ಮೈಸೂರು,ಸೆಪ್ಟಂಬರ್,25,2024 (www.justkannada.in): ವಿಶ್ವವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದ್ದು, ಈ ಬಾರಿ ಅದ‍್ಧೂರಿಯಾಗಿ ದಸರಾ ಆಚರಿಸಲು ಸರ್ಕಾರ ನಿರ್ಧರಿಸಿದೆ. ಈ ಮಧ್ಯೆ ಮೈಸೂರು ದಸರಾದಲ್ಲಿ ಈ ಬಾರಿಯೂ ಅಂಬಾರಿ ಡಬಲ್ ಡೆಕ್ಕರ್ ಬಸ್ ಸೇವೆ ಇರಲಿದೆ.
ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಪ್ರವಾಸೋದ್ಯಮ ಇಲಾಖೆ ದಸರಾ ಅಂಬಾರಿ ವಿಶೇಷ ಬಸ್ ಸೇವೆ ಒದಗಿಸುತ್ತಿದ್ದು ಡಬಲ್ ಡೆಕ್ಕರ್ ಬಸ್ ನಲ್ಲಿ ಪ್ರಯಾಣಿಸುವ ಮೂಲಕ ದಸರಾ ವೇಳೆ ಮೈಸೂರನ್ನ ಕಣ್ತುಂಬಿಕೊಳ್ಳಬಹುದಾಗಿದೆ.
ಅಂಬಾರಿ ಡಬಲ್ ಡೆಕ್ಕರ್ ಬಸ್ ನಲ್ಲಿ ಪ್ರಯಾಣಿಸಲು ದರ ನಿಗದಿ ಮಾಡಲಾಗಿದೆ. UPPER DECK ನಲ್ಲಿ ಪ್ರಯಾಣಿಸಲು 500 ರೂ. LOWER DECK ನಲ್ಲಿ ಪ್ರಯಾಣಿಸಲು 250 ರೂ ನಿಗದಿಪಡಿಸಲಾಗಿದೆ. ಪ್ರಯಾಣದ ಅವಧಿ 1 ಗಂಟೆಯಾಗಿದ್ದು ಸಂಜೆ 6 ಗಂಟೆ , 8 ಗಂಟೆ ಮತ್ತು 9.30ಕ್ಕೆ ಈ ಬಸ್ ಗಳು ಸಂಚರಿಸಲಿವೆ.
ಮಾರ್ಗದ ವಿವರ
ಹೋಟೆಲ್ ಮಯೂರ ಹೊಯ್ಸಳದಿಂದ ಬಸ್ ಗಳು ಹೊರಡಲಿದ್ದು ಹಳೇ ಡಿಸಿ ಕಚೇರಿ, ಕ್ರಾಫರ್ಡ್ ಹಾಲ್, ಓರಿಯೆಂಲ್ ಸೆಂಟ್ರಲ್ ಲೈಬ್ರರಿ, ರಾಮಸ್ವಾಮಿ ವೃತ್ತ, ಸಂಸ್ಕೃತ ಪಾಠಶಾಲಾ, ಅರಮನೆ ದಕ್ಷಿಣ ದ್ವಾರ, ಜಯ ಮಾರ್ತಾಂಡ ಸರ್ಕಲ್ ಗೇಟ್ , ಹಾರ್ಡಿಂಹ್ ಸರ್ಕಲ್, ಕೆಆರ್ ವೃತ್ತ, ಸೈಯಾಜಿ ರಾವ್ ರಸ್ತೆ , ಆಯುರ್ವೇದ ವೈದ್ಯಕೀಯ ಕಾಲೇಜು ರೈಲೆ ನಿಲ್ದಾಣದ ಮೂಲಕ ಮೈಸೂರು ಹೊಯ್ಸಳ ಹೋಟೆಲ್ ಬಂದು ತಲುಪಲಿದೆ.
ಮೈಸೂರು ದಸರಾ ಪ್ರಯುಕ್ತ ವಿಶೇಷ ವ್ಯವಸ್ಥಿತ ಪ್ರವಾಸ
ಮೈಸೂರು ದಸರಾ 2024 ಹಬ್ಬದ ಪ್ರಯುಕ್ತ ಪ್ರವಾಸೋದ್ಯಮ ಇಲಾಖೆ ಮೈಸೂರು ಸಾರಿಗೆ ವಿಭಾಗದಿಂದ ವಿಶೇಷ ವ್ಯವಸ್ಥಿತ ಪ್ರವಾಸವನ್ನು ಆಯೋಜಿಸಲಾಗಿದೆ ಈ ಕುರಿತ ವಿವರ ಈ ಕೆಳಕಂಡಂತಿದೆ.
ಪ್ರವಾಸದ ವಿವರ( ಮೈಸೂರಿನಿಂದ ಹೊರಡುವುದು)
ಜೋಗ್ ಫಾಲ್ಸ್ – ಗೋಕರ್ಣ – ಗೋವಾ (ಅವಳಿ ಹಂಚಿಕೆ) : 5 ದಿನ ದರ 7990/-
* ನಂಜನಗೂಡು ಬಂಡೀಪುರ ಮತ್ತು ಮದುಮಲೈ ಅರಣ್ಯ – ಊಟಿ ದೊಡ್ಡಬೆಟ್ಟ (ಅವಳಿ ಹಂಚಿಕೆ) 2 ದಿನ, ದರ 3359/-
ಶ್ರವಣಬೆಳಗೊಳ- ಬೇಲೂರು –ಹಳೇಬೀಡು 1ದಿನ, ದರ 1089/-
ಸೋಮನಾಥಪುರ ಶಿವನಸಮುದ್ರ (ಗಗನಚುಕ್ಕಿ & ಭರಚುಕ್ಕಿ) – ತಲಕಾಡು ಮುಡುಕುತೊರೆ 1ದಿನ, ದರ 755 ರೂ
ನಂಜನಗೂಡು – ಹಿಮವದ್ ಗೋಪಾಲಸ್ವಾಮಿ ದೇವಸ್ಥಾನ – ಬಿಆರ್ ಹಿಲ್ಸ್, 1 ದಿನ, ದರ 728/-
ಕೆಆರ್ ಎಸ್ ಹಿನ್ನಿರು – ವೇಣುಗೋಪಾಲ ಸ್ವಾಮಿ ದೇವಸ್ಥಾನ – ಚೆಲುವರಾಯಸ್ವಾಮಿ ದೇವಸ್ಥಾನ – ಯೋಗಾನರಸಿಂಹ ಸ್ವಾಮಿ ದೇವಸ್ಥಾನ ಆದಿಚುಂಚನಗಿರಿ, 1 ದಿನ, ದರ 660/-
ದುಬಾರೆ – ಅಬ್ಬೆ ಫಾಲಿಸ್ – ರಾಜಾ ಸೀಟ್ – ನಿಸರ್ಗಧಾಮ – ಗೋಲ್ಡನ್ ಟೆಂಪಲ್, ಬೈಲಕುಪ್ಪೆ 1 ದಿನ, ದರ 979/-
ಜಗನ್ಮೋಹನ ಅರಮನೆ ಆರ್ಟ್ ಗ್ಯಾಲರಿ – ಮೈಸೂರು ಮೃಗಾಲಯ, ಚಾಮುಂಡಿ ಬೆಟ್ಟ – ಮೈಸೂರು ಅರಮನೆ – ಸೇಂಟ್ ಫಿಲೋಮಿನಾ ಚರ್ಚ್ – ಶ್ರೀರಂಗಪಟ್ಟಣ ಗುಂಬಜ್ – ಟಿಪ್ಪು ಸುಲ್ತಾನರ ಬೇಸಿಗೆ ಅರಮನೆ – ಶ್ರೀರಂಗನಾಥ ಸ್ವಾಮಿ ದೇವಸ್ಥಾನ- ಬೃಂದಾವನ ಉದ್ಯಾನವನ, 1ದಿನ , 510 ರೂ.
ಸಂಪರ್ಕ: 0821 2423652 ಆನ್‌ಲೈನ್ ಬುಕಿಂಗ್: www.kstdc.co
Key words: mysore dasara, Ambari Double Decker Bus, Fare