ಮೈಸೂರು,ಅಕ್ಟೋಬರ್,14,2021(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಐತಿಹಾಸಿಕ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ನಾಳೆ ನಡೆಯಲಿರುವ ಜಂಬೂ ಸವಾರಿ ,ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿ ವಿರಾಜಮಾನಳಾಗಲಿದ್ದಾಳೆ. ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಉತ್ಸವ ಮೂರ್ತಿ ಅರಮನೆಯತ್ತ ಹೊರಡಲಿದೆ.
7.40ರಿಂದ 8.00 ಒಳಗೆ ಸಲ್ಲುವ ಶುಭ ಲಗ್ನದಲ್ಲಿ ಚಾಮುಂಡಿ ಬೆಟ್ಟದಿಂದ ಈ ಮೆರವಣಿಗೆ ಹೊರಡಲಿದ್ದು, ಬಳಿಕ ಕುರಬಾರಹಳ್ಳಿ ಇಟ್ಟಿಗೆಗೂಡು ಗ್ರಾಮಸ್ಥರು ಸಾಂಪ್ರದಾಯಿಕ ಪೂಜೆ ಸಲ್ಲಿಕೆ ಮಾಡಲಿದ್ದಾರೆ.
ನಂತರ ಉತ್ಸವ ಮೂರ್ತಿ ಅರಮನೆ ಪ್ರವೇಶ ಮಾಡಿಲಿದ್ದು, ಅರಮನೆ ಆಡಳಿತ ಮಂಡಳಿ ಸಂಪ್ರದಾಯಿಕವಾಗಿ ಉತ್ಸವ ಮೂರ್ತಿಯನ್ನ ಬರಮಾಡಿಕೊಳ್ಳಲಿದ್ದಾರೆ. ಚಾಮುಂಡೇಶ್ವರಿ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಸೇರುವ ಸಾಧ್ಯತೆ ಇದೆ.
Key words: Mysore –dasara-Countdown – Jumbo ride