ. ಅಂದ ಮಾತ್ರಕ್ಕೆ ನಾವು ಚಾಮುಂಡೇಶ್ವರಿಯ ವಿರೋಧಿಗಳಲ್ಲ. ನೀವು ನಮ್ಮ ಆಚರಣೆ ವಿರೋದಿಸಿದ್ದಕ್ಕೆ ನಾವು ನಿಮ್ಮ ಆಚರಣೆ ವಿರೋದಿಸುತ್ತಿದ್ದೆವೆ.
ನಮ್ಮ ವೇದಿಕೆಯಲ್ಲಿ ನಮ್ಮ ಆಚರಣೆ ಅಷ್ಟೇ ಇತ್ತು, ಯಾವುದೇ ಪದಬಳಕೆ ಮಾಡುವ ಉದ್ದೇಶ ಇರಲಿಲ್ಲ. ಸಂವಿಧಾನದಲ್ಲಿ ಪ್ರತಿಯೊಬ್ಬರು ಅವರವರ ಧಾರ್ಮಿಕ ಆಚರಣೆ ಮಾಡಲು ಅವಕಾಶ ಇದೆ.
ಜಿಲ್ಲಾ ಉಸ್ತುವಾರಿ ಸಚಿವರನ್ನ ಕೇಳಿದಾಗ 8ನೇ ತಾರೀಖಿನಂದು ಮಾತಾಡೋಣ ಅಂತಾರೆ, ನಮ್ಮ ಜೊತೆ ಚರ್ಚೆ ನಡೆಸಲಿ ನಂತರ ಜಂಬುಸವಾರಿ ಮಾಡಿಕೊಳ್ಳಲಿ. ಸಾವಿರಾರು ಸಂಖ್ಯೆಯಲ್ಲಿ ಸಹಿ ಸಂಗ್ರಹಿಸಿ ಜಂಬುಸವಾರಿ ನಿಲ್ಲಿಸಿ ಎಂದು ರಾಜ್ಯಸರ್ಕಾರಕ್ಕೆ ಮನವಿ ಮಾಡ್ತೇವೆ.
ಕರಪತ್ರ ಹಂಚ್ತಿವಿ :
ದಸರಾಗೆ ಆಗಮಿಸುವ ವಿದೇಶಿಗರಿಗೆ ಮೈಸೂರಿನ ಅವ್ಯವಸ್ಥೆಗಳ ಬಗ್ಗೆ ಕರಪತ್ರ ಹಂಚಿ ಗೊತ್ತಗುವಂತೆ ಮಾಡುತ್ತೇವೆ. ದಸರಾ ಆಚರಣೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಜಿ ಮೇಯರ್ ಎಚ್ಚರಿಕೆ..
ಮೈಸೂರಿಗೆ ಬರುವ ವಿದೇಶಿಗರಿಗೆ ಬರಿ ಲೈಟ್ ತೋರಿಸಿ ಸುಂದರ ನಗರಿ ಎಂದು ಬಿಂಬಿಸಿಕೊಳ್ಳುತ್ತಾರೆ, ಆದರೆ ವಾಸ್ತವವೇ ಬೇರೆ ಇದೆ. ಮೈಸೂರು ನಗರದ ಎಷ್ಟೋ ಏರಿಯಾಗಳಲ್ಲಿ ಸರಿಯಾದ ಕುಡಿಯುವ ನೀರು, ವಾಸಿಸಲು ಯೋಗ್ಯ ಮನೆಗಳೇ ಇಲ್ಲಾ. ಅಲ್ಲದೆ ಇಲ್ಲಿರುವ ಅಸ್ಪೃಶ್ಯತೆ ಬಗ್ಗೆ ಇಲ್ಲಿ ಬರುವ ವಿದೇಶಿಗರಿಗೂ ಗೊತ್ತಾಗಲಿ. ಈ ಹಿನ್ನೆಲೆ ದಸರಾದ ದಿನ ಇಂಗ್ಲಿಷ್ ನಲ್ಲಿ ಮುದ್ರಿಸಿದ ಕರಪತ್ರಗಳನ್ನ ವಿದೇಶಿಗರಿಗೆ ಹಂಚುತ್ತೇವೆ.
ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ ಮಾಜಿ ಮೇಯರ್ ಪುರುಷೋತ್ತಮ್.
–
key words : mysore-dasara-2019-mahisha.dasara.mayor