ಮೈಸೂರು,ಅಕ್ಟೋಬರ್,7,2020(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆಗೆ ದಿನಗಣನೆ ಆರಂಭವಾಗಿದ್ದು ನಾಡಹಬ್ಬಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿರುವ ಹಿನ್ನೆಲೆ ಈ ಬಾರಿ ಸರಳ ಮತ್ತು ಸಾಂಪ್ರದಾಯಿಕವಾಗಿ ದಸರಾ ಆಚರಣೆ ನಡೆಸಲಾಗುತ್ತಿದ್ದು ಜಂಬೂ ಸವಾರಿ ಅರಮನೆಗೆ ಸೀಮಿತವಾಗಲಿದೆ.
ಈ ನಡುವೆ ಜಂಬೂ ಸವಾರಿ ವೇಳೆ ಅಂಬಾರಿಯಲ್ಲಿ ಪ್ರತಿಷ್ಟಾಪಿಸಲಾಗುವ ಉತ್ಸವಮೂರ್ತಿಯನ್ನ ಇಂದು ಅಂಬಾವಿಲಾಸ ಅರಮನೆಯಿಂದ ಚಾಮುಂಡಿಬೆಟ್ಟಕ್ಕೆ ಕೊಂಡೊಯ್ಯಲಾಯಿತು. ಚಾಮುಂಡಿ ಬೆಟ್ಟದ ಆಡಳಿತಧಿಕಾರಿ ಸಮ್ಮುಖದಲ್ಲಿ ಬೆಟ್ಟಕ್ಕೆ ನಾಡದೇವಿ ಉತ್ಸವ ಮೂರ್ತಿ ರವಾನಿಸಲಾಯಿತು.
ಉತ್ಸವ ಮೂರ್ತಿಗೆ ಚಾಮುಂಡಿ ಬೆಟ್ಟದಲ್ಲಿ ನವರಾತ್ರಿ ದಿನಗಳಂದು ವಿಶೇಷ ಪೂಜೆ ಸಲ್ಲಿಕೆ ಮಾಡಲಾಗುತ್ತದೆ. ಹೀಗಾಗಿ ಅದಕ್ಕೂ ಮುನ್ನ ಉತ್ಸವ ಮೂರ್ತಿ ಪ್ರತಿಮೆಯನ್ನ ಬೆಟ್ಟದ ಸಿಬ್ಬಂದಿ ಶುಚಿಗೊಳಿಸಿ ಪೂಜೆಗೆ ಸಿದ್ದತೆಗೊಳಿಸಲಿದ್ದಾರೆ. ಜಂಬೂ ಸವಾರಿ ದಿನ ಮತ್ತೆ ನಾಡದೇವಿ ಉತ್ಸವ ಮೂರ್ತಿ ಅರಮನೆಗೆ ಹಿಂದಿರುಗಲಿದೆ.
ಪಂಚಲೋಹದಿಂದ ನಿರ್ಮಾಣಗೊಂಡಿರುವ ನಾಡದೇವಿ ಉತ್ಸವ ಮೂರ್ತಿಯನ್ನ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ.
Key words: mysore dasara-chamundi hills-chamundeshwari-utsav murthi