ಮೈಸೂರು,ಅ,8,2019(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು ಇಂದು ಸಂಜೆ 4.31ರಿಂದ 4.57ರ ಒಳಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಸಿಎಂ ಬಿಎಸ್ ವೈ ಚಾಲನೆ ನೀಡಲಿದ್ದಾರೆ.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ನೀಡಿದ ವೇಳೆ ಸಾಥ್ ನೀಡಿದ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ, ದಸರಾ ಪ್ರಾಧಿಕಾರ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು.
ದಸರಾ ಪ್ರಾಧಿಕಾರ ಸ್ಥಾಪನೆ ಮಾಡುವಂತೆ ಸಲಹೆ ಬಂದಿದೆ. ರಾಜಕೀಯ ಅನಿಶ್ಚಿತತೆಯಿಂದಾಗಿ ಪ್ರಾಧಿಕಾರ ರಚಿಸಲಾಗಿಲ್ಲ. ನಾಡಹಬ್ಬ ವಿಶ್ವದ ಹಬ್ಬ ಆಗಬೇಕು. ಈ ನಿಟ್ಟಿನಲ್ಲಿ ದಸರಾ ಪ್ರಾಧಿಕಾರ ರಚನೆಯಾಗಬೇಕು. ದಸರಾ ಆಚರಣೆಗೂ ಆರು ತಿಂಗಳ ಮುಂಚಿತವಾಗಿ ವಿದೇಶಿ ಪ್ರವಾಸಿಗರನ್ನು ಸೆಳೆಯುವ ಕೆಲಸ ಆಗಬೇಕು ಎಂದು ಸಚಿವ ಸಿ.ಟಿ ರವಿ ತಿಳಿಸಿದರು.
ವಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತೆ ಅವರನ್ನು ಮೆಚ್ಚಿಸೋಕಾಗಲ್ಲ…
ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ವಿಚಾರ ಕುರೊತು ಪ್ರತಿಕ್ರಿಯಿಸಿದ ಸಚಿವ ಸಿ.ಟಿ ರವಿ, ತಾತ್ಕಾಲಿಕ ಪರಿಹಾರವನ್ನು ಘೋಷಣೆ ಮಾಡಿದ್ದೇವೆ. ಆದರೆ ವಿಪಕ್ಷದವರು ಟೀಕೆ ವ್ಯಕ್ತಪಡಿಸಿದ್ದಾರೆ. ಟೀಕೆ ಮಾಡವುವವರಿಗೆ ಉತ್ತರ ಕೊಡೋಕಾಗಲ್ಲ. ವಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತೆ ಅವರನ್ನು ಮೆಚ್ಚಿಸೋಕಾಗಲ್ಲ ಎಂದು ಲೇವಡಿ ಮಾಡಿದರು. ಪರಿಹಾರವನ್ನು ನಾವು ಏರಿಕೆ ಮಾಡಿದ್ದೇವೆ. ಶೇ. 98% ಪರಿಹಾರ ತಲುಪಿದೆ ಎಂದು ಸಚಿವ ಸಿ.ಟಿ ರವಿ ಹೇಳಿದರು.
Key words:mysore- Dasara Authority- establishment-Tourism Minister- CT Ravi -reaction