ಮೈಸೂರು,ಅಕ್ಟೋಬರ್,14,2020(www.justkannada.in): ಕೋವಿಡ್ ಹಿನ್ನೆಲೆ ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲು ಸರ್ಕಾರ ಸಜ್ಜಾಗಿದ್ದು ಈ ನಡುವೆ ದಸರಾಗೆ ವಿಶೇಷ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದೆ.
ಅಕ್ಟೋಬರ್ 17 ರಂದು ಚಾಮುಂಡಿಬೆಟ್ಟದಲ್ಲಿ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಯಾಗಲಿದ್ದು ಕಾರ್ಯಕ್ರಮಕ್ಕೆ 200 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ದಸರಾ ಆಚರಣೆ ಸಂಬಂಧ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯ ನಿಯಮಗಳು ಈ ಕೆಳಕಂಡಂತಿವೆ….
ದಸರಾ ಜಂಬೂ ಸವಾರಿ ವೇಳೆ 300 ಮಂದಿಗೆ ದಸರಾ ಉದ್ಘಾಟನೆ ವೇಳೆ 200 ಮಂದಿ ಮಾತ್ರ ಪಾಲ್ಗೊಳ್ಳಲು ಅವಕಾಶ.
ಅರಮನೆ ಆವರಣದಲ್ಲಿ 50 ಮಂದಿಗೆ ಮಾತ್ರ ಅವಕಾಶ. ಅರಮನೆಯಲ್ಲಿ 8 ದಿನಗಳು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಂದ ಗರಿಷ್ಠ 50 ಜನ ಮೀರದಂತೆ 2 ಗಂಟೆಗಳ ಕಾರ್ಯಕ್ರಮ ನೀಡುವುದು. ದಸರಾ ಸಮಾರಂಭದ ವೇಳೆ ಸಾರ್ವಜನಿಕರಿಗೆ ಪ್ರವೇಶವಿಲ್ಲ.
ಅರಮನೆಯ ಆವರಣದಲ್ಲಿ ನಡೆಸಲಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಮತ್ತು ಸ್ಯಾನಿಟೈಸರ್ ಗಳನ್ನು ಕಡ್ಡಾಯವಾಗಿ ಬಳಸಬೇಕು.
ಈ ಬಾರಿಯ ದಸರಾ ಹಬ್ಬ ಆಚರಣೆಯನ್ನು ದೃಶ್ಯ ಸಂವಹನ ಮೂಲಕ, ಸಾರ್ವಜನಿಕರು ವೀಕ್ಷಿಸಲು ಅವಕಾಶ ಮಾಡಬೇಕು. ಈ ಸಮಾರಂಭಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿದೆ.
ದಸರಾ ಪ್ರಮುಖ ಆಕರ್ಷಣೆಗಳಲ್ಲೊಂದಾದ ದೀಪಾಲಂಕಾರ ಸಂಜೆ 7ರಿಂದ 10ಗಂಟೆವರೆಗೆ ಮಾತ್ರ ಇರಬೇಕು. ಅರಮನೆಯ ಪ್ರತಿಯೊಬ್ಬ ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಿಸಬೇಕು. ದಸರಾ ಆಚರಣೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಕೋವಿಡ್ ತಪಾಸಣೆಗೆ ಒಳಪಡಬೇಕು ಜೊತೆಗೆ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ.
Key words: Mysore Dasara -2020-Special Guideline- Release -Government.