ಮೈಸೂರು,ಅಕ್ಟೋಬರ್,7,2020(www.justkannada.in): ಕೊರೋನಾ ಸಂಕಷ್ಟದ ನಡುವೆ ಸರಳ ಮತ್ತು ಸಾಂಪ್ರದಾಯಿಕವಾಗಿ ದಸರಾಚರಣೆಗೆ ಅರಮನೆ ನಗರಿ ಮೈಸೂರಿನಲ್ಲಿ ಸಿದ್ಧತೆ ನಡೆಸಲಾಗುತ್ತಿದ್ದು, ಅರಮನೆಯಂಗಳದಲ್ಲಿ ಕುಶಾಲತೋಪು ಸಿಡಿಸುವ ತಾಲೀಮು ಮುಂದುವರೆದಿದೆ.
ವಿಜಯ ದಶಮಿಯಂದು ಜಂಬೂ ಸವಾರಿ ಹೊರಡುವ ಮುನ್ನ 21 ಸುತ್ತು ಕುಶಾಲತೋಪು ಸಿಡಿಸಲಾಗುತ್ತದೆ. ಕುಶಾಲತೋಪು ಸಿಡಿಸಲು 7 ಫಿರಂಗಿ ಗಾಡಿಗಳ ಬಳಕೆ ಮಾಡಲಾಗುತ್ತದೆ. ಇದಕ್ಕಾಗಿ ತಾಲೀಮು ನಡೆಸಲಾಗುತ್ತಿದ್ದು, ಕುಶಾಲತೋಪು ಸಿಡಿಸುವ ವೇಳೆ ಆನೆಗಳು, ಕುದುರೆಗಳು ಬೆದರಂತೆ ನೋಡಿಕೊಳ್ಳುವುದು ತಾಲೀಮಿನ ಉದ್ದೇಶವಾಗಿದೆ. ಹೀಗಾಗಿ ಆನೆಗಳು ಕುದುರೆಗಳು ಇದಕ್ಕೆ ಹೊಂದಿಕೊಳ್ಳಲು ಮುಂಚಿತವಾಗಿ ತಾಲೀಮು ನಡೆಸಲಾಗುತ್ತಿದೆ.
ಹೀಗಾಗಿ ಅರಮನೆಯಂಗಳದಲ್ಲಿ ಕುಶಾಲತೋಪು ಸಿಡಿಸುವ ತಾಲೀಮು ಮುಂದುವರೆದಿದ್ದು ಇಂದು ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ ಡ್ರೈ ಪ್ರಾಕ್ಟೀಸ್ ನಲ್ಲಿ ಭಾಗಿಯಾಗಿ ತಾಲೀಮು ನಡೆಸಿದರು. ಸಿಎಆರ್ನ 30 ಸಿಬ್ಬಂದಿ ಕುಶಾಲತೋಪು ಡ್ರೈ ಪ್ರಾಕ್ಟೀಸ್ ನಲ್ಲಿ ಭಾಗಿಯಾಗಿದ್ದವು.
Key words: Mysore Dasara-2020-Workout -Palace