ಮೈಸೂರು,ಸೆಪ್ಟಂಬರ್,9,2020(www.justkannada.in): ಕೊರೋನಾ ಹಿನ್ನೆಲೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಸರಳ ಮತ್ತು ಸಾಂಪ್ರದಾಯಕವಾಗಿ ಆಚರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಈ ಸಂಬಂಧ ಇದೇ ಸೆಪ್ಟಂಬರ್ 11 ಕ್ಕೆ ಮೈಸೂರಿನಲ್ಲಿ ಮತ್ತೊಂದು ಮಹತ್ವದ ಸಭೆ ನಡೆಯಲಿದೆ.
ಈ ಬಾರಿ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಣೆಗೆ ಸರ್ಕಾರ ಕರೆ ನೀಡಿದ್ದು ಅದ್ದೂರಿತನ ಮತ್ತು ಜನಸಂದಣಿಗೆ ಬ್ರೇಕ್ ಹಾಕಲಾಗಿದೆ. ಜನಾಭಿಪ್ರಾಯದಂತೆ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಣೆಗೆ ತೀರ್ಮಾನ ಕೈಗೊಳ್ಳಲಾಗಿದೆ. ಈ ಸಂಬಂಧ ಸೆಪ್ಟಂಬರ್ 11 ರಂದು ಜಿಲ್ಲೆ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮತ್ತೊಂದು ಮಹತ್ವದ ಸಭೆ ನಡೆಯಲಿದ್ದು, ಗಜ ಪಯಣ, ದಸರಾ ಉದ್ಘಾಟನಾ ಸಮಯ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳ ಬಗ್ಗೆ ಚರ್ಚಿಸಲಾಗುತ್ತದೆ.
ದಸರಾ ಉದ್ಘಾಟನೆಗೆ ಕೊರನಾ ವಾರಿಯರ್ಸ್ ಆಯ್ಕೆಗೆ ತಲೆನೋವು…
ಈ ಬಾರಿ ಕೊರನಾ ವಾರಿಯರ್ಸ್ ರಿಂದ ದಸರಾ ಉದ್ಘಾಟನೆಗೆ ಸರ್ಕಾರ ನಿರ್ಧಾರ ಮಾಡಿದ್ದು ಇದೀಗ ದಸರಾ ಕಾರ್ಯಕಾರಿಣಿ ಸಮಿತಿಗೆ ಉದ್ಘಾಟಕರ ಆಯ್ಕೆಯೇ ತಲೆನೋವು ಶುರುವಾಗಿದೆ. ಸೆಪ್ಟೆಂಬರ್ 11 ರಂದು ನಡರಯುವ ಸಭೆಯಲ್ಲಿಯೇ ಉದ್ಘಾಟಕರು ಅಂತಿಮ ಆಗಬೇಕು.
ಐದು ಕ್ಷೇತ್ರದಿಂದ ಕೊರೊನಾ ವಾರಿಯರ್ಸ್ ಗಳನ್ನ ಉದ್ಘಾಟಕರಾಗಿ ಆಯ್ಕೆ ಮಾಡಬೇಕಿದ್ದು ಕೊರೋನಾ ವಾರಿಯರ್ಸ್ ಗಳ ಆಯ್ಕೆಗೆ ಇರುವ ಮಾನದಂಡಗಳು ಏನು ..? ಯಾವ ಆಧಾರಮೇಲೆ ಉದ್ಘಾಟಕರನ್ನು ಆಯ್ಕೆ ಮಾಡ್ತಾರೆ.? ಎಂಬ ಈ ಆಯ್ಕೆಯೇ ಹೆಚ್ವು ತಲೆನೋವು ತರಿಸಿದೆ.
Key words: Mysore Dasara-Another- important- meeting -sep 11th.