ಮೈಸೂರು,ಅಕ್ಟೋಬರ್,6,2020(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಿರುವ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಕೆಲ ಸಲಹೆಗಳನ್ನ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಿದ್ಧರಾಮಯ್ಯ, ನನ್ನ ಪ್ರಕಾರ ಈ ಬಾರಿ ಅರಮನೆ ಹಾಗೂ ಚಾಮುಂಡಿ ಬೆಟ್ಟದಲ್ಲಿ ಪೂಜೆ ಮಾಡಿ ಸುಮ್ಮನಾಗಬೇಕು. ಅಷ್ಟೇ ಸಾಕು, ಬೇರೆ ಯಾವ ಕಾರ್ಯಕ್ರಗಳೂ ಬೇಡ. ಜಂಬೂ ಸವಾರಿಯೂ ಅಗತ್ಯವಿಲ್ಲ, ಏಕೆಂದರೇ ಜನರನ್ನ ಕಂಟ್ರೋಲ್ ಮಾಡೋದು ಕಷ್ಟ. ಹೀಗಾಗಿ ಕೇವಲ ಸಾಂಪ್ರದಾಯಿಕ ಪುರೋಹಿತ ಪೂಜೆಗಳಿಗೆ ಮಾತ್ರ ಸೀಮಿತ ಮಾಡಬೇಕು ಎಂದು ತಿಳಿಸಿದ್ದಾರೆ.
ದಸರಾ ವೇಳೆ ಜನರನ್ನ ಸೇರಿಸಿ ಕರೋನಾಗೆ ಸರ್ಕಾರವೇ ಉಪ್ಪು ಹಾಕಿ ಬೆಳೆಸಿದ ಹಾಗೆ ಆಗುತ್ತೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.
Key words: mysore-dasara-2020-former cm- siddaramaiah-advice- govrnament