MYSORE DASARA 2024 : ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳಿಗೆ ವೇಯ್ಟ್ ಚೆಕ್.

MYSORE DASARA 2024: Weight check for 9 elephants led by Captain Abhimanyu.

 

Details of weight of 9 elephants led by Captain Abhimanyu:

Abhimanyu: 5560 kg, Bheema: 4945 kg, Ekalavya: 4730 kg, Kanjan: 4515 kg, Dhananjaya: 5155 kg, Lakshmi: 2480 kg, Varalakshmi: 3495 kg, Rohita: 3625 kg, Gopi: 4970 kg.

ಮೈಸೂರು, ಆ.24,2024: (www.justkannada.in news) ನಾಡ ಹಬ್ಬ ದಸರಾ ಮಹೋತ್ಸವ 2024. ದಸರಾ ಗಜಪಡೆಗೆ ತೂಕ ಪರಿಶೀಲನೆ.  ಆಗಸ್ಟ್ 21ರಂದು ಕಾಡಿನಿಂದ ನಾಡಿಗೆ ಆಗಮಿಸಿರುವ ದಸರಾ ಗಜಪಡೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳಿಗೆ ವೇಯ್ಟ್ ಚೆಕ್.

ಇಂದು ನಗರದ ಧನ್ವಂತ್ರಿ ರಸ್ತೆಯಲ್ಲಿರೋ ಶ್ರೀನಿವಾಸ ವೇ ಬ್ರಿಡ್ಜ್‌ನಲ್ಲಿ ಆನೆಗಳ ತೂಕ ಪರೀಕ್ಷೆ. ತೂಕ ಪರಿಶೀಲನೆ ನಂತರ ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ಪದಾರ್ಥ ವಿತರಣೆ. ಬಳಿಕ ಜಂಬೂ ಸವಾರಿ ಮೆರವಣಿಗೆಗಾಗಿ ತಾಲೀಮು. ಬೆಳಗ್ಗೆ ಸಂಜೆ ಎರಡು ಸಮಯ ಅರಮನೆಯಿಂದ ಬನ್ನಿಮಂಟಪದವರೆಗೆ ನಡೆಯಲಿರುವ ತಾಲೀಮು. ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ಆನೆಗಳಿಗೆ ತರಬೇತಿ ನೀಡುವುದೇ ತಾಲೀಮಿನ ಉದ್ದೇಶ.

ಮತ್ತಿಗೋಡು ಕ್ಯಾಂಪ್ ನಲ್ಲಿ‌ ಮಹೇಂದ್ರ, ಭೀಮ, ಏಕಲವ್ಯ ಆನೆಯನ್ನು ಪರಿಶೀಲಿಸುತ್ತಿರುವ ಡಿಸಿಎಫ್ ಶರಣಬಸಪ್ಪ‌

ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳ ತೂಕದ ವಿವರ :

ಅಭಿಮನ್ಯು : 5560 ಕೆಜಿ, ಭೀಮ : 4945 ಕೆಜಿ,  ಏಕಲವ್ಯ : 4730 ಕೆಜಿ, ಕಂಜನ್ : 4515 ಕೆಜಿ,  ಧನಂಜಯ  : 5155 ಕೆಜಿ, ಲಕ್ಷ್ಮಿ : 2480 ಕೆಜಿ, ವರಲಕ್ಷ್ಮಿ : 3495 ಕೆಜಿ, ರೋಹಿತ : 3625 ಕೆಜಿ, ಗೋಪಿ : 4970 ಕೆಜಿ.

ತೂಕದಲ್ಲಿ ಕ್ಯಾಪ್ಟನ್ ಅಭಿಮನ್ಯು ನಂಬರ್ 1.

ಅರಮನೆಗೆ ಬಂದ ಗಜಪಡೆಗೆ ತೂಕ ಪರೀಕ್ಷೆ ಮಾಡಲಾಗಿದೆ. ಆನೆಗಳ ಆರೋಗ್ಯದ ಬಗ್ಗೆ ಗಮನ ಹರಿಸಲಾಗಿದೆ. ಆನೆಗಳ ತೂಕದ ಮೇಲೆ ಪೌಷ್ಟಿಕ ಆಹಾರ ನೀಡಲಾಗುತ್ತೆ. ದಸರಾಗೆ ಮುನ್ನ ಮತ್ತೆ ಆನೆಗಳ ತೂಕ ಪರೀಕ್ಷೆ ಮಾಡುತ್ತೇವೆ. ಎಲ್ಲಾ ಆನೆಗಳ ಆರೋಗ್ಯ ಚೆನ್ನಾಗಿದೆ. ನಾಳೆಯಿಂದಲೇ  ಗಜಪಡೆಗಳ ತಾಲೀಮು  ಆರಂಭ.  ಮೈಸೂರಿನಲ್ಲಿ ಡಿಸಿಎಫ್ ಡಾ ಪ್ರಭುಗೌಡ ಹೇಳಿಕೆ.

key words: MYSORE DASARA 2024, Weight check, for 9 elephants, led by, Captain Abhimanyu.

SUMMARY:

Details of weight of 9 elephants led by Captain Abhimanyu:

Abhimanyu: 5560 kg, Bheema: 4945 kg, Ekalavya: 4730 kg, Kanjan: 4515 kg, Dhananjaya: 5155 kg, Lakshmi: 2480 kg, Varalakshmi: 3495 kg, Rohita: 3625 kg, Gopi: 4970 kg.