ಮೈಸೂರು, ಅಎ.30, 2019 : (www.justkannada.in news) : ಪ್ರತಿ ವರ್ಷದಂತೆ ಈ ವರ್ಷವೂ ದಸರ ಗೋಲ್ಡ್ ಕಾರ್ಡ್ ಹೊರ ತರಲಾಗುತ್ತಿದೆ. ಪ್ರತಿ ಕಾರ್ಡ್ ಗೆ 4 ಸಾವಿರ ರೂ ನಿಗದಿಪಡಿಸಲಾಗಿದೆ.
ಈ ಸಂಬಂಧ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದಿಷ್ಟು…
ಎರಡು ಸಾವಿರ ಗೋಲ್ಡ್ ಕಾರ್ಡ್ ಪ್ರಿಂಟ್ ಮಾಡಲಾಗಿದೆ. ‘ ಬುಕ್ ಮೈ ಶೋ ‘ ಆನ್ ಲೈನ್ ನಲ್ಲಿ ಕೂಡ ಬುಕಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ.
ಚಾಮುಂಡಿ ಬೆಟ್ಟದಲ್ಲಿ ೧೦೦ ರೂ ಟಿಕೆಟ್ ಖರೀದಿಸುವವರಿಗೆ ವಿಶೇಷ ಸಾಲಿನಲ್ಲಿ ಪ್ರವೇಶ ಕಲ್ಪಿಸಲಾಗುತ್ತದೆ.
ಅರಮನೆ ಮತ್ತು ಯುವದಸರಾ ಮುಂತಾದ ಕಾರ್ಯಮಗಳಲ್ಲಿ ವಿಶೇಷ ಪ್ರವೇಶ.
ಗೋಲ್ಡ್ ಕಾರ್ಡ್ ಜತೆಗೆ ಈ ಬಾರಿ ಟಿಕೇಟ್ ಗಳನ್ನು ಸಹ ಮುದ್ರಣ ಮಾಡಲಾಗಿದೆ. 250 ರೂ, 500 ರೂ, ಹಾಗೂ 1000 ರೂ ಮುಖಬೆಲೆಯ ಟಿಕೆಟ್ ಗಳನ್ನು ಮುದ್ರಣ ಮಾಡಲಾಗಿದೆ. ಅರಮನೆ, ಬನ್ನಿಮಂಟಪದ ಆಸನದ ವ್ಯವಸ್ಥೆಗೆ ಅನುಗುಣವಾಗಿ ಪಾಸ್ ಮುದ್ರಿಸಲಾಗಿದೆ.
ಅಕ್ಟೋಬರ್ ೨ ರಂದು ಏರ್ ಶೋ :
ಈಗಾಗಲೇ ಏರ್ ಶೋ ರಿಹರ್ಸಲ್ ನಡೆಸಲಾಗಿದೆ. ಅ.೨ ರಂದು ಬೆಳಗ್ಗೆ ೧೧.೩೦ ಕ್ಕೆ ಏರ್ ಶೋ ಆರಂಭವಾಗಲಿದೆ.
ಸುಮಾರು ೪೫ ನಿಮಿಷಗಳ ಕಾಲ ಏರ್ ಶೋ ನಡೆಯಲಿದೆ. ಕಳೆದ ಬಾರಿ ನಡೆದ ರೀತಿಯಲ್ಲೇ ಈ ಬಾರಿಯೂ ಏರ್ ಶೋ ನಡೆಯಲಿದೆ. ಭಾರತೀಯ ವಾಯು ಸೇನೆಯ ಯೋಧರಿಂದ ಪೆಡಲ್ ಟ್ರಾಪ್, ಸ್ಲೀಥರಿಂಗ್, ಸ್ಕೈ ಡೈವಿಂಗ್ ಸಾಹಸ ಪ್ರದರ್ಶನ.
ಸುರಕ್ಷೆತೆಯ ದೃಷ್ಟಿಯಿಂದ ಏರ್ ಶೋನಲ್ಲಿ ಭಾಗಿಯಾಗುವ ಕಮಾಂಡರ್ ಗಳ ಮಾಹಿತಿ ನೀಡಲು ಸಾಧ್ಯವಿಲ್ಲ. ಎಷ್ಟು ವಿಮಾನಗಳು ಏರ್ ಭಾಗಿಯಾಗಲಿವೆ ಮತ್ತು ವಿಮಾನಕ್ಕೆ ಬಳಸುವ ಅನಿಲದ ಖರ್ಚುಗಳ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ. ಮೈಸೂರಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ನೋಡಲು ಮನವಿ ಮಾಡಿದ ಜಿಲ್ಲಾಧಿಕಾರಿ.
key words : mysore-dasara-airshow-gold-card-ticket-nadahabba