ಮೈಸೂರು,ಅಕ್ಟೋಬರ್,17,2020(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇಂದು ಚಾಲನೆ ಸಿಕ್ಕಿದ್ದು, ಈ ನಡುವೆ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಹಾಡಿಹೊಗಳಿದರು.
ಇಂದು ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಜಯದೇವ ಆಸ್ಪತ್ರೆ ನಿರ್ದೇಶಕ ಸಿ.ಎನ್ ಮಂಜುನಾಥ್ ಚಾಲನೆ ನೀಡಿದರು. ಬಳಿಕ ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣ ಮಾಡಿದ ಶಾಸಕ ಜಿ.ಟಿ.ದೇವೆಗೌಡ, ಸಿಎಂ ಬಿಎಸ್ ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೇಲೆ ಮಳೆ ಬೆಳೆ ಚೆನ್ನಾಗಿದೆ. ರಾಜ್ಯದ ಎಲ್ಲಾ ಭರ್ತಿಯಾಗಿವೆ. ಬಿಎಸ್ವೈ ದೈವ ಬಲ ಇದೆ. ಅಷ್ಟೇ ದೈತ್ಯ ಶಕ್ತಿ ಕೂಡ ಇದೆ. ಐದು ಬಾರಿ ದಸರಾ ಆಚರಿಸಿದ ಕೀರ್ತಿ ಬಿಎಸ್ವೈಗೆ ಸಲ್ಲುತ್ತೆ ಎಂದು ಗುಣಗಾನ ಮಾಡಿದರು.
ಮೈಸೂರು ದಸರಾಕ್ಕೆ ಅದರದ್ದೇ ವಿಶೇಷ ಇತಿಹಾದವಿದೆ. ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಉಸ್ತುವಾರಿ ಸಚಿವರಾದ ಸೋಮಶೇಖರ್ ಅವರೂ ಸಹ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಇನ್ನು ಕೊರೋನಾ ಸಂದರ್ಭದಲ್ಲಿ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸಿದ ರಾಜ್ಯದ 42,608 ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರದಂತೆ 12.75 ಕೋಟಿ ರೂಪಾಯಿಯನ್ನು ಸಹಕಾರ ಇಲಾಖೆಯಿಂದ ಕೊಟ್ಟಿದ್ದಾರೆ. ಅಲ್ಲದೆ, ರೈತರಿಗೂ ಸಾಲ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿ ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಜಿ.ಟಿ ದೇವೇಗೌಡ ತಿಳಿಸಿದರು.
ಮೈಸೂರಿನ ಅಭಿವೃದ್ಧಿಗೆ ಬಿ.ಎಸ್.ಯಡಿಯೂರಪ್ಪ ಶ್ರಮಿಸಿದ್ದಾರೆ- ಸಂಸದ ಪ್ರತಾಪ್ ಸಿಂಹ..
ನಂತರ ಮಾತನಾಡಿದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಆರು ಬಾರಿ ದಸರಾ ಆಚರಿಸುವ ಸೌಭಾಗ್ಯ ನಮ್ಮ ಸಿಎಂಗೆ ದೊರಕಿದೆ. ಇನ್ನು ಮೂರು ಬಾರಿ ದಸರಾ ಆಚರಿಸುವ ಭಾಗ್ಯ ಸಿಎಂಗೆ ಸಿಗಲಿದೆ. ಈ ಮೂಲಕ ದಾಖಲೆಯಲ್ಲಿ ಹೆಸರು ಉಳಿಯಲಿದೆ ಎಂದರು.
ಯೋಗ್ಯ ವ್ಯಕ್ತಿಗಳಿಗೆ ಅವಕಾಶ ನೀಡಬೇಕೆಂದು ದಸರಾ ಉದ್ಘಾಟಕರಾಗಿ ಜಯದೇವ ಸಂಸ್ಥೆ ಬೆಳೆಸಿರುವ ಡಾ.ಮಂಜುನಾಥ್ ಆಯ್ಕೆ ಮಾಡಿದ್ದಾರೆ. ಇದರಿಂದ ನಮ್ಮ ಸಿಎಂ ನಿಸ್ಪಕ್ಷಪಾತತೆ ತೋರಿಸುತ್ತದೆ. ಕಳೆದ ಬಾರಿ ಎಸ್ಎಲ್ ಭೈರಪ್ಪ ದಸರಾ ಉದ್ಘಾಟಿಸಿದ್ದರು. ಈ ಬಾರಿ ಕೊರೋನಾ ವಾರಿಯರ್ ಡಾ.ಮಂಜುನಾಥ್ ಉದ್ಘಾಟಿಸಿದ್ದಾರೆ. ಜಯದೇವ ಆಸ್ಪತ್ರೆ ಅಭಿವೃದ್ಧಿ ಹಾಗೂ ಜನರಿಗಾಗಿ ಮಂಜುನಾಥ್ ಶ್ರಮಿಸಿದ್ದಾರೆ ಎಂದು ಪ್ರತಾಪ್ ಸಿಂಹ ತಿಳಿಸಿದರು.
ನಮ್ಮದು ‘UNITY IN DIVERSITY’ ಧರ್ಮ. ದಸರಾವನ್ನ ವಿಜಯನಗರ ಸಾಮ್ರಾಜ್ಯ ನಂತ್ರ ಮೈಸೂರು ಅರಸರು ಮುಂದುವರೆಸಿದ್ರು. ಮೈಸೂರಿನ ಅಭಿವೃದ್ಧಿಗೆ ಬಿ.ಎಸ್.ಯಡಿಯೂರಪ್ಪ ಶ್ರಮಿಸಿದ್ದಾರೆ ಎಂದು ಪ್ರತಾಪ್ ಸಿಂಹ ಸಂತಸ ವ್ಯಕ್ತಪಡಿಸಿದರು.
Key words: mysore Dasara-2020- inauguration-MLA GT Deve Gowda –praises- CM BS yeddyurappa