ಮೈಸೂರು,ಅ,8,2019(www.justkannada.in): ಮೈಸೂರು ಅರಮನೆಯಲ್ಲಿ ಇಂದು ವಿಜಯದಶಮಿ ಸಂಭ್ರಮ ಮನೆ ಮಾಡಿದ್ದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬನ್ನಿ ಮರಕ್ಕೆ ಸಂಪ್ರದಾಯಬದ್ದವಾಗಿ ವಿಶೇಷ ಪೂಜೆ ಸಲ್ಲಿಸಿದರು.
ಅರಮನೆಯ ಉತ್ತರ ದಿಕ್ಕಿನಲ್ಲಿರುವ ಭುವನೇಶ್ವರಿ ಅಮ್ಮನವರ ದೇಗುಲದ ಆವರಣಕ್ಕೆ ವಿಜಯಯಾತ್ರೆ ಹೊರಟ ಯದುವೀರ್. ಬನ್ನಿ ಮರಕ್ಕೆ ಸಂಪ್ರದಾಯಬದ್ದವಾಗಿ ವಿಶೇಷ ಪೂಜೆ ಸಲ್ಲಿಸಿ, ಬನ್ನಿ ಮಹಾಕಾಳಿಯಮ್ಮನವರ ಆಶೀರ್ವಾದ ಪಡೆದುಕೊಂಡರು.
ಇನ್ನು ಚಾಮುಂಡಿಬೆಟ್ಟದಿಂದ ತರಲಾದ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಅರಮನೆ ಆವರಣದಲ್ಲಿ ರಾಜವಂಶಸ್ಥ ಯದುವೀರ್ ಅವರು ವಿಶೇಷ ಪೂಜೆ ಸಲ್ಲಿಸಿದರು.
Key words: mysore dasara-2019-yaduvir-spacial