ಮೈಸೂರು,ಅ,1,2019(www.justkannada.in): ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಆಹಾರ ಮೇಳ ಭೋಜನಾ ಪ್ರಿಯರನ್ನ ಆಕರ್ಷಿಸುತ್ತಿದೆ. ಎಲ್ಲಾ ತಿಂಡಿ ತಿನುಸುಗಳು ಒಂದೇ ಸೂರಿನಡಿ ಸಿಗುತ್ತಿರುವುದರಿಂದ ಜನ ಹೆಚ್ಚಾಗಿ ಆಹಾರ ಮೇಳದತ್ತ ಧಾವಿಸುತ್ತಿದ್ದಾರೆ.
ಆಹಾರ ಮೇಳದಲ್ಲಿ ಕೇವಲ ತಿಂಡಿ ತಿನಿಸುಗಳಷ್ಟೇ ಅಲ್ಲದೇ ಖಾಯಿಲೆಗಳಿಗೆ ನಾಟಿ ಔಷಧಿ ಸಹ ಸಿಗುತ್ತಿದೆ. ಹೌದು, ಕೊಡಗು ಜಿಲ್ಲೆಯ ದೊಡ್ಡ ಬೆಟ್ಟ ಗೇರಿ ನಿವಾಸಿ ನಾಗಮ್ಮ ಎಂಬುವವರು ನಾಟಿ ಔಷಧ ನೀಡುತ್ತಿದ್ದು, ರುಚಿಕರ ಆಹಾರದ ಜೊತೆಗೆ ನಾಟಿ ಚಿಕಿತ್ಸೆಯನ್ನೂ ಕೊಡುತ್ತಿದ್ದಾರೆ.
ಆದಿವಾಸಿ ನಾಟಿವೈದ್ಯೆ ನಾಗಮ್ಮ, ಯಾವುದೇ ಸಮಸ್ಯೆ ಇದ್ದರೂ ಕೂಡ ಅದಕ್ಕೆ ಗಿಡಮೂಲಕೆ ಮದ್ಧು ನೀಡುತ್ತಿದ್ದಾರೆ. ನಾಗಮ್ಮ ತಂದೆ ತಾಯಿಗಳ ಬಳುವಳಿಯಿಂದ ನಾಟಿ ಚಿಕಿತ್ಸೆ ಕಲಿತಿದ್ದು, ಇವರ ಅನನ್ಯ ಸೇವೆಗೆ ರಾಜ್ಯ ಪ್ರಶಸ್ತಿ ಲಭಿಸಿದೆ. ನಾಗಮ್ಮ ಕೆರೆ ಕಟ್ಟೆ , ಕೊಲ್ಲಿ ಸೇರಿದಂತೆ ಇತರ ಕಡೆ ಔಷಧಿಯ ಗಿಡಮೂಲಿಕೆ ಸಂಗ್ರಹಿಸಿಕೊಂಡು ಬಂದಿದ್ದಾರೆ.
ಈ ನಡುವೆ ಆಹಾರ ಮೇಳಕ್ಕೆ ಆಗಮಿಸಿರುವ ಜನರು ನಾಟಿ ವೈದ್ಯೆ ನಾಗಮ್ಮ ಮುಂದೆ ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿದ್ದು, ಅದಕ್ಕೆ ತಕ್ಕನಾದ ಔಷಧಿಯನ್ನ ನಾಗಮ್ಮ ನೀಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಜನ ನನ್ನು ಗುರುತಿಸದಿದ್ದರೂ ಪರವಾಗಿಲ್ಲ. ಅವರ ಕಷ್ಟ ಪರಿವಾರವಾದರೆ ಅದೇ ನನಗೆ ಸಂತೋಷ. ಇನ್ನು ಮಂಡಿ , ತಲೆ ನೋವು ಚಿಕಿತ್ಸೆ ಹೆಚ್ವಿನ ಬೇಡಿಕೆ ಇದೆ. ನಾಟಿ ವೈದ್ಯ ಹೇಳುವ ಪತ್ಯವನ್ನು ಪಾಲಿಸಿದರೇ ನಾಟಿ ಔಷಧ ಸೇವೆನೆಯಿಂದ ಯಾವುದೇ ಭಯವಿಲ್ಲ ಎನ್ನತ್ತಾರೆ ನಾಗಮ್ಮ…
Key words: Mysore dasara-2019- nati medicine-Food Fair