ಮೈಸೂರು ದಸರಾ: ಕೆಂಪುಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದಾಳೆ ತಾಯಿ ಚಾಮುಂಡೇಶ್ವರಿ

ಮೈಸೂರು,ಅಕ್ಟೋಬರ್,2,2024 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ನಾಳೆ ಚಾಲನೆ ಸಿಗಲಿದ್ದು ಈ ಹಿನ್ನೆಲೆಯಲ್ಲಿ ಇಂದು  ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯ ಶುದ್ದಿ ಕಾರ್ಯ ನೆರವೇರಿತು.

ನಾಳೆಯಿಂದ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಆರಂಭವಾಗಲಿದ್ದು, ನಾಳೆ ದಸರಾ  ಕಾರ್ಯಕ್ರಮವನ್ನು ಸಾಹಿತಿ ಹಂಪ ನಾಗರಾಜಯ್ಯ ಅವರು ಚಾಮುಂಡಿ ಸನ್ನಿಧಿಯಲ್ಲಿ ಬೆಳಗ್ಗೆ  9:15 ರಿಂದ 9ಗಂಟೆ 40 ರ ವರೆಗೆ ಸಲ್ಲೋ ಬ್ರಾಹ್ಮಿ ಮಹೂರ್ತದಲ್ಲಿ  ಪುಷ್ಪಾರರ್ಚನೆ ಸಲ್ಲಿಸೋ ಮೂಲಕ ದಸರಾ ಉದ್ಘಾಟನೆ ಮಾಡಲಿದ್ದಾರೆ.

ನಾಳೆಯಿಂದ ಮುಂದಿನ 9 ದಿನಗಳ ಕಾಲ ಮೈಸೂರು ನಗರ ಅಕ್ಷರಶಃ ಸ್ವರ್ಗದಂತೆ ಕಂಗೊಳಿಸಲಿದೆ. ಈಗಾಗಲೇ ತಾಯಿ ಚಾಮುಂಡಿ ಉತ್ಸವ ಮೂರ್ತಿಯ್ನ ಶುದ್ದಿಕರಣ ಮಾಡಲಾಗಿದ್ದು, ಕೆಂಪು ಬಣ್ಣದ ಸೀರೆಯಿಂದ ಚಾಮುಂಡಿ ತಾಯಿಯ ಉತ್ಸವ ಮೂರ್ತಿ ಕಂಗೊಳಿಸುತ್ತಿದೆ.  ನಾಳೆ ಬೆಳಿಗ್ಗೆ  ತಾಯಿ ಚಾಮುಂಡೇಶ್ವರಿಗೆ ವಿವಿಧ ಅಭಿಷೇಕಗಳನ್ನು ಮಾಡಿ, ಬಳಿಕ ವಿಶೇಷ ಅಲಂಕಾರ ಮಾಡಿ ನಂತರ ಪೂಜಾ ಕೈಂಕರ್ಯಗಳನ್ನು ಮಾಡಲಾಗುತ್ತದೆ. ಈ ಮೂಲಕ ಚಾಮುಂಡಿ ತಾಯಿಯ ಸನ್ನಿದಿಯಲ್ಲಿ ದಸರಾದ ಧಾರ್ಮಿಕ ಕಾರ್ಯಗಳು ಆರಂಭವಾಗುತ್ತವೆ.

10 ದಿನವೂ ಚಾಮುಂಡಿ ತಾಯಿಗೆ ವಿಶೇಷವಾದ ಅಲಂಕಾರ

ಈ ಕುರಿತು ಮಾತನಾಡಿರುವ ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್, ದಸರಾ ನಡೆಯುವ 10 ದಿನವೂ ಚಾಮುಂಡಿ ತಾಯಿಗೆ ವಿಶೇಷವಾದ ಅಲಂಕಾರ ಮಾಡಲಾಗುತ್ತದೆ. ಗುರುವಾರ ಬ್ರಾಹ್ಮೀ ಅಲಂಕಾರ, ಶುಕ್ರವಾರ ಮಹೇಶ್ವರಿ, ಶನಿವಾರ ಕೌಮಾರಿ, ಸೋಮವಾರ ವಾರಾಹಿ, ಮಂಗಳವಾರ ಇಂದ್ರಾಣಿ, ಬುಧವಾರ ಸಿದ್ಧಿ ಧಾತ್ರಿ, ಗುರುವಾರ ಸರಸ್ವತಿ, ಶುಕ್ರವಾರ ಮಹಾಲಕ್ಷ್ಮಿ, ಶನಿವಾರ ಅಸ್ವಾರೋಹಣ ಅಲಂಕಾರದಿಂದ ಚಾಮುಂಡಿ ತಾಯಿ ಕಂಗೊಳಿಸಲಿದ್ದಾಳೆ  ಎಂದರು.

ಚಾಮುಂಡಿ ಬೆಟ್ಟಕ್ಕೂ ಅರಮನೆಗೆ ಅವಿನಾಭಾವ ಸಂಬಂಧ ಇದೆ. ಅರಮನೆ ಮತ್ತು ಚಾಮುಂಡಿ ಬೆಟ್ಟದಲ್ಲಿ ಒಂದೇ ರೀತಿ ಪೂಜೆ ನಡೆಯುತ್ತೆ. ಮಹರಾಜರು ಅರಮನೆಯಲ್ಲಿ ದರ್ಬಾರ್ ಮಾಡುತ್ತಾರೆ. ಅದೇ ರೀತಿ ತಾಯಿ ಚಾಮುಂಡೇಶ್ವರಿ ದೇವಾಲಯದಲ್ಲಿ ದರ್ಬಾರ್ ನಡೆಸಲಾಗುತ್ತದೆ. ಸಂಜೆ 5.30ಕ್ಕೆ ದರ್ಬಾರ್ ನಡೆಯುತ್ತದೆ. ಸಾರ್ವಜನಿಕರು ಕೂಡ ಅಮ್ಮನವರ ದರ್ಬಾರ್ ವೀಕ್ಷಣೆ ಮಾಡಬಹುದು ಎಂದು ತಿಳಿಸಿದರು.

Key words: mysore dasara, Chamundi, Utsav Murti, red saree